ETV Bharat / bharat

ಇಂದು ಪುರಿಯ ರತ್ನ ಭಂಡಾರ ಬಾಗಿಲು ತೆರೆಯಲು ಸಿದ್ಧತೆ: ನಿಧಿ ಕಾಯುತ್ತಿವೆಯಾ ನಾಗಸರ್ಪಗಳು? - PURI RATNA BHANDAR

author img

By ETV Bharat Karnataka Team

Published : Jul 13, 2024, 10:58 PM IST

Updated : Jul 14, 2024, 6:19 AM IST

ಪುರಿಯ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ಭಾನುವಾರ ತೆರೆಯಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

puri jagannath temple
ಪುರಿ ಜಗನ್ನಾಥ ದೇವಾಲಯ (ETV Bharat)

ಭುವನೇಶ್ವರ (ಒಡಿಶಾ): ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ದಾಸ್ತಾನು ಇದೆ ಎಂದು ಹೇಳಲಾಗುವ ಪುರಿ ಜಗನ್ನಾಥ ದೇವಾಲಯದ 'ರತ್ನ ಭಂಡಾರ'ವನ್ನು ಭಾನುವಾರ (ಜುಲೈ 14) ತೆರೆಯಲಾಗುವುದು ಎಂದು ಒಡಿಶಾ ಸರ್ಕಾರ ತಿಳಿಸಿದೆ. 1978ರ ಬಳಿಕ ಅಂದರೆ, 46 ವರ್ಷಗಳ ತರುವಾಯ ಈ ರತ್ನ ಭಂಡಾರದ ಬಾಗಿಲುಗಳನ್ನು ತೆರೆಯಲಾಗುತ್ತಿದೆ.

ಈ ಬಗ್ಗೆ ಶನಿವಾರ ಮಾಹಿತಿ ನೀಡಿರುವ ಕಾನೂನು ಸಚಿವ ಪೃಥಿವಿರಾಜ್ ಹರಿಚಂದನ್, ರತ್ನ ಭಂಡಾರವನ್ನು ನಾಳೆ ಓಪನ್​ ಮಾಡಲಾಗುವುದು. ಪುರಿ ಮಂದಿರವನ್ನು ಯಾವಾಗ ತೆರೆಯಬೇಕು ಎಂದು ದೇವಸ್ಥಾನದ ಅಧಿಕಾರಿಗಳೊಂದಿಗೆ ಚರ್ಚಿಸಲು ಮುಖ್ಯ ಆಡಳಿತಾಧಿಕಾರಿಗೆ ಸೂಚನೆ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನಿಂದಲೂ ಸಹಾಯ ಕೋರುತ್ತಿದ್ದೇವೆ. ಆರ್​ಬಿಐ ಪ್ರತಿನಿಧಿಗಳು ಕೂಡ ಆ ಸಮಯದಲ್ಲಿ ಉಪಸ್ಥಿತರಿರುತ್ತಾರೆ ಎಂದು ಹೇಳಿದ್ದಾರೆ.

ರತ್ನಭಂಡಾರವನ್ನು ತೆರೆಯಲು ಸರ್ಕಾರ ಸಭೆ ನಡೆಸಿತ್ತು. ದೇವಸ್ಥಾನದ ಆಡಳಿತ ಮಂಡಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ದೇವಸ್ಥಾನದ ಕಾರ್ಯಸೂಚಿಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ನಮೂದಿಸಲಾಗಿದೆ. ದೇವಾಲಯದ ಆಡಳಿತ ಸದಸ್ಯರು, ಸೇವಾದಳದ ಸದಸ್ಯರು, ಎಎಸ್​ಐ ಪ್ರತಿನಿಧಿಗಳು, ರಿಸರ್ವ್ ಬ್ಯಾಂಕ್ ಪ್ರತಿನಿಧಿಗಳುಳ್ಳ ವಿವಿಧ ಸಮಿತಿಗಳನ್ನು ರಚಿಸಲಾಗಿದೆ.

ರಾಜ್ಯ ಸರ್ಕಾರವು ರಚಿಸಿರುವ 16 ಸದಸ್ಯರ ಉನ್ನತ ಮಟ್ಟದ ಸಮಿತಿಯು ಜುಲೈ 14ರಂದು ರತ್ನ ಭಂಡಾರವನ್ನು ತೆರೆಯಲು ಸೂಚಿಸಿದೆ. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಮೊದಲು ದೇವಾಲಯದ ಒಳಗೆ ಲೋಕನಾಥ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ದೇವಸ್ಥಾನದ ಒಳಗೆ ಹಾವುಗಳು ಇರುವ ಬಗ್ಗೆ ಶಂಕೆ ಇದ್ದು, ಹಾವು ಹಿಡಿಯುವವರು ಮೊದಲು ಭಂಡಾರದ ಒಳಗೆ ಕಳುಹಿಸಲಾಗುತ್ತಿದೆ.

ಭಂಡಾರ ತೆರೆಯಲು ಭಯವೇಕೆ?: ಪೌರಾಣಿಕ ಕತೆಗಳ ಪ್ರಕಾರ, ದೇವಸ್ಥಾನದಲ್ಲಿನ ನಿಧಿಯನ್ನು ನಾಗಸರ್ಪಗಳು ಕಾಯುತ್ತವೆ ಎಂಬುದು ಪ್ರತೀತಿ. ಪುರಿ ಜಗನ್ನಾಥನ ಭಂಡಾರವನ್ನು ಹಾವುಗಳು ಕಾಯುತ್ತಿವೆ ಎಂದು ನಂಬಲಾಗಿದೆ. ಹೀಗಾಗಿ, ಹಾವು ಹಿಡಿಯುವ ತಂಡವನ್ನು ಮೊದಲು ದೇವಾಲಯದ ಒಳಗೆ ಕಳುಹಿಸಲಾಗುತ್ತದೆ. ಬಳಿಕ ಉಳಿದವರು ಅದರೊಳಗೆ ಪ್ರವೇಶಿಸಲಿದ್ದಾರೆ.

ಹಾವುಗಳ ಭಯದ ಜೊತೆಗೆ ಶಾಪದ ಭೀತಿಯೂ ಇರುವುದರಿಂದ ಈವರೆಗೂ ಭಂಡಾರದ ಗೊಡವೆಗೆ ಹೋಗಿರಲಿಲ್ಲ. ಇದೀಗ ಜುಲೈ 14ರಂದು ಅಧಿಕೃತವಾಗಿ ದೇವಾಲಯದ ಬಾಗಿಲು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 1978ರ ನಂತರ ಮೊದಲ ಬಾರಿಗೆ ರತ್ನ ಭಂಡಾತ ಆಂತರಿಕ ರಹಸ್ಯ ಕೋಣೆಯನ್ನು ತೆರೆಯಲಾಗುತ್ತಿದೆ. ಹಾವು ಹಿಡಿಯುವವರು ಮತ್ತು ವೈದ್ಯರ ತಂಡವನ್ನು ಔಷಧಿ ಕಿಟ್​ ಸಮೇತ ಸಿದ್ಧ ಮಾಡಿ ಇಡಲಾಗಿದೆ.

ಇದನ್ನೂ ಓದಿ: ಅಮರನಾಥ ಯಾತ್ರೆ: 14 ದಿನಗಳಲ್ಲಿ ಬಾಬಾ ಬರ್ಫಾನಿ ದರ್ಶನ ಪಡೆದ 2.80 ಲಕ್ಷ ಭಕ್ತರು! - Amarnath yatra 2024

Last Updated : Jul 14, 2024, 6:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.