ನವದೆಹಲಿ: ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿದ್ದ 'ಪ್ರಾಜೆಕ್ಟ್ ಚೀತಾ', ಜಗತ್ತಿನ ಮೊದಲ ವನ್ಯಜೀವಿ ಖಂಡಾಂತರ ಸ್ಥಳಾಂತರ ಯೋಜನೆ ಆಗಿದೆ. ಇದೇ ಯೋಜನೆಯನ್ನು ಇದೀಗ ವೆಬ್ ಸೀರಿಸ್ ಮೂಲಕ ಜನರ ಮುಂದೆ ತರುವ ಪ್ರಯತ್ನಕ್ಕೆ ಮುಂದಾಗಲಾಗಿದೆ. ಈ ಮೂಲಕ ಯೋಜನೆ ಸವಾಲು, ಪ್ರಯತ್ನಗಳ ಗುರಿಗಳನ್ನು ಜನರ ಮುಂದಿಡಲಾಗುವುದು. ಹಲವು ಹಿನ್ನಡೆ ನಡುವೆ, ಪ್ರಾಜೆಕ್ಟ್ ಚೀತಾ ಕುರಿತು ವೆಬ್ ಸೀರಿಸ್ ನಿರ್ಮಾಣದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಮೂಲಕ ವಿಶ್ವಕ್ಕೆ ದೇಶದ ಪ್ರಯತ್ನವನ್ನು ತೋರಿಸುವ ಕಾರ್ಯ ನಡೆಯಲಿದೆ.
ಸೆಪ್ಟೆಂಬರ್ 17ರ ಪ್ರಾಜೆಕ್ಟ್ ಚೀತಾದ ಎರಡನೇ ವರ್ಷಾಚರಣೆ ಹೊತ್ತಲ್ಲಿ, ಈ ಕುರಿತು ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ ಎಂದು ವರದಿ ತಿಳಿಸಿದೆ.
ಎನ್ಟಿಸಿಎ ಪ್ರಧಾನ ಉಪ ಇನ್ಸ್ಪೆಕ್ಟರ್ ವೈಭವ್ ಚಂದ್ರ ಮಥೂರ್ ಈ ಸಂಬಂಧ ಜುಲೈ 21ರಂದು ಮಧ್ಯಪ್ರದೇಶದ ಮುಖ್ಯ ವನ್ಯಜೀವಿ ವಾರ್ಡನ್ಗೆ ಪತ್ರ ಬರೆದಿದ್ದು, ಭಾರತದ ಮಾಂಸಾಹಾರಿ ಜೀವಿಗಳ ಜಗತ್ತಿನ ಖಂಡಾಂತರ ಸ್ಥಳಾಂತರ ಯೋಜನೆಯಾದ ಪ್ರಾಜೆಕ್ಟ್ ಚೀತಾ ಕುರಿತು ವೆಬ್ ಸೀರಿಸ್ ನಿರ್ಮಾಣ ಪ್ರಸ್ತಾಪಕ್ಕೆ ಎಂಟು ತಾಂತ್ರಿಕ ಸಮಿತಿ ಪ್ರಾಧಿಕಾರ ಅನುಮತಿಗೆ ಕೋರಿದ್ದರು.
ಈ ನಿಟ್ಟಿನಲ್ಲಿ ಶೇನ್ ಫಿಲ್ಮ್ಸ್ ಮತ್ತು ಪ್ಲಾಟಿಂಗ್ ಪ್ರೊಡಕ್ಷನ್ಗೆ ಚಿತ್ರೀಕರಣಕ್ಕೆ ಮನವಿ ಮಾಡಲಾಗಿದೆ. ಕುನೋ ನ್ಯಾಷನಲ್ ಪಾರ್ಕ್ ಮತ್ತು ಗಾಂಧಿ ಸಾಗರ್ ವನ್ಯಜೀವಿ ಧಾಮದ ನಿಯಮ ಮತ್ತು ಷರತ್ತು ಅನುಸಾರ ಚಿತ್ರೀಕರಣ ನಡೆಸಲು ಅವಕಾಶ ನೀಡುವಂತೆ ಕೋರಲಾಗಿದೆ. ಹಾಗೇ ಯೋಜನೆ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ಸದಸ್ಯರುಗೆ ಅಗತ್ಯ ಬೆಂಬಲವನ್ನು ಖಚಿತಪಡಿಸಿ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಚಿತ್ರೀಕರಣದ ಪ್ರಸ್ತಾಪಕ್ಕೆ ಅನುಮತಿಗೆ ಆಗಸ್ಟ್ 6ರಂದು ರಾಜ್ಯ ವನ್ಯಜೀವಿ ವಾರ್ಡನ್ ಅನುಮೋದಿಸಿದ್ದಾರೆ. ಚಿತ್ರೀಕರಣದ ಕಾರ್ಯಾಚರಣೆ ಸಂದರ್ಭದಲ್ಲಿ ಉದ್ಯಾನವನದ ನಿಯಮಗಳಿಗೆ ಅಡ್ಡಿಯಾಗದಂತೆ ಮೇಲ್ವಿಚಾರಕರ ಅಡಿಯಲ್ಲಿ ಕನಿಷ್ಠ ಸದಸ್ಯರು ಇರುವಂತೆ ಕಾರ್ಯ ನಿರ್ವಹಿಸುವಂತೆ ತಿಳಿಸಲಾಗಿದೆ.
ಪಿಟಿಐ ನೋಡಿದ ಪ್ರಸ್ತಾಪದಲ್ಲಿ, ಈ ವೆಬ್ ಸೀರಿಸ್ ವಿವಿಧ ಭಾಷೆಗಳಲ್ಲಿ 170 ದೇಶದಲ್ಲಿ ಪ್ರಸಾರವಾಗಲಿದೆ. ಚಿತ್ರದಲ್ಲಿ ಯೋಜನೆ ಉದ್ದೇಶ, ಭಾರತಕ್ಕೆ ಪ್ರಾಣಿಗಳನ್ನು ತರಲು ಎದುರಿಸಿದ ಸವಾಲು, ಚೀತಾಗಳ ಸ್ಥಿತಿಗತಿ ಮತ್ತು ಭವಿಷ್ಯದ ನಿರೀಕ್ಷೆಗಳನ್ನು ಗುರಿಯಾಗಿಸಲಾಗಿಸಿದೆ.
ಏನಿದು ಪ್ರಾಜೆಕ್ಟ್ ಚೀತಾ: 2022ರ ಸೆಪ್ಟೆಂಬರ್ನ್ನು ಆಫ್ರಿಕಾದಿಂದ 20 ಚೀತಾಗಳನ್ನು ಭಾರತಕ್ಕೆ ಕರೆತರಲಾಯಿತು. ಇದರಲ್ಲಿ 8 ನಮೀಬಿಯಾ ಚೀತಾಗಳಾಗಿದ್ದು, 12 ಚೀತಾ ಫೆಬ್ರವರಿ 2023ರಲ್ಲಿ ದಕ್ಷಿಣ ಆಫ್ರಿಕಾದಿಂದ ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿತ್ತು. ಇದರಲ್ಲಿ 8 ಚೀತಾಗಳು ಸಾವನ್ನಪ್ಪಿದವು. ಅದರಲ್ಲಿ ಮೂರು ಗಂಡು ಮತ್ತು ಐದು ಹೆಣ್ಣಾಗಿದ್ದವು. ಚೀತಾಗಳ ಸಾವಿನ ಹಿನ್ನೆಲೆ ಈ ಯೋಜನೆ ವಿರುದ್ಧ ಟೀಕೆಗಳು ವ್ಕಕ್ತವಾಗಿದ್ದವು. ಉಳಿದ 12 ಚೀತಾಗಳಿಂದಾಗಿ ಈ ವರ್ಷ 17 ಮರಿಗಳು ಜನಿಸಿವೆ.
ಇದನ್ನೂ ಓದಿ: ಕೇದಾರನಾಥದಲ್ಲಿ ಏರ್ಲಿಫ್ಟ್ ಮಾಡುವಾಗ ಹಗ್ಗ ತುಂಡಾಗಿ ಬಿದ್ದು ಹೆಲಿಕಾಪ್ಟರ್ ಪತನ