ETV Bharat / bharat

ಅತ್ತೆಯ ಮಗಳನ್ನು ರೇಪ್​​ ಮಾಡಿ ಕೊಲೆ: ತನಗೆ ಮರಣದಂಡನೆ ವಿಧಿಸಿ ಎಂದು ಕೋರ್ಟ್​ಗೆ ಕೋರಿದ ಆರೋಪಿ! - accused asked death penalty - ACCUSED ASKED DEATH PENALTY

ತಾನು ಮಾಡಿದ ಘೋರ ತಪ್ಪಿನ ಅರಿವಾದ ಆರೋಪಿಯೊಬ್ಬ ಮಧ್ಯಪ್ರದೇಶದ ಕೋರ್ಟ್​ನಲ್ಲಿ ತನಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ಕೋರಿದ ಘಟನೆ ನಡೆದಿದೆ.

ತನಗೆ ಮರಣದಂಡನೆ ವಿಧಿಸಿ ಎಂದು ಕೋರ್ಟ್​ಗೆ ಕೋರಿದ ಆರೋಪಿ
ತನಗೆ ಮರಣದಂಡನೆ ವಿಧಿಸಿ ಎಂದು ಕೋರ್ಟ್​ಗೆ ಕೋರಿದ ಆರೋಪಿ (ETV Bharat)
author img

By ETV Bharat Karnataka Team

Published : Sep 5, 2024, 10:39 PM IST

ಹೊಶಂಗಾಬಾದ್ (ಮಧ್ಯಪ್ರದೇಶ): ಮಾಡಿದ ತಪ್ಪು ಎಂದಿಗೂ ತನ್ನನ್ನು ಬಾಧಿಸದೆ ಬಿಡದು. ಅದರಲ್ಲೂ ತನ್ನವರಿಗೇ ಅನ್ಯಾಯ ಮಾಡಿದಾಗ ಅದರ ವ್ಯಥೆ ಅಷ್ಟಿಷ್ಟಲ್ಲ. ತನ್ನ ಅತ್ತೆಯ ಅಪ್ರಾಪ್ತ ಮಗಳನ್ನು ಅತ್ಯಾಚಾರ ಮಾಡಿ ಕೊಂದ ಆರೋಪಿ ಕೋರ್ಟ್​ನಲ್ಲಿ ತನಗೆ ಮರಣದಂಡನೆ ನೀಡುವಂತೆ ತಾನೇ ಭಿನ್ನವಿಸಿಕೊಂಡಿದ್ದಾನೆ. ದೋಷಿ ಎಂದು ಸಾಬೀತಾದ ಬಳಿಕ ಕೋರ್ಟ್​ ಕೂಡ ಆತನಿಗೆ ಗಲ್ಲುಶಿಕ್ಷೆ ವಿಧಿಸಿ ಆದೇಶಿಸಿದೆ.

ಈ ಪ್ರಕರಣವು ಮಧ್ಯಪ್ರದೇಶದ ಹೋಶಂಗಾಬಾದ್​ನಲ್ಲಿರುವ ಜಿಲ್ಲಾ ನ್ಯಾಯಾಲಯದ ಸೊಹಾಗ್​ಪುರ ಸೆಷನ್​ ನ್ಯಾಯಾಲಯದಲ್ಲಿ ನಡೆದಿದೆ. ಶೋಭಾಪುರ ಪಟ್ಟಣದಲ್ಲಿ 2021 ರಲ್ಲಿ ನಡೆದ ಅತ್ಯಾಚಾರ, ಕೊಲೆ ಕೇಸ್​​ ಅನ್ನು ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಧೀಶ ಎಸ್​ಕೆ ಚೌಬೆ ವಿಚಾರಣೆ ನಡೆಸುತ್ತಿದ್ದರು. ಕೋರ್ಟ್​ನಲ್ಲಿ ಆರೋಪಿಯ ವಿರುದ್ಧ ಎಲ್ಲ ಸಾಕ್ಷ್ಯಾಧಾರಗಳು ಲಭ್ಯವಾಗಿ ದೋಷಿ ಎಂದು ಘೋಷಿಸಲಾಗಿದೆ. ಬಳಿಕ ಆತನೇ ಮಾಡಿದ ತಪ್ಪಿಗೆ ಶಿಕ್ಷೆಯಾಗಿ ನ್ಯಾಯಾಧೀಶರ ಬಳಿ ತನಗೆ ಮರಣದಂಡನೆ ಪ್ರಸಾದಿಸುವಂತೆ ಕೋರಿದ್ದಾನೆ.

ಪ್ರಕರಣದ ಹಿನ್ನೆಲೆ: 2021 ರಲ್ಲಿ ಸೋದರ ಸಂಬಂಧಿ ತನ್ನ ಅತ್ತೆಯ 5 ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿದ್ದ. ಬಳಿಕ ತಾನು ಸಿಕ್ಕಿಬೀಳುವ ಭಯದಲ್ಲಿ ಅಪ್ರಾಪ್ತೆಯನ್ನು ಮನೆಯ ಮಾಳಿಗೆಯ ಮೇಲೆ ಕರೆದೊಯ್ದು ಕತ್ತು ಹಿಸುಕಿ ಸಾಯಿಸಿದ್ದ. ಪ್ರಕರಣ ದಾಖಲಾದ ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದರು. ಅಪರಿಚಿತ ವ್ಯಕ್ತಿಯ ವಿರುದ್ಧ ನಡೆದ ತನಿಖೆಯಲ್ಲಿ ಆರೋಪಿ ಸೋದರ ಸಂಬಂಧಿ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬಳಿಕ ಆರೋಪಿಯನ್ನು ಕೋರ್ಟ್​ನ ಕಟಕಟೆಗೆ ನಿಲ್ಲಿಸಿದಾಗ, ತಾನೇ ಅಪ್ರಾಪ್ತೆಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ವಿಚಾರಣೆಯ ವೇಳೆ ಅಪರಾಧ ಸಾಬೀತಾದ ಬಳಿಕ ನ್ಯಾಯಾಧೀಶರು, ತೀರ್ಪು ಪ್ರಕಟಿಸುವ ಮುನ್ನ ಆರೋಪಿಗೆ ಏನಾದರೂ ಮಾತನಾಡಲು ಬಯಸುವೆಯಾ ಎಂದು ಕೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಕೀಚಕ ತನಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ಹೇಳಿದ್ದಾನೆ.

ಶ್ರೀರಾಮಚರಿತ ಮಾನಸದ ವಿವರಣೆ: ಇದನ್ನು ಕೇಳಿದ ನ್ಯಾಯಾಧೀಶರು ಶ್ರೀರಾಮ ಚರಿತ ಮಾನಸದ ಕಿಷ್ಕಿಂಧಾ ಕಾಂಡದ ಒಂದು ಪದ್ಯದ ಸಾರಾಂಶವನ್ನು ತಿಳಿಸಿದರು. ಚತುರ್ಭುಜದಲ್ಲಿ ತುಳಸಿದಾಸರು ವಿವರಿಸಿದಂತೆ, ಶ್ರೀರಾಮನು ಸುಗ್ರೀವನ ಹಿರಿಯ ಸಹೋದರ ವಾಲಿಯ ಮೇಲೆ ಮರೆಯಾಗಿ ನಿಂತು ಬಾಣ ಪ್ರಯೋಗ ಮಾಡಿ ವಧಿಸುತ್ತಾನೆ. ಆಗ ವಾಲಿಯು ಗುಟ್ಟಾಗಿ ತನ್ನ ಮೇಲೆ ಬಾಣ ಬಿಟ್ಟಿದ್ದೇಕೆ ಎಂದು ರಾಮನನ್ನು ಈ ಬಗ್ಗೆ ಪ್ರಶ್ನಿಸುತ್ತಾನೆ. ಇದಕ್ಕೆ ಶ್ರೀರಾಮನು, ಸಹೋದರನ ಹೆಂಡತಿ, ಸಹೋದರಿಯ ಮಗಳು, ಸೊಸೆಯ ಮೇಲೆ ಕಣ್ಣು ಹಾಕುವ ಯಾವ ವ್ಯಕ್ತಿಯನ್ನೂ ಕೊಂದರೂ ಅದು ಪಾಪವಲ್ಲ ಎಂದು ವಾಲಿಗೆ ಹೇಳುತ್ತಾನೆ. ಹಾಗೆಯೇ ನೀನು ಮಾಡಿದ ಕರ್ಮಫಲವಾಗಿ ನಿನಗೆ ಮರಣದಂಡನೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಮುಗ್ಧ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದು ಅಪರೂಪದಲ್ಲಿ ಅಪರೂಪ ಘಟನೆಯಾಗಿದೆ. ಅದರಲ್ಲೂ ಸೋದರ ಸಂಬಂಧಿಯೇ ಈ ನೀಚ ಕೃತ್ಯ ನಡೆಸಿದ್ದು, ಹೇಯವಾಗಿದೆ. ಜಗತ್ತನ್ನೇ ಕಾಣದ ಅಮಾಯಕ ಬಾಲಕಿಯ ಮೇಲಿನ ಈ ಪೈಶಾಚಿಕತೆಗೆ ಗಲ್ಲುಶಿಕ್ಷೆಯೇ ಉತ್ತರ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಇವರು ಯಾರು ಬಲ್ಲಿರೇನು?: ರಾಜಕೀಯದ ಬೆಂಕಿ ಚೆಂಡು ಅಂದು, ಇಂದು - guess who is this

ETV Bharat Logo

Copyright © 2025 Ushodaya Enterprises Pvt. Ltd., All Rights Reserved.