ETV Bharat / bharat

ಅಮರನಾಥ ಯಾತ್ರೆ: 22 ದಿನಗಳಲ್ಲಿ 3.86 ಲಕ್ಷ ಭಕ್ತರಿಂದ ಹಿಮಲಿಂಗದ ದರ್ಶನ - Amarnath Yatra - AMARNATH YATRA

ಈ ವರ್ಷ ಅಮರನಾಥ ಯಾತ್ರೆ ಆರಂಭವಾದಾಗಿನಿಂದ 22 ದಿನಗಳಲ್ಲಿ ಮೂರೂವರೆ ಲಕ್ಷಕ್ಕೂ ಅಧಿಕ ಭಕ್ತರು ಹಿಮಲಿಂಗದ ದರ್ಶನ ಪಡೆದಿದ್ದಾರೆ.

ಅಮರನಾಥ ಗುಹಾ ದೇವಾಲಯ
ಅಮರನಾಥ ಗುಹಾ ದೇವಾಲಯ (IANS)
author img

By ETV Bharat Karnataka Team

Published : Jul 21, 2024, 12:07 PM IST

ಜಮ್ಮು: ಈ ವರ್ಷದ ಅಮರನಾಥ ಯಾತ್ರೆಯಲ್ಲಿ ಈವರೆಗೆ 3.86 ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದು, 3,113 ಯಾತ್ರಾರ್ಥಿಗಳ ಮತ್ತೊಂದು ತಂಡ ಭಾನುವಾರ ಜಮ್ಮುವಿನಿಂದ ಕಾಶ್ಮೀರಕ್ಕೆ ತೆರಳಿದೆ. ಈ ವರ್ಷದ ಯಾತ್ರೆ ಜೂನ್ 29ರಂದು ಪ್ರಾರಂಭವಾಗಿದ್ದು, ಕಳೆದ 22 ದಿನಗಳಲ್ಲಿ 3.86 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಗುಹಾ ದೇವಾಲಯದೊಳಗೆ ದರ್ಶನ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಒಂದೇ ದಿನ 11,000ಕ್ಕೂ ಹೆಚ್ಚು ಯಾತ್ರಾರ್ಥಿಗಳು ಹಿಮಲಿಂಗದ ದರ್ಶನ ಪಡೆದಿದ್ದಾರೆ.

"3,113 ಯಾತ್ರಿಗಳ ಮತ್ತೊಂದು ಬ್ಯಾಚ್ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಎರಡು ಬೆಂಗಾವಲು ಪಡೆಗಳೊಂದಿಗೆ ಇಂದು ಕಣಿವೆಗೆ ಹೊರಟಿದೆ. ಮೊದಲ ಬೆಂಗಾವಲು ಪಡೆಯು ಮುಂಜಾನೆ 2.56ಕ್ಕೆ 48 ವಾಹನಗಳಲ್ಲಿ 1153 ಯಾತ್ರಾರ್ಥಿಗಳನ್ನು ಕರೆದುಕೊಂಡು ಉತ್ತರ ಕಾಶ್ಮೀರ ಬಾಲ್ಟಾಲ್ ಬೇಸ್ ಕ್ಯಾಂಪ್​ಗೆ ಹೊರಟಿದೆ. ಎರಡನೇ ಬೆಂಗಾವಲು ಪಡೆ ಮುಂಜಾನೆ 3.41 ಕ್ಕೆ 75 ವಾಹನಗಳಲ್ಲಿ 1960 ಯಾತ್ರಾರ್ಥಿಗಳನ್ನು ಕರೆದುಕೊಂಡು ದಕ್ಷಿಣ ಕಾಶ್ಮೀರ ನುನ್ವಾನ್ (ಪಹಲ್ಗಾಮ್) ಬೇಸ್ ಕ್ಯಾಂಪ್​ನತ್ತ ಹೊರಟಿದೆ. ಎರಡೂ ಬೆಂಗಾವಲು ಪಡೆಗಳು ಇಂದು ಮಧ್ಯಾಹ್ನದ ಮೊದಲು ಕಣಿವೆಯನ್ನು ತಲುಪುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮರನಾಥ ಗುಹೆಯು ಕಾಶ್ಮೀರದ ಹಿಮಾಲಯ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿದೆ. ಭಕ್ತರು ಸಾಂಪ್ರದಾಯಿಕ ದಕ್ಷಿಣ ಕಾಶ್ಮೀರ ಪಹಲ್ಗಾಮ್ ಮಾರ್ಗದಿಂದ ಅಥವಾ ಉತ್ತರ ಕಾಶ್ಮೀರ ಬಾಲ್ಟಾಲ್ ಮಾರ್ಗದಿಂದ ಗುಹೆ ದೇವಾಲಯವನ್ನು ತಲುಪುತ್ತಾರೆ.

ಪಹಲ್ಗಾಮ್-ಗುಹೆ ದೇವಾಲಯದ ಮಾರ್ಗವು 48 ಕಿ.ಮೀ ಉದ್ದವಿದೆ ಮತ್ತು ಇದರ ಮೂಲಕ ದೇವಾಲಯ ತಲುಪಲು 4ರಿಂದ 5 ದಿನ ಬೇಕಾಗುತ್ತವೆ. ಹಾಗೆಯೇ ಬಾಲ್ಟಾಲ್-ಗುಹೆ ದೇವಾಲಯದ ಮಾರ್ಗವು 14 ಕಿ.ಮೀ ಉದ್ದವಿದ್ದು, ಒಂದೇ ದಿನದಲ್ಲಿ ಇಲ್ಲಿಗೆ ತಲುಪಿ, ದರ್ಶನ ಪಡೆದು ಅದೇ ದಿನ ಬೇಸ್​ ಕ್ಯಾಂಪ್​ಗೆ ಮರಳಿ ಬರಬಹುದು.

ಈ ವರ್ಷದ ಯಾತ್ರೆಯು 52 ದಿನಗಳ ನಂತರ ಆಗಸ್ಟ್ 29 ರಂದು ಶ್ರಾವಣ ಪೂರ್ಣಿಮಾ ಮತ್ತು ರಕ್ಷಾ ಬಂಧನ ಹಬ್ಬಗಳೊಂದಿಗೆ ಕೊನೆಗೊಳ್ಳಲಿದೆ. ಕಳೆದ ವರ್ಷ 4.5 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಅಮರನಾಥ ಗುಹೆ ದೇವಾಲಯಕ್ಕೆ ಆಗಮಿಸಿದ್ದರು. ಶ್ರೀ ಅಮರನಾಥಜಿ ದೇವಾಲಯ ಮಂಡಳಿಯು ಪ್ರತಿವರ್ಷ ಅಮರನಾಥ ಯಾತ್ರೆ ಆಯೋಜಿಸುತ್ತದೆ.

ಇದನ್ನೂ ಓದಿ: ಹಿಂಸಾಪೀಡಿತ ಬಾಂಗ್ಲಾದಿಂದ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ತಾಯ್ನಾಡಿಗೆ ವಾಪಸ್ - Bangladesh Job Quota Protests

ETV Bharat Logo

Copyright © 2024 Ushodaya Enterprises Pvt. Ltd., All Rights Reserved.