ನವದೆಹಲಿ: ನೆರೆಯ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನ ಭಾರತದ ಮಗ್ಗಲು ಮುಳ್ಳು ಎಂಬುದು ಸರ್ವವಿಧಿತ. ಗಡಿಯಲ್ಲಿ ಎರಡೂ ರಾಷ್ಟ್ರಗಳು ಎಷ್ಟೇ ಸುಮ್ಮನಿದ್ದರೂ, ಒಂದಲ್ಲೊಂದು ರೀತಿಯಲ್ಲಿ ಚಕಾರ ಎತ್ತುತ್ತಿರುತ್ತವೆ. ಪೂರ್ವ ಲಡಾಖ್ನಲ್ಲಿ ಈಗಿನ ಪರಿಸ್ಥಿತಿಯ ಬಗ್ಗೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
"ಪೂರ್ವ ಲಡಾಖ್ನ ಭಾರತ-ಚೀನಾ ಗಡಿಯಲ್ಲಿನ ಪ್ರಸ್ತುತ ಪರಿಸ್ಥಿತಿಯು ಸ್ಥಿರವಾಗಿದೆಯಾದರೂ, ಸೂಕ್ಷ್ಮವಾಗಿದೆ. ಬಿಗುವಿನ ವಾತಾವರಣ ಮುಂದುವರಿದಿದೆ. ಈ ಪ್ರದೇಶದಲ್ಲಿ ಎಲ್ಲವೂ ಶಾಂತವಾಗಿದ್ದರೂ, ಅನಿಶ್ಚಿತತೆ ಇದೆ" ಎಂದು ಅವರು ತಿಳಿಸಿದರು.
#WATCH | At the Chanakya Defence Dialogue, Indian Army chief Gen Upendra Dwivedi says, " ...as far as china is concerned, it has been intriguing our minds for quite some time. with china, you have to compete, cooperate, coexist, confront, and contest... so what's the situation… pic.twitter.com/p4zzuuQT4y
— ANI (@ANI) October 1, 2024
ಇಲ್ಲಿ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಚೀನಾ ಮತ್ತು ಭಾರತ ನಡುವಣ ಮಿಲಿಟರಿ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, "ಗಡಿ ಪ್ರದೇಶದಲ್ಲಿ ಪರಿಸ್ಥಿತಿ 2020ಕ್ಕೂ ಮೊದಲು ಇದ್ದಂತೆ ಇಲ್ಲ. ಸೂಕ್ಷ್ಮವಾಗಿದೆ. ಮೊದಲಿನ ಪರಿಸ್ಥಿತಿಯನ್ನು ಗಡಿಯಲ್ಲಿ ಪುನಃ ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದರು.
"ಗಡಿಯಲ್ಲಿ ನಾವು ಚೀನಾದೊಂದಿಗೆ ಸ್ಪರ್ಧಿಸಬೇಕು, ಸಹಕರಿಸಬೇಕು, ಸಹಬಾಳ್ವೆ ನಡೆಸಬೇಕು. ಜೊತೆಗೆ ಎದುರಿಸಬೇಕು. ರಾಜತಾಂತ್ರಿಕ ಹಂತದ ಮಾತುಕತೆಗಳು ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟನ್ನು ಬಗೆಹರಿಸಲು ಪ್ರಯತ್ನ ಸಾಗಿವೆ. ಆದರೆ, ವಾಸ್ತವ ಸ್ಥಿತಿಯ ಆಧಾರದ ಮೇಲೆ ಎರಡೂ ಸೇನೆಯ ಕಮಾಂಡರ್ಗಳು ನಿರ್ಣಯ ತೆಗೆದುಕೊಳ್ಳಲಿದ್ದಾರೆ" ಎಂದು ಸ್ಪಷ್ಟಪಡಿಸಿದರು.
"ಗಡಿಯಲ್ಲಿ ಬಫರ್ ವಲಯಗಳನ್ನು ರಚಿಸಲಾಗಿದೆ. ಗಸ್ತು ತಿರುಗುವುದನ್ನು ಹೆಚ್ಚಿಸಲಾಗಿದೆ. ಇಲ್ಲಿಯವರೆಗೆ ಪರಿಸ್ಥಿತಿಯು ಸಹಜತೆಯಂತೆ ಸೂಕ್ಷ್ಮವಾಗಿದೆ. ಯಾವುದೇ ರೀತಿಯ ಅನಿಶ್ಚಿತತೆಯನ್ನು ಎದುರಿಸಲು ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ಎರಡೂ ರಾಷ್ಟ್ರಗಳ ನಡುವಿನ ನಂಬಿಕೆಯ ವಿಷಯವು ಅತಿದೊಡ್ಡ ಸವಾಲು" ಎಂದು ಜನರಲ್ ದ್ವಿವೇದಿ ಹೇಳಿದರು.
ರಾಜತಾಂತ್ರಿಕ ಮಾತುಕತೆಗಳು: ಚೀನಾ ಮತ್ತು ಭಾರತದ ನಡುವಿನ ಗಡಿ ಬಿಕ್ಕಟ್ಟನ್ನು ಸಕಾರಾತ್ಮಕವಾಗಿ ಮುಗಿಸಿಕೊಳ್ಳಲು ಎರಡೂ ರಾಷ್ಟ್ರಗಳು ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿವೆ. ಅನಿಶ್ಚಿತತೆಗೆ ತೆರೆ ಎಳೆಯಲು ಜುಲೈ ಮತ್ತು ಆಗಸ್ಟ್ನಲ್ಲಿ ಎರಡು ಸುತ್ತಿನ ಸಂವಾದಗಳು ನಡೆದಿವೆ. ಪೂರ್ವ ಲಡಾಖ್ನ ಎಲ್ಎಸಿ ಬಳಿ ಉಭಯ ರಾಷ್ಟ್ರಗಳ ನಡುವಿನ ಮಿಲಿಟರಿ ಬಿಕ್ಕಟ್ಟು 2020ರ ಮೇ ತಿಂಗಳಲ್ಲಿ ಆರಂಭವಾಗಿತ್ತು. ಅಲ್ಲಿಂದ ಮಾತುಕತೆಗಳು ನಡೆದರೂ ಯಾವುದೇ ಫಲಪ್ರದ ಕಂಡಿಲ್ಲ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ನಲ್ಲಿ ತಿರುಪತಿ ಲಡ್ಡು ಕಲಬೆರಕೆ ಕೇಸ್: ತನಿಖೆ ನಿಲ್ಲಿಸಿದ SIT - Tirupati Laddu Adulteration Case