ETV Bharat / bharat

80 ದಾಟಿದ ಕೇಂದ್ರದ ಪೆನ್ಷನ್​ದಾರರಿಗೆ ಹೆಚ್ಚುವರಿ ಅನುಕಂಪದ ಪಿಂಚಣಿ ಜಾರಿ - COMPASSIONATE PENSION

80 ವರ್ಷ ದಾಟಿದ ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ಘೋಷಿಸಲಾಗಿದೆ.

80 ದಾಟಿದ ಕೇಂದ್ರ ಪೆನ್ಷನ್​ದಾರರಿಗೆ ಹೆಚ್ಚುವರಿ ಅನುಕಂಪದ ಪಿಂಚಣಿ ಜಾರಿ
80 ದಾಟಿದ ಕೇಂದ್ರ ಪೆನ್ಷನ್​ದಾರರಿಗೆ ಹೆಚ್ಚುವರಿ ಅನುಕಂಪದ ಪಿಂಚಣಿ ಜಾರಿ (IANS)
author img

By ETV Bharat Karnataka Team

Published : Oct 25, 2024, 12:28 PM IST

ನವದೆಹಲಿ: 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಕೇಂದ್ರ ಸರಕಾರಿ ಪಿಂಚಣಿದಾರರು ಅನುಕಂಪದ ಭತ್ಯೆ ಹೆಸರಿನ ಹೆಚ್ಚುವರಿ ಪಿಂಚಣಿಗೆ ಅರ್ಹರಾಗಿರುತ್ತಾರೆ ಎಂದು ಸಿಬ್ಬಂದಿ, ಪಿಜಿ ಮತ್ತು ಪಿಂಚಣಿ ಸಚಿವಾಲಯದ ಅಡಿ ಬರುವ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (ಡಿಒಪಿಪಿಡಬ್ಲ್ಯೂ) ಇತ್ತೀಚಿನ ಅಧಿಸೂಚನೆಯಲ್ಲಿ ತಿಳಿಸಿದೆ.

ಈ ಪೂರಕ ಪ್ರಯೋಜನಗಳನ್ನು ಪಡೆಯಲು 80 ವರ್ಷ ವಯಸ್ಸಿನ ಕೇಂದ್ರ ಸರ್ಕಾರಿ ನಾಗರಿಕ ಸೇವಾ ನಿವೃತ್ತರಿಗೆ ಡಿಒಪಿಪಿಡಬ್ಲ್ಯೂ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಹೆಚ್ಚುವರಿ ಭತ್ಯೆಗಳ ವಿತರಣಾ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದಿಂದ ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಸಿಸಿಎಸ್ (ಪಿಂಚಣಿ) ನಿಯಮಗಳು 2021 ರ ನಿಯಮ 44 ರ ಉಪ ನಿಯಮ 6 ರ ನಿಬಂಧನೆಗಳ ಪ್ರಕಾರ (ಸಿಸಿಎಸ್ (ಪಿಂಚಣಿ) ನಿಯಮಗಳು 1972 ರ ಹಿಂದಿನ ನಿಯಮ 49 (2-ಎ) ಪ್ರಕಾರ, ನಿವೃತ್ತ ಸರ್ಕಾರಿ ನೌಕರನು ಎಂಬತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸನ್ನು ಪೂರ್ಣಗೊಳಿಸಿದ ನಂತರ, ನಿಯಮಗಳ ಅಡಿ ಅನುಮತಿಸಬಹುದಾದ ಪಿಂಚಣಿ ಅಥವಾ ಅನುಕಂಪದ ಭತ್ಯೆಯನ್ನು ಪಡೆಯಲು ಅರ್ಹನಾಗಿರುತ್ತಾನೆ.

ಅದರಂತೆ, 80 ರಿಂದ 85 ವರ್ಷ ವಯಸ್ಸಿನ ಹಿರಿಯ ನಾಗರಿಕರು ಮೂಲ ಪಿಂಚಣಿ / ಅನುಕಂಪದ ಭತ್ಯೆಯ ಶೇಕಡಾ 20 ರಷ್ಟು ಅನುಕಂಪದ ಭತ್ಯೆಗೆ ಅರ್ಹರಾಗಿದ್ದರೆ, 85 ರಿಂದ 90 ವರ್ಷ ವಯಸ್ಸಿನವರು ಶೇಕಡಾ 30 ರಷ್ಟು ಅನುಕಂಪದ ಭತ್ಯೆ ಪಡೆಯಲಿದ್ದಾರೆ. 90 ರಿಂದ 95 ವರ್ಷ ವಯಸ್ಸಿನ ಹಿರಿಯರು ಮೂಲ ಪಿಂಚಣಿ / ಅನುಕಂಪದ ಭತ್ಯೆಯ ಶೇಕಡಾ 40 ರಷ್ಟು ಮತ್ತು 95 ರಿಂದ 100 ವರ್ಷದೊಳಗಿನವರಿಗೆ ಶೇಕಡಾ 50 ರಷ್ಟು ಅನುಕಂಪದ ಭತ್ಯೆ ಸಿಗಲಿದೆ. 100 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಹಿರಿಯರು ಮೂಲ ಪಿಂಚಣಿ / ಅನುಕಂಪದ ಭತ್ಯೆಯ ಶೇಕಡಾ 100 ರಷ್ಟು ಅನುಕಂಪದ ಭತ್ಯೆಗೆ ಅರ್ಹರಾಗಿರುತ್ತಾರೆ.

ಉದಾಹರಣೆಗೆ ನೋಡುವುದಾದರೆ - ಆಗಸ್ಟ್ 20, 1942 ರಂದು ಜನಿಸಿದ ಪಿಂಚಣಿದಾರರು ಆಗಸ್ಟ್ 1, 2022 ರಿಂದ ಜಾರಿಗೆ ಬರುವಂತೆ ಮೂಲ ಪಿಂಚಣಿಯ ಇಪ್ಪತ್ತು ಪ್ರತಿಶತದಷ್ಟು ದರದಲ್ಲಿ ಹೆಚ್ಚುವರಿ ಪಿಂಚಣಿಗೆ ಅರ್ಹರಾಗಿರುತ್ತಾರೆ. ಆಗಸ್ಟ್ 1, 1942 ರಂದು ಜನಿಸಿದ ಪಿಂಚಣಿದಾರರು ಆಗಸ್ಟ್ 1, 2022 ರಿಂದ ಜಾರಿಗೆ ಬರುವಂತೆ ಮೂಲ ಪಿಂಚಣಿಯ ಶೇಕಡಾ 20 ರ ದರದಲ್ಲಿ ಹೆಚ್ಚುವರಿ ಪಿಂಚಣಿಗೆ ಅರ್ಹರಾಗಿರುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ

ಇದಲ್ಲದೇ, ಹೆಚ್ಚುವರಿ ಪಿಂಚಣಿ ಅಥವಾ ಅನುಕಂಪದ ಭತ್ಯೆ ಪಿಂಚಣಿದಾರರು ಗೊತ್ತುಪಡಿಸಿದ ವಯಸ್ಸನ್ನು ತಲುಪಿದ ತಿಂಗಳ ಮೊದಲ ದಿನದಿಂದ ಜಾರಿಗೆ ಬರಲಿದೆ ಎಂದು ಡಿಒಪಿಪಿಡಬ್ಲ್ಯೂ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಸುಪ್ರೀಂ ಕೋರ್ಟ್​ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್​ ಖನ್ನಾ ನೇಮಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.