ETV Bharat / bharat

ಪತಿಗಾಗಿ ಗುಡಿ ಕಟ್ಟಿಸಿದ ಪತ್ನಿ; ಈ ಅಪರೂಪದ ದೇವಸ್ಥಾನ ಇರೋದೆಲ್ಲಿ ಗೊತ್ತಾ? - Temple for husband

ತೆಲಂಗಾಣದ ಮಹಿಳೆಯೊಬ್ಬರು ತನ್ನ ಮೃತ ಪತಿಯ ನೆನಪಿಗಾಗಿ ಅವರ ಪ್ರತಿಮೆಯನ್ನು ಒಳಗೊಂಡ ದೇವಾಲಯನ್ನೇ ಕಟ್ಟಿಸಿದ್ದಾರೆ.

ಪತಿಗಾಗಿ ದೇವಾಲಯ
ಪತಿಗಾಗಿ ದೇವಾಲಯ
author img

By ETV Bharat Karnataka Team

Published : Apr 25, 2024, 11:44 AM IST

Updated : Apr 25, 2024, 12:38 PM IST

ಮೆಹಬೂಬಾಬಾದ್: ಸಾಂಕ್ರಾಮಿಕ ರೋಗ ಕೊರೋನಾದಿಂದ ಪತಿಯನ್ನು ಕಳೆದುಕೊಂಡ ಪತ್ನಿಯೊಬ್ಬರು ಅವರ ನೆನಪಿಗಾಗಿ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ.

ಕರಾಳ ಕೊರೋನಾ ಎಷ್ಟೋ ಜನರ ಪ್ರಾಣವಲ್ಲದೇ ಸಂತೋಷವನ್ನು ಕಿತ್ತುಕೊಂಡಿದೆ. ತೆಲಂಗಾಣದ ಮಹಬೂಬಾಬಾದ್ ಮಂಡಲದ ಪರ್ವತಗಿರಿ ಉಪನಗರ ಸೋಮ್ಲ ತಾಂಡಾದ ಕಲ್ಯಾಣಿ ಎಂಬುವರು ಈ ನೋವಿನಿಂದ ಹೊರತಾಗಿಲ್ಲ. ಮೂರು ವರ್ಷದ ಹಿಂದೆ ಅವರ ಪತಿ ಬಾನೋತು ಹರಿಬಾಬು ಅವರು ಕೋವಿಡ್​ನಿಂದ ಮೃತಪಟ್ಟಿದ್ದರು.

ಈ ದಂಪತಿ 27 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಇವರಿಗೆ ಮಕ್ಕಳಿರಲಿಲ್ಲ. ನನಗೆ ನೀನು - ನಿನಗೆ ನಾನು ಎಂಬಂತೆ ಒಬ್ಬರಿಗೊಬ್ಬರು ಉಸಿರಾಗಿದ್ದರು. ಆದರೆ, ಪತಿ ತನ್ನ ಮಡದಿಯನ್ನು ಬಿಟ್ಟು ಇಹಲೋಕ ತ್ಯಜಿಸುತ್ತಾರೆ. ಅಂದಿನಿಂದ ಒಂಟಿಯಾದ ಕಲ್ಯಾಣಿ ತೀವ್ರ ಆಘಾತಕ್ಕೊಳಗಾಗಿ ಮಾನಸಿಕ ಚಿಂತೆಗೆ ಒಳಗಾಗುತ್ತಾರೆ.

ಕೊನೆಗೆ ಒಂದು ದಿನ ದೃಢ ನಿರ್ಧಾರವೊಂದಕ್ಕೆ ಬರುತ್ತಾರೆ. ಅದೇನೆಂದರೆ ಪತಿಗಾಗಿ ದೇವಾಲಯ ನಿರ್ಮಾಣ ಮಾಡುವ ಕನಸು. ಹೌದು ಗಂಡನ ಅಗಲುವಿಕೆಯ ನೋವಿನಿಂದ ಹೊರಬರಲು ಅವರ ಪ್ರತಿಮೆ ಮಾಡಿ ದೇವಾಲಯ ಕಟ್ಟಿಸಲು ಯೋಜಿಸಿದ್ದರು. ಈ ಆಸೆ ಬುಧವಾರದಂದು ಈಡೇರಿದೆ. ಕಲ್ಯಾಣಿ ತನ್ನ ಜಮೀನಿನಲ್ಲಿಯೇ ಪತಿಗಾಗಿ 20 ಲಕ್ಷ ರೂ. ಖರ್ಚಿನಲ್ಲಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಅವರ ನೆನಪು ಸದಾ ಉಳಿಯಲು ಗುಡಿಯನ್ನು ನಿರ್ಮಾಣ ಮಾಡಿದ್ದು, ನಿತ್ಯ ಪೂಜೆ ಸಲ್ಲಿಸುವ ಬಯಕೆ ಅವರದ್ದು. ರಾಜಸ್ಥಾನದಿಂದ ಪತಿಯನ್ನೇ ಹೋಲುವ ಪ್ರತಿಮೆಯನ್ನು ತರಲಾಗಿದ್ದು, ಬುಧವಾರ ಅನಾವರಣಗೊಳಿಸಲಾಗಿದೆ. ಬಳಿಕ ಬಂಧುಗಳು ಹಾಗೂ ಸ್ಥಳೀಯರೊಂದಿಗೆ ವಿಶೇಷ ಪೂಜೆಯ್ನೂ ಕೂಡಾ ಸಲ್ಲಿಸಲಾಗಿದೆ.

ಇದನ್ನೂ ಓದಿ: ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದರೂ ಕುಂದದ ಉತ್ಸಾಹ; ಇಂಟರ್​ನಲ್ಲಿ 927 ಅಂಕ ಪಡೆದು ’ಸಿರಿ‘ ಸಾಧನೆ - Success Stroy of student

Last Updated : Apr 25, 2024, 12:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.