ETV Bharat / bharat

CPI (M)ಗೆ ಮತ್ತೊಂದು ಆಘಾತ; ಬಿಜೆಪಿ ಸೇರಿದ ಮಧು ಮುಲ್ಲಸ್ಸೆರಿ

ಬಿಜೆಪಿ ತಿರುವನಂತಪುರಂ ಜಿಲ್ಲಾ ಅಧ್ಯಕ್ಷರಾದ ವಿವಿ ರಾಜೇಶ್​ ಮತ್ತು ಇತರ ಪಕ್ಷದ ನಾಯಕರು ಇಂದು ಮುಂಜಾನೆ ಸಿಪಿಐ (ಎಂ) ನಾಯಕ ಮುಲ್ಲಸ್ಸೆರಿಯನ್ನು ಭೇಟಿಯಾದರು.

another-long-term-cpi-m-leader-exits-party-likely-to-join-bjp
ಸಿಪಿಐ (ಎಂ)ಗೆ ಮತ್ತೊಂದು ಆಘಾತ; ಬಿಜೆಪಿ ಸೇರಿದ ಮಧು ಮುಲ್ಲಸ್ಸೆರಿ (IANS)
author img

By PTI

Published : 18 hours ago

ತಿರುವನಂತಪುರಂ: ಆಲಪ್ಪುಳದ ಸಿಪಿಐ(ಎಂ) ನಾಯಕರೊಬ್ಬರು ಬಿಜೆಪಿ ಸೇರಿದ ಬೆನಲ್ಲೇ ಇದೀಗ ಮತ್ತೊಬ್ಬ ನಾಯಕರು ಅದೇ ಹಾದಿಯಲ್ಲಿ ಸಾಗಿದ್ದಾರೆ. ಪಕ್ಷದ ಸಮಾವೇಶದಲ್ಲಿ ಉಂಟಾದ ಕಲಹದ ಬೆನ್ನಲ್ಲೇ ಇದೀಗ ಮಧು ಮುಲ್ಲಸ್ಸೆರಿ ಪಕ್ಷ ತೊರೆದಿದ್ದಾರೆ. ಇವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಅಮಾನತು ಮಾಡಲಾಗಿದೆ.

ಈ ಕುರಿತು ಮಾತನಾಡಿರುವ ಸಿಪಿಐ (ಎಂ) ನಾಯಕರು, ಮುಲ್ಲಸ್ಸೆರಿ ಸಾರ್ವಜನಿಕವಾಗಿ ಪಕ್ಷದ ತತ್ವಕ್ಕೆ ವಿರೋಧಿಯಾಗಿ ನಡೆದುಕೊಂಡ ಹಿನ್ನೆಲೆ ಅವರನ್ನು ಪಕ್ಷದಿಂದ ಹೊರ ಹಾಕಲಾಗಿದೆ ಎಂದಿದ್ದಾರೆ. ಸಿಪಿಐ (ಎಂ) ಪಕ್ಷದಲ್ಲಿ 42 ವರ್ಷಗಳ ಕಾಲ ದುಡಿದ ಮತ್ತು ಮಂಗಳಪುರಂನಲ್ಲಿ ಸಿಪಿಐ(ಎಂ) ಮಾಜಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಮುಲ್ಲಸ್ಸೆರಿ, ಪಕ್ಷ ತೊರೆಯಲು ಶಾಸಕ ಮತ್ತು ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ ಜಾಯ್​ ಕಾರಣ ಎಂದು ಆರೋಪಿಸಿದ್ದಾರೆ. ಸಂಕಷ್ಟ ಸಂದರ್ಭ ಸೇರಿದಂತೆ ಜಿಲ್ಲಾ ಕಾರ್ಯದರ್ಶಿ ವಿ ಜಾಯ್​ ಜೊತೆಯಲ್ಲಿಯೂ ಕೂಡ ಪಕ್ಷಕ್ಕಾಗಿ 42 ವರ್ಷಗಳ ಕಾಲ ದುಡಿದಿದ್ದೆ. ಆದರೆ, ಇದೀಗ ಪಕ್ಷ ತೊರೆಯುತ್ತಿದ್ದೇನೆ ಎಂದಿದ್ದಾರೆ.

ಟಿವಿ ಚಾನಲ್​ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಮತ್ತು ಬಿಜೆಪಿ ಇಬ್ಬರು ನಾಯಕರು ತಮ್ಮ ಸಂಪರ್ಕದಲ್ಲಿದ್ದು, ಯಾವ ಪಕ್ಷ ಸೇರುವುದು ಎಂಬ ಕುರಿತು ಡಿ. 3ರಂದು 11ಕ್ಕೆ ಘೋಷಿಸಲಾಗುವುದು ಎಂದಿದ್ದರು. ಬಿಜೆಪಿ ತಿರುವನಂತಪುರಂ ಜಿಲ್ಲಾ ಅಧ್ಯಕ್ಷರಾದ ವಿವಿ ರಾಜೇಶ್​ ಮತ್ತು ಇತರ ಪಕ್ಷದ ನಾಯಕರು ಇಂದು ಮುಂಜಾನೆ ಸಿಪಿಐ (ಎಂ) ನಾಯಕ ಮುಲ್ಲಸ್ಸೆರಿಯನ್ನು ಭೇಟಿಯಾದರು.

ಜಾಯ್​ ಅವರ ನಡೆಗೆ ಬೇಸತ್ತು ಈ ನಿರ್ಧಾರಕ್ಕೆ ಬರಲಾಗಿದೆ . ಪಕ್ಷದಲ್ಲಿ ಅವರಿಗೆ ತಮ್ಮ ಹಿತಾಸಕ್ತಿ ಮತ್ತು ಸ್ಥಾನ ಮಾತ್ರವೇ ಮುಖ್ಯವಾಗಿದ್ದು, ಜಿಲ್ಲಾ ಮಟ್ಟದಲ್ಲಿ ಪಕ್ಷದಲ್ಲಿ ವಿಭಜನೆ ಕಾರ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ನವೆಂಬರ್​ 30ರಂದು ಆಲಪುಳ್ಳ ಸಮಿತಿ ಮತ್ತು ಕೃಷ್ಣಪುರಂ ವಿಭಾಗದ ಜಿಲ್ಲಾ ಪಂಚಾಯತ್​ ಸದಸ್ಯ ಪ್ರತಿನಿಧಿಯಾಗಿದ್ದ ಸಿಪಿಐ (ಎಂ) ಬಿಪಿನ್​ ಸಿ ಬಾಬು ಬಿಜೆಪಿ ಸೇರಿದ್ದರು. ಪಕ್ಷ ತೊರೆದ ಅವರು ಸಿಪಿಐ (ಎಂ) ತನ್ನ ಜಾತ್ಯತೀತತೆ ನಿಲುವು ಕಳೆದುಕೊಂಡ ಹಿನ್ನೆಲೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು. ಅಲ್ಲದೇ, ಕೆಲವು ಕೋಮು ಬಲಗಳು ಪಕ್ಷವನ್ನು ಮುನ್ನಡೆಸುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಹಿರಿಯ ನಾಯಕ ಜಿ ಸುಧಾಕರನ್​ ಕೂಡ ಪಕ್ಷದೊಳಗಿನ ಕಾರ್ಯದ ಬಗ್ಗೆ ಸಮಾವೇಶದಲ್ಲಿ ಅಸಮಾಧಾನ ಹೊರಹಾಕಿದ್ದರು.

ಇದನ್ನೂ ಓದಿ: ಮೃತ ಶಾಸಕರ ಪುತ್ರನ ಸರ್ಕಾರಿ ನೌಕರಿ ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಕೇರಳ ಸರ್ಕಾರಕ್ಕೆ ಹಿನ್ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.