ETV Bharat / bharat

ಅಪಾಯದಲ್ಲಿ ಅಸ್ಸಾಂನ ಆಮೆ ಪ್ರಭೇದ: ತುರ್ತಾಗಿ ಆಗಬೇಕಿದೆ ಸಂರಕ್ಷಣಾ ಕಾರ್ಯ - TURTLE CONSERVATION - TURTLE CONSERVATION

ಅಸ್ಸಾಂನಲ್ಲಿ ಕಂಡು ಬರುವ ಆಮೆ ಪ್ರಭೇದ ಅಳಿವಿನಂಚಿಗೆ ಸಿಲುಕಿರುವ ಬಗ್ಗೆ ಪರಿಸರ ವಿಜ್ಞಾನಿ ಡಾ. ಜಯಾದಿತ್ಯ ಪುರ್ಕಾಯಸ್ಥ ಮಾಹಿತಿ ನೀಡಿದ್ದಾರೆ.

ಅಪಾಯದಲ್ಲಿ ಅಸ್ಸಾಂನ ಆಮೆ ಪ್ರಭೇದ: ತುರ್ತಾಗಿ ಆಗಬೇಕಿದೆ ಸಂರಕ್ಷಣಾ ಕಾರ್ಯ
ಅಪಾಯದಲ್ಲಿ ಅಸ್ಸಾಂನ ಆಮೆ ಪ್ರಭೇದ: ತುರ್ತಾಗಿ ಆಗಬೇಕಿದೆ ಸಂರಕ್ಷಣಾ ಕಾರ್ಯ (ETV Bharat)
author img

By ETV Bharat Karnataka Team

Published : May 14, 2024, 7:49 PM IST

ಗುವಾಹಟಿ : ಮಾನವ ಜನಾಂಗವು ತನ್ನ ಸ್ವಂತ ಲಾಭಕ್ಕಾಗಿ, ಆರಾಮದಾಯಕ ಮತ್ತು ಸಂತೋಷದ ಜೀವನ ನಡೆಸಲು ಪ್ರಕೃತಿ, ಜೀವಿಗಳು, ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯ ಮೇಲೆ ದೌರ್ಜನ್ಯ ಎಸಗುತ್ತಿರುವುದು ಗೊತ್ತಿರುವ ಸಂಗತಿ. ಆದರೆ, ಮಾನವನ ಇಂಥ ಕ್ರೂರ ನಡತೆಯು ಮಾನವ ಕುಲಕ್ಕೇ ಕಂಟಕಪ್ರಾಯವಾಗುತ್ತಿರುವುದು ಸತ್ಯ. ಭೂಮಿಯ ಮೇಲಿನ ಜೀವವೈವಿಧ್ಯತೆಗಳನ್ನು ಸಂರಕ್ಷಿಸಲು ಅಗತ್ಯವಾದ ಅನೇಕ ಜೀವ ಪ್ರಭೇದಗಳು ಮಾನವನ ಕ್ರಿಯೆಗಳಿಂದ ಅಪಾಯಕ್ಕೀಡಾಗಿರುವುದು ಬಹಳ ಆತಂಕಕಾರಿ ಸಂಗತಿಯಾಗಿದೆ.

ಅಪಾಯದಲ್ಲಿ ಅಸ್ಸಾಂನ ಆಮೆ ಪ್ರಭೇದ: ತುರ್ತಾಗಿ ಆಗಬೇಕಿದೆ ಸಂರಕ್ಷಣಾ ಕಾರ್ಯ
ಅಪಾಯದಲ್ಲಿ ಅಸ್ಸಾಂನ ಆಮೆ ಪ್ರಭೇದ: ತುರ್ತಾಗಿ ಆಗಬೇಕಿದೆ ಸಂರಕ್ಷಣಾ ಕಾರ್ಯ (ETV Bharat)

ವಾಸ್ತವವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಆಮೆಗಳು ಕೂಡ ಸೇರಿವೆ. ಜೀವವೈವಿಧ್ಯತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಆಮೆಗಳ ಅಸ್ತಿತ್ವವು ಇಂದು ಅಪಾಯದಲ್ಲಿದೆ. ವಿಶ್ವಾದ್ಯಂತ 365 ಜಾತಿಯ ಆಮೆಗಳಿದ್ದು, ಅವುಗಳಲ್ಲಿ 34 ಭಾರತದಲ್ಲಿವೆ. ಇವುಗಳ ಪೈಕಿ 21 ಜಾತಿಯ ಪ್ರಭೇದದ ಆಮೆಗಳು ಅಸ್ಸಾಂನಲ್ಲಿ ಕಂಡು ಬರುತ್ತವೆ.

ಈ ಆಮೆಗಳ ಬಗ್ಗೆ ಪರಿಸರ ವಿಜ್ಞಾನಿ ಡಾ. ಜಯಾದಿತ್ಯ ಪುರ್ಕಾಯಸ್ಥ ಅವರು ಈಟಿವಿ ಭಾರತ್​ಗೆ ವಿವರವಾದ ಮಾಹಿರಿಗಳನ್ನು ನೀಡಿದ್ದಾರೆ. ಆಮೆಗಳ ಅಧ್ಯಯನ, ಸಂಶೋಧನೆ ಮತ್ತು ಸಂರಕ್ಷಣೆಗೆ ಕ್ರಮ ಕೈಗೊಳ್ಳುತ್ತಿರುವ ಹೆಲ್ಪ್ ಅರ್ಥ್ ಸಂಪಾದಕ ಡಾ. ಜಯಾದಿತ್ಯ ಪುರ್ಕಾಯಸ್ಥ ಅವರೊಂದಿಗೆ ಈಟಿವಿ ಭಾರತ್ ವಿಶೇಷ ಸಂದರ್ಶನ ನಡೆಸಿದ್ದು, ಅದರ ಪಠ್ಯ ಇಲ್ಲಿದೆ.

ಆಮೆಗಳ ಅಳಿವಿಗೆ ಕಾರಣಗಳು: ಡಾ. ಜಯಾದಿತ್ಯ ಪುರ್ಕಾಯಸ್ಥರ ಪ್ರಕಾರ ಅಸ್ಸಾಂ ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚು ಜೀವ ವೈವಿಧ್ಯತೆಯನ್ನು ಹೊಂದಿದೆ. ಎಲ್ಲ ಆಮೆಗಳು ಮತ್ತು ಅದರ ಪ್ರಭೇದಗಳ ಅಳಿವಿನ ಅರ್ಧದಷ್ಟು ಅಪಾಯದೊಂದಿಗೆ ಅವು ವಿಶ್ವದ ಅತ್ಯಂತ ಅಳಿವಿನಂಚಿನಲ್ಲಿರುವ ಪ್ರಾಣಿ ಗುಂಪುಗಳಲ್ಲಿ ಒಂದಾಗಿದೆ. ಆವಾಸಸ್ಥಾನದ ನಷ್ಟ, ಮುಖ್ಯವಾಗಿ ಜಲಮೂಲಗಳ ನಾಶ, ಮಾನವರು ಅದರ ಮೊಟ್ಟೆಗಳನ್ನು ಆಹಾರವಾಗಿ ಬಳಸುವುದು, ಅಭಿವೃದ್ಧಿ ಚಟುವಟಿಕೆಗಳಿಂದಾಗಿ ನದಿಯ ದಡದಲ್ಲಿ ಆವಾಸಸ್ಥಾನದ ನಷ್ಟ ಇತ್ಯಾದಿಗಳು ಆಮೆಗಳ ಜನಸಂಖ್ಯೆಗೆ ಪ್ರಮುಖ ಅಪಾಯಗಳಾಗಿವೆ ಎಂದು ಅವರು ಹೇಳಿದರು.

ಆಮೆಗಳ ಜೀವಕ್ಕೆ ಎದುರಾದ ಹೊಸ ಅಪಾಯಗಳು: "ವಿಶೇಷವಾಗಿ ಮಠಗಳು ಮತ್ತು ದೇವಾಲಯಗಳ ಕೊಳಗಳಲ್ಲಿ ವಾಸಿಸುವ ಹಾಗೂ ಅಸ್ಸಾಂನಲ್ಲಿ ಈಗಲೂ ಉಳಿದುಕೊಂಡಿರುವ ಆಮೆಗಳ ಸಂತತಿಗೆ ಹೊಸ ಅಪಾಯ ಎದುರಾಗಿದೆ. ರೆಡ್ ಇಯರ್ಡ್ ಸ್ಲೈಡರ್ ಆಮೆ ಎಂಬ ಆಕ್ರಮಣಕಾರಿ ಜಾತಿಯ ಆಮೆಯನ್ನು ಇಲ್ಲಿಗೆ ತಂದಿರುವುದು ಅಸ್ಸಾಂನ ಉಳಿದ ಆಮೆಗಳಿಗೆ ಅಪಾಯ ಉಂಟು ಮಾಡಿದೆ. ವಿದೇಶದಿಂದ ತರಲಾಗುವ ಈ ಪ್ರಭೇದದ ಆಮೆಗಳು ವಿಧ್ವಂಸಕ ಜೀವಿಗಳಾಗಿವೆ. ಈ ಜಾತಿಯ ಆಮೆಗಳನ್ನು ಸಾಮಾನ್ಯವಾಗಿ ಅಕ್ವೇರಿಯಂನಲ್ಲಿ ಸಾಕಲಾಗುತ್ತದೆ. ಆದರೆ ಅವುಗಳನ್ನು ಈ ಕೊಳಗಳಲ್ಲಿ ಬಿಡಲಾಗಿದೆ. ಈ ಕಾರಣದಿಂದಾಗಿ ಈ ಆಕ್ರಮಣಕಾರಿ ಸ್ವಭಾವದ ಆಮೆಗಳು ಇತರ ಆಮೆಗಳನ್ನು ಭಕ್ಷಿಸುವ ಮೂಲಕ ಅವುಗಳನ್ನು ನಾಶಪಡಿಸಲಾರಂಭಿಸಿವೆ. ಅವುಗಳ ಸರಬರಾಜು ಮತ್ತು ನಂತರ ಕೊಳಗಳಲ್ಲಿ ಬಿಡುಗಡೆ ಮಾಡುವುದನ್ನು ತಕ್ಷಣವೇ ತಡೆಯಬೇಕಿದೆ. ಈ ಆಮೆಗಳು ಜೀವವೈವಿಧ್ಯತೆಗೆ ಪ್ರತಿಕೂಲವಾಗಿವೆ." ಎನ್ನುತ್ತಾರೆ ಡಾ.ಜಯಾದಿತ್ಯ ಪುರ್ಕಾಯಸ್ಥ.

ಪರಿಸರ ವ್ಯವಸ್ಥೆಗೆ ಆಮೆಗಳ ಕೊಡುಗೆ: ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಆಮೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಪುರ್ಕಾಯಸ್ಥ ಹೇಳುತ್ತಾರೆ. ಇದು ಪೌಷ್ಠಿಕಾಂಶದ ಚಕ್ರಕ್ಕೆ ಕೊಡುಗೆ ನೀಡುತ್ತದೆ ಮತ್ತು ಪರಿಸರ ಆರೋಗ್ಯದ ಸೂಚಕವಾಗಿ ಕಾರ್ಯನಿರ್ವಹಿಸುತ್ತದೆ. ಅವುಗಳ ಜನಸಂಖ್ಯಾ ಸಂರಕ್ಷಣೆಯು ಜೀವವೈವಿಧ್ಯ ಸಂರಕ್ಷಣೆಗೆ ಮಾತ್ರವಲ್ಲದೆ ಪರಿಸರ ವ್ಯವಸ್ಥೆಯ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಅತ್ಯಗತ್ಯ.

ದೇವಾಲಯಗಳ ಕೊಳಗಳಲ್ಲಿ ಆಮೆಗಳ ಸಂರಕ್ಷಣೆ: ಅಸ್ಸಾಂನಲ್ಲಿ ಅಪರೂಪದ ಜಾತಿಯ ಆಮೆಗಳನ್ನು ಸಂರಕ್ಷಿಸುವಲ್ಲಿ ಹಿಂದೂ ದೇವಾಲಯಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಈ ನಿಟ್ಟಿನಲ್ಲಿ ಮಾತನಾಡಿದ ಜಯಾದಿತ್ಯ ಪುರ್ಕಾಯಸ್ಥ- "ನಾವು ಹೆಲ್ಪ್ ಅರ್ಥ್ ಎಂಬ ಎನ್​​ಜಿಒ ಮೂಲಕ ಸಮೀಕ್ಷೆ ನಡೆಸಿದ್ದೇವೆ. ಆಮೆಗಳನ್ನು ಹೊಂದಿರುವ 29 ದೇವಾಲಯಗಳು ಮತ್ತು ಸಮುದಾಯ ಕೊಳಗಳನ್ನು ಪಟ್ಟಿ ಮಾಡಿದ್ದೇವೆ. ಧಾರ್ಮಿಕ ಆಧಾರದ ಮೇಲೆ ಆ ಕೊಳಗಳಲ್ಲಿ ಆಮೆಗಳನ್ನು ರಕ್ಷಿಸಲಾಗಿದೆ. ಆಮೆಗಳು "ಕುರ್ಮಾ ಅವತಾರಗಳ" ರೂಪದಲ್ಲಿ ವಿಷ್ಣುವಿನ ಅವತಾರಗಳು ಎಂದು ಹಿಂದೂಗಳು ನಂಬುತ್ತಾರೆ. ಹೀಗಾಗಿ ಅವರು ಆಮೆಗಳನ್ನು ಗೌರವಿಸುತ್ತಾರೆ. ಈ ಆಮೆಗಳನ್ನು ಸಾಮಾನ್ಯವಾಗಿ ಸರ್ವಶಕ್ತನ ಹೆಸರಿನಲ್ಲಿ ದಾನ ಮಾಡುವ ಭಕ್ತರ ಮೂಲಕ ಈ ಕೊಳಗಳಿಗೆ ಬಿಡಲಾಗುತ್ತದೆ. ನವಜಾತ ಶಿಶುವು ಆಮೆಗಳಂತೆ ದೀರ್ಘಾಯುಷ್ಯ ಪಡೆಯುತ್ತದೆ ಎಂಬ ನಂಬಿಕೆಯೊಂದಿಗೆ ಹೆಚ್ಚಿನ ಭಕ್ತರು ತಮ್ಮ ಕುಟುಂಬದಲ್ಲಿ ಮಗು ಜನಿಸಿದಾಗ ಆಮೆಗಳನ್ನು ಕೊಳಕ್ಕೆ ದಾನ ಮಾಡುತ್ತಾರೆ." ಎಂದು ಹೇಳಿದರು.

ಕೊಳಗಳಲ್ಲಿ ಆಮೆಗಳನ್ನು ಹೊಂದಿರುವ ಪ್ರಮುಖ ದೇವಾಲಯಗಳು: "ದೇವಾಲಯಗಳಿಗೆ ಆಮೆಗಳನ್ನು ದಾನ ಮಾಡುವುದು ಧಾರ್ಮಿಕ ಅಭ್ಯಾಸವಾಗಿರುವುದರಿಂದ, ಅನೇಕ ದೇವಾಲಯಗಳಲ್ಲಿ ಆಮೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗಿದೆ. ಈ ಸಂದರ್ಭದಲ್ಲಿ ಹಯಗ್ರೀವ ಮಾಧವ ದೇವಾಲಯವು ಮೊದಲ ಸ್ಥಾನದಲ್ಲಿದೆ. ಬಿಸ್ವಾನಾಥದ ನಾಗಾ ಶಂಕರ್ ದೇವಾಲಯ ಮತ್ತು ಗುವಾಹಟಿಯ ಉಗ್ರತಾರಾ ದೇವಾಲಯಗಳು ನಂತರದ ಸ್ಥಾನದಲ್ಲಿದ್ದು, ಇಲ್ಲಿ 20 ಜಾತಿಯ ಆಮೆಗಳನ್ನು ಸಂರಕ್ಷಿಸಲಾಗಿದೆ. ಹಯಗ್ರೀವ ಮಾಧವ ದೇವಾಲಯದಲ್ಲಿಯೇ 13 ರಿಂದ 14 ಪ್ರಭೇದಗಳಿವೆ. ದೇವಾಲಯದ ಆವರಣದಲ್ಲಿ ಉಳಿದಿರುವ ಈ ಜೀವಂತ ಆಮೆಗಳ ಸಂರಕ್ಷಣೆಯಲ್ಲಿ ಸಾಕಷ್ಟು ಕೆಲಸ ಮಾಡಬೇಕಾಗಿದೆ ಎಂದು ಪುರ್ಕಾಯಸ್ಥ ಹೇಳುತ್ತಾರೆ.

ದೇವಾಲಯದ ಕೊಳದಲ್ಲಿನ ಆಮೆಗಳಿಗೆ ಎದುರಾಗಿರುವ ಪ್ರಮುಖ ಅಪಾಯಗಳು: "ಈ ದೇವಾಲಯಗಳಲ್ಲಿನ ಕೊಳಗಳು ಕೆಲ ಪ್ರಮುಖ ನ್ಯೂನತೆಗಳನ್ನು ಹೊಂದಿವೆ. ಸೌಂದರ್ಯೀಕರಣದ ಹೆಸರಿನಲ್ಲಿ ಕೊಳಗಳ ಸುತ್ತಲೂ ಪಕ್ಕಾ ಬೇಲಿ ಹಾಕುವುದರಿಂದ ಆಮೆಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೊಟ್ಟೆಗಳನ್ನು ಇಡಲು ಸ್ಥಳದ ಕೊರತೆಯು ಸಂತಾನೋತ್ಪತ್ತಿ ವೈಫಲ್ಯಕ್ಕೆ ಕಾರಣವಾಗಿದೆ. ಅವುಗಳ ಯೋಗಕ್ಷೇಮಕ್ಕೆ ಅಗತ್ಯವಾದ ಸೂರ್ಯನ ಬೆಳಕಿನ ಕೊರತೆಯೂ ಕಳವಳಕಾರಿಯಾಗಿದೆ. ಇದಲ್ಲದೇ ಆಮೆಗಳಿಗೆ ಹಾನಿಕಾರಕವಾದ ರೊಟ್ಟಿ, ಗೋಧಿ, ಲಡ್ಡು ಮುಂತಾದ ನೈಸರ್ಗಿಕವಲ್ಲದ ಆಹಾರವನ್ನು ನೀಡಲಾಗುತ್ತದೆ.

ಆಮೆಗಳನ್ನು ಉಳಿಸುವುದು ಇಂದಿನ ತುರ್ತು ಅಗತ್ಯ: ಜನರು ಆಮೆಗಳನ್ನು ಅಳಿವಿನಂಚಿನಿಂದ ಉಳಿಸಬಹುದು ಎಂದು ಡಾ.ಜಯಾದಿತ್ಯ ಪುರ್ಕಾಯಸ್ಥ ಹೇಳಿದರು. ಇದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಶಾಲಾ ಪಠ್ಯಪುಸ್ತಕಗಳಲ್ಲಿ ಆಮೆಗಳ ಬಗ್ಗೆ ವಿವರವಾಗಿ ಮಾಹಿತಿಗಳನ್ನು ಸೇರಿಸುವುದು ಅವಶ್ಯಕ. ಕೆಂಪು ಕಿವಿಯ ಸ್ಲೈಡರ್ ಆಮೆಗಳಂತಹ ಅಪಾಯಕಾರಿ ಜಾತಿಗಳನ್ನು ಆಮೆ ವಾಸಸ್ಥಾನ ವಲಯಗಳಿಗೆ ಆಮದು ಮಾಡಿಕೊಳ್ಳದಿರುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ಇದನ್ನೂ ಓದಿ : ಕಬ್ಬಿಣಾಂಶ ಭರಿತ ಆಹಾರ ಸೇವನೆಯಿಂದ ಅನೀಮಿಯಾ ತಡೆಗಟ್ಟಲು ಸಾಧ್ಯ: ತಜ್ಞರ ಅಭಿಮತ - Anaemia problem in India

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.