ETV Bharat / bharat

ಪ್ರಿವೆಡ್ಡಿಂಗ್​ ಸಮಾರಂಭದಲ್ಲಿ ದುಬಾರಿ ವಾಚ್​ ಧರಿಸಿದ್ದ ಅನಂತ್​ ಅಂಬಾನಿ:​ ಬೆಲೆ ಎಷ್ಟು ಗೊತ್ತಾ?

author img

By ETV Bharat Karnataka Team

Published : Mar 5, 2024, 6:40 PM IST

Updated : Mar 7, 2024, 10:47 AM IST

ವಿವಾಹಪೂರ್ವ ಸಮಾರಂಭದಲ್ಲಿ ಅನಂತ್​ ಅಂಬಾನಿ ಧರಿಸಿದ್ದ ದುಬಾರಿ ವಾಚ್​ ಕಂಡು ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​ ಜುಕರ್​ ಬರ್ಗ್​ ಹಾಗೂ ಪತ್ನಿ ಪ್ರಿಸ್ಸಿಲ್ಲಾ ಚೆನ್​ ಆಶ್ಚರ್ಯಚಕಿತರಾದರು.

Anant Ambani wore expensive watch in pre-wedding ceremony: know the price?
ಪ್ರಿವೆಡ್ಡಿಂಗ್​ ಸಮಾರಂಭದಲ್ಲಿ ದುಬಾರಿ ವಾಚ್​ ಧರಿಸಿದ್ದ ಅನಂತ್​ ಅಂಬಾನಿ:​ ಬೆಲೆ ಎಷ್ಟು ಗೊತ್ತಾ!

ಮುಂಬೈ: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿರುವ ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಅವರು ಇತ್ತೀಚೆಗೆ ತಮ್ಮ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ವಿವಾಹಪೂರ್ವ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಸಮಾರಂಭಕ್ಕೆ ಭಾರತೀಯ ಸಿನಿಮಾ ಸೆಲೆಬ್ರಿಟಿಗಳಿಂದ ಹಿಡಿದು, ವಿದೇಶಿ ತಾರೆಯರನ್ನು ಕರೆಸಿದ್ದರು. ಮಾರ್ಚ್​ 1ರಿಂದ 3ರವರೆಗೆ ನಡೆದ ಸಮಾರಂಭ ದೇಶವಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಸುದ್ದಿ ಮಾಡಿತ್ತು. ಜೊತೆಗೆ ಅನಂತ್​ ಅಂಬಾನಿ ಧರಿಸಿದ್ದಂತಹ ವಾಚ್​ ಬೆಲೆಯಂತೂ ಗೊತ್ತಾದ ಮೇಲೆ, ಆ ಐಷಾರಾಮಿ ವಾಚ್​ ಬಗ್ಗೆಯೇ ಚರ್ಚೆಯಾಗುತ್ತಿದೆ.

ವಾಚ್​ಗೆ ಆಕರ್ಷಿತರಾದ ಮಾರ್ಕ್​ ಜುಕರ್​ಬರ್ಗ್​, ಪತ್ನಿ ಪ್ರಿಸ್ಸಿಲ್ಲಾ ಚೆನ್​: ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆ ಮೆಟಾ (ಫೇಸ್​ಬುಕ್​- ಇನ್​ಸ್ಟಾಗ್ರಾಂ) ಸಂಸ್ಥಾಪಕ ಮಾರ್ಕ್​ ಜುಕರ್​ ಬರ್ಗ್​ ಕೂಡ ಅನಂತ್​ ಅಂಬಾನಿ ಧರಿಸಿದ್ದ ವಾಚ್​ ನೋಡಿ ಕಣ್ಣರಳಿಸಿದ್ದಾರೆ. ಜುಕರ್​ ಮಾತ್ರವಲ್ಲದೇ ಅವರ ಪತ್ನಿ ಪ್ರಿಸ್ಸಿಲ್ಲಾ ಚೆನ್​ ಅವರೂ ಅನಂತ್​ ವಾಚ್​ ಕಂಡು ಮೂಕವಿಸ್ಮಿತರಾಗಿದ್ದಾರೆ. ವಾಚ್​ ಬಗ್ಗೆ ಮಾರ್ಕ್​ ಜುಕರ್​ ಬರ್ಗ್​, ಪ್ರಿಸ್ಸಿಲ್ಲಾ ಹಾಗೂ ಅನಂತ್​ ಅಂಬಾನಿ ನಡುವಿನ ಸಂಭಾಷಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ವಿಡಿಯೋದಲ್ಲಿ ಅನಂತ್​ ಅವರು ತಾವು ಧರಿಸಿರುವ ಐಷಾರಾಮಿ ವಾಚ್​ ಅನ್ನು ರಿಚರ್ಡ್​ ಮಿಲ್ಲೆ ವಾಚ್​ ಕಂಪನಿಯವರು ಸಿದ್ಧಪಡಿಸಿರುವುದಾಗಿ ಹೇಳುತ್ತಾರೆ. ಆಗ ಮಾರ್ಕ್​ ಜುಕರ್​ಬರ್ಗ್​, ಹೌದು ರಿಚರ್ಡ್​ ಮಿಲ್ಲೆ ತುಂಬಾ ಸುಂದರವಾದ ಕೈಗಡಿಯಾರವನ್ನು ತಯಾರಿಸುತ್ತಾರೆ ಎಂದು ಹೇಳುತ್ತಾರೆ.

ಅನಂತ್​ ಐಷಾರಾಮಿ ವಾಚ್​ ಬೆಲೆ ಎಷ್ಟು?: ಈ ವಾಚ್​ನ ಬೆಲೆ ಎಷ್ಟು ಎಂದು ಕೇಳಿದರೆ ನೀವು ಒಂದು ಕ್ಷಣ ತಲೆ ತಿರುಗೋದಂತೂ ಗ್ಯಾರಂಟಿ. ಈ ಒಂದು ವಾಚ್​ನ ಬೆಲೆ ಎರಡು ಐಷಾರಾಮಿ ರಾಲ್ಸ್​ ರಾಯ್ಸ್​ ಕಾರುಗಳನ್ನು ಖರೀದಿಸಬಹುದು. ರೋಲ್ಸ್​ರಾಯ್​ ಕಾರಿನ ಬೆಲೆ 6 ರಿಂದ 7 ಕೋಟಿ ರೂಪಾಯಿ. ಅನಂತ್​ ಅವರು ಧರಿಸಿದ್ದ ವಾಚ್​ ಬೆಲೆ 15 ಕೋಟಿ ರೂಪಾಯಿ.

ಮಾಧ್ಯಮಗಳ ವರದಿ ಪ್ರಕಾರ, ಈ ಗಡಿಯಾರವನ್ನು 2021ರಲ್ಲಿ ಲಾಂಚ್​ ಮಾಡಲಾಯಿತು. ಈ ಗಡಿಯಾರವು ರೂಬೀಸ್​ ಹಾಗೂ ಬ್ಲೂ ಸಫೈರ್ಸ್​ ಬಣ್ಣಗಳಲ್ಲಿ ಮಾತ್ರ ಬರುತ್ತದೆ. ಅನಂತ್​ ಅಂಬಾನಿ ಅವರು ಧರಿಸಿರುವ ವಾಚ್​ 40.5 ಎಂಎಂ ಕೇಸ್​ ಹೊಂದಿದ್ದು, ಗ್ರೇಡಿಯಂಟ್​ ಗ್ರೇ ಡಯಲ್​ನೊಂದಿಗೆ ಬರುತ್ತದೆ. ಇಡೀ ಜಗತ್ತಿನಲ್ಲಿ ಈ ರೀತಿಯ ಕೈಗಡಿಯಾರಗಳು ಬಹಳ ಕಡಿಮೆ ಇದೆ.

ವಿದೇಶಿ ಬ್ರಾಂಡೆಡ್​ ವಾಚ್​ಗಳನ್ನು ಇಷ್ಟಪಡುವ ಅನೇಕ ಬಾಲಿವುಡ್​ ತಾರೆಯರಿದ್ದಾರೆ. ಬಾಲಿವುಡ್​ ಕಿಂಗ್​ ಶಾರುಖ್​ ಖಾನ್​ ಹೆಚ್ಚಾಗಿ ನೀಲಿ ಬಣ್ಣದ ವಾಚ್​ ಧರಿಸೋದನ್ನು ನೋಡಿರುತ್ತೀರಿ. ಈ ವಾಚ್​ನ ಬೆಲೆ ಸುಮಾರು 5 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಇಮ್ರಾನ್​ ಹಶ್ಮಿ ಅವರೂ ದುಬಾರಿ ವಾಚ್​ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅವರು 2 ರಿಂದ 5 ಕೋಟಿ ಮೌಲ್ಯದ ವಾಚ್​ಗಳನ್ನು ಧರಿಸುತ್ತಾರೆ. ವಿದೇಶಿ ಬ್ರ್ಯಾಂಡ್​ಗಳಾದ ರೋಲೆಕ್ಸ್​, ಒಮೆಗಾ, ರಾಡೋ, ಕಾರ್ಟಿಯರ್​, ಅಡಮಾರ್ಸ್​ ಪಿಗುಯೆಟ್​​, ಬ್ರೆಗುಟ್​, ಜೇಗರ್​ ಲೆ ಕೌಲ್ಚರ್​, ಪಿಯಾಗೆಟ್​ ಮತ್ತು ಗಿರಾರ್ಡ್​ ಪೆರೆಗಾಕ್ಸ್​ನ ದುಬಾರಿ ವಾಚ್​ಗಳು ಇಮ್ರಾನ್​ ಬಳಿ ಇವೆ.

ಇದನ್ನೂ ಓದಿ: ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ಕ್ರಿಕೆಟಿಗರ ದಂಡು: ಧೋನಿ ಲುಕ್​ಗೆ ಫ್ಯಾನ್ಸ್​ ಫಿದಾ

Last Updated : Mar 7, 2024, 10:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.