ನವದೆಹಲಿ: ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇಡಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ತಕ್ಷಣವೇ ವಿಚಾರಣೆಗೆ ಕೈಗೊಳ್ಳಲು ದೆಹಲಿ ಹೈಕೋರ್ಟ್ ಸಮ್ಮತಿಸಿದೆ. ವಿಚಾರಣೆ ವರಗೂ ಬಿಡುಗಡೆಗೆ ತಡೆಯನ್ನೂ ನೀಡಿದೆ.
ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರೋಸ್ ಅವೆನ್ಯೂ ನ್ಯಾಯಾಲಯದಿಂದ ರೆಗ್ಯೂಲರ್ ಬೇಲ್ ಪಡೆದಿದ್ದಾರೆ. ಜೂನ್ 20 ರ ರಾತ್ರಿ ರೋಸ್ ಅವೆನ್ಯೂ ಕೋರ್ಟ್‌ನಿಂದ ಆದೇಶ ಹೊರಡಿಸಿದ ಕಾರಣ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಇಡಿ ಹೈಕೋರ್ಟ್ ಮೆಟ್ಟಿಲು ಏರಿರುವುದರಿಂದ, ವಿಚಾರಣೆವರೆಗೂ ಕೇಜ್ರಿವಾಲ್ ಬಿಡುಗಡೆಗೆ ನ್ಯಾಯಾಲಯ ತಡೆ ನೀಡಿದೆ.
ಹೈಕೋರ್ಟ್ ಬಾಗಿಲು ತಟ್ಟಿದ ಇಡಿ: ಸದ್ಯ ಇಡಿ ಹೈಕೋರ್ಟ್ ಬಾಗಿಲು ತಟ್ಟಿದೆ. ಇಡಿ ಮನವಿಯನ್ನು ಹೈಕೋರ್ಟ್ ಕೂಡ ಸ್ವೀಕರಿಸಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಕೇಜ್ರಿವಾಲ್ ಬಿಡುಗಡೆ ತಡೆ ಹಿಡಿಯಲಾಗುತ್ತದೆ. ಜೂನ್ 20 ರಂದು ರೋಸ್ ಅವೆನ್ಯೂ ನ್ಯಾಯಾಲಯವು ಕೇಜ್ರಿವಾಲ್ ಅವರನ್ನು 1 ಲಕ್ಷ ರೂಪಾಯಿಗಳ ಬಾಂಡ್‌ನಲ್ಲಿ ಬಿಡುಗಡೆ ಮಾಡಲು ಆದೇಶಿಸಿತ್ತು. ಸಾಕ್ಷಿ ನಾಶ ಮಾಡದಂತೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಕೇಜ್ರಿವಾಲ್‌ಗೆ ರೋಸ್ ಅವೆನ್ಯೂ ಕೋರ್ಟ್ ಆದೇಶಿಸಿತ್ತು. ಅಗತ್ಯ ಬಿದ್ದಾಗಲೆಲ್ಲ ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಜ್ರಿವಾಲ್‌ಗೆ ಕೋರ್ಟ್ ಸೂಚಿಸಿದೆ.
ಮಾರ್ಚ್ 21 ರಂದು ಕೇಜ್ರಿವಾಲ್‌ಗೆ ಹೈಕೋರ್ಟ್‌ನಿಂದ ಯಾವುದೇ ಮಧ್ಯಂತರ ಪರಿಹಾರ ಸಿಗದಿದ್ದಾಗ, ಆ ದಿನ ಸಂಜೆ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತು. ಮೇ 10 ರಂದು ಸುಪ್ರೀಂಕೋರ್ಟ್ ಅರವಿಂದ್ ಕೇಜ್ರಿವಾಲ್‌ಗೆ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿತ್ತು ಮತ್ತು ಜೂನ್ 2 ರಂದು ಶರಣಾಗುವಂತೆ ಆದೇಶಿಸಿತ್ತು. ಕೇಜ್ರಿವಾಲ್ ಜೂನ್ 2 ರಂದು ಶರಣಾಗಿದ್ದರು.
ಓದಿ: ರಾಹುಲ್ ಗಾಂಧಿ ವಿರುದ್ಧ ಅಪಪ್ರಚಾರ ಆರೋಪ; ಯೂಟ್ಯೂಬರ್ ಅಜಿತ್ ಭಾರ್ತಿಗೆ ನೋಟಿಸ್ - Police Notice to Ajit Bharti