ETV Bharat / bharat

ಕೆಲ ವರ್ಷಗಳ ಹಿಂದೆ ತಂದೆ ನಿಧನ, ಕುಟುಂಬದ ನೊಗ ಹೊತ್ತು ಸಾಗಿದ ತಾಯಿ; ಛಲ ಬಿಡದೇ ಐಎಎಸ್​ ಪಾಸ್​ ಆದ ಮಗ - SUCCESS STORY - SUCCESS STORY

‘ನಮ್ಮ ಲಕ್ಷ್ಮೀ ಮಗ ಐಎಎಸ್​ ಪಾಸ್​ ಮಾಡಿದ್ದಾನಂತೆ’ ಅನ್ನೋದು ಆ ಗ್ರಾಮದ ಪ್ರತಿಯೊಬ್ಬರ ಬಾಯಲ್ಲಿ ಕೇಳಿಬರುತ್ತಿರುವ ಮಾತು. ಇದನ್ನು ಕೇಳಿದ ಆ ಕುಟುಂಬ ಸಂತೋಷದಲ್ಲಿ ತೇಲುತ್ತಿದೆ. ಇನ್ನು, ಆ ಯುವಕ ಐಎಎಸ್​ ಪಾಸ್​ ಮಾಡುವುದಕ್ಕೆ ಯಾವರೀತಿ ತಯಾರಿ ನಡೆಸಿದ್ದರು ಎಂಬುದರ ಬಗ್ಗೆ ತಿಳಿಯೋಣ..

POOR MOTHER SON  COLLECTOR  KARIMNAGAR
ಛಲ ಬಿಡದೇ ಐಎಎಸ್​ ಪಾಸಾದ ಮಗ!
author img

By ETV Bharat Karnataka Team

Published : Apr 20, 2024, 8:28 PM IST

ಕರೀಂನಗರ (ತೆಲಂಗಾಣ): ವೇಲಿಚಾಲ ಗ್ರಾಮವು ಕರೀಂನಗರದಿಂದ 12 ಕಿಲೋಮೀಟರ್ ದೂರದಲ್ಲಿದೆ. ನಂದಲ ಸಾಯಿಕಿರಣ್ ಹುಟ್ಟಿದ್ದು ಕನಿಷ್ಠ ಸೌಲಭ್ಯಗಳು ಸಿಗದ ಹಳ್ಳಿಯಲ್ಲಿ. ಬಡತನದಲ್ಲಿ ಬದುಕುತ್ತಿರುವಾಗಲೇ.. ಅಕ್ಷರವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಲಕ್ಷಾಂತರ ಜನರ ಕನಸಾಗಿರುವ ಸಿವಿಲ್​ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸಾಧಿಸುವ ಛಲವಿದ್ದರೆ ನಮ್ಮ ಗುರಿಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಈ ಗೆಲುವಿನ ಸರದಾರ.

ಹೌದು, ಬಾಲ್ಯದಿಂದಲೂ ತಾಯಿಯ ದುಡಿಮೆಯಿಂದಲೇ ಜೀವನ ನಡೆಸುತ್ತಿದ್ದ ಹಿನ್ನೆಲೆ ನಮ್ಮದು. ಏಳು ವರ್ಷಗಳ ಹಿಂದೆ ನನ್ನ ತಂದೆ ಅನಾರೋಗ್ಯಕ್ಕೆ ಒಳಗಾಗಿ ನಮ್ಮನ್ನೆಲ್ಲ ಅಗಲಿದರು. ಆರ್ಥಿಕ ಸಂಕಷ್ಟಗಳು ನಮಗೆ ಹೊಸದಲ್ಲ. ಆಗ ಬೀಡಿ ಕಾರ್ಮಿಕಳಾಗಿರುವ ನನ್ನ ತಾಯಿ ತನ್ನ ದುಃಖವನ್ನು ನೀಗಿಸಿಕೊಳ್ಳಲು ಪ್ರಯತ್ನಿಸುತ್ತಲೇ ನಮಗಾಗಿ ತುಂಬಾ ಕಷ್ಟಪಟ್ಟರು. ಯಾಕೆ ಅಂತ ಗೊತ್ತಿಲ್ಲ.. ನಾವು ಯಾವಾಗಾದ್ರೂ ಎತ್ತರದ ಸ್ಥಾನಕ್ಕೆ ಏರುತ್ತೇವೆ ಅಂತಾ ನಮ್ಮ ತಾಯಿಗೆ ನಮ್ಮ ಅಕ್ಕ ಮತ್ತು ನನ್ನ ಮೇಲೆ ತುಂಬಾ ನಂಬಿಕೆ ಇತ್ತು ಎಂದು ಸಾಯಿಕಿರಣ್​ ಹೇಳುತ್ತಾರೆ.

ಅಪ್ಪನ ಪ್ರೇರಣೆ: 'ನಿಮ್ಮ ಶಿಕ್ಷಣದಿಂದ ನಮ್ಮ ಜೀವನ ಬದಲಾಗುತ್ತದೆ. ಇದು ಯಾವುದೇ ಹಂತವನ್ನು ತಲುಪಬಹುದು. ನೀನು ದೊಡ್ಡವನಾದ ಮೇಲೆ ನಮ್ಮಂಥವರಿಗೆ ಸಹಾಯ ಮಾಡುವುದನ್ನು ಮರೆಯಬೇಡ’ ಎಂದು ಮಗ್ಗ ನೇಯುವ ನನ್ನ ತಂದೆ ಹೇಳಿದ್ದರು. ಒಳ್ಳೆ ಕೆಲಸ ಸಿಕ್ಕರೆ ಮಾತ್ರ ಈ ಪರಿಸ್ಥಿತಿ ಬದಲಾಗುತ್ತೆ ಅನ್ನೋದು ಆಗ ಗೊತ್ತಾಯ್ತು. ಆ ಪ್ರೇರಣೆಯಿಂದ ನಾನು ಪುಸ್ತಕವನ್ನು ಸ್ವೀಕರಿಸಿದೆ ಎನ್ನುತ್ತಾರೆ ಸಾಯಿಕಿರಣ್​.

ಹತ್ತನೇ ತರಗತಿಯಲ್ಲಿ ಟಾಪರ್ ಆಗಿದ್ದರಿಂದ ಇಂಟರ್​ನಲ್ಲಿ​ ಫೀ ರಿಯಾಯ್ತಿ ಸಿಕ್ಕಿತು. ಇದು ನನ್ನ ಕನಸಿಗೆ ಅಡಿಪಾಯವಾಯಿತು. ಆಗ ಹೆಚ್ಚು ಪ್ರಯತ್ನಪಟ್ಟಿದ್ದರಿಂದ ಶೇ.98 ಅಂಕ ಬಂತು. ಸ್ಕಾಲರ್‌ಶಿಪ್‌ನೊಂದಿಗೆ ವಾರಂಗಲ್ ಎನ್‌ಐಟಿಯಲ್ಲಿ ಸೀಟು ಸಿಕ್ಕಿತು. ಆದರೂ.. ಕಡಿಮೆ ಮೊತ್ತದ ಶುಲ್ಕ ಮತ್ತು ವೆಚ್ಚವನ್ನು ಭರಿಸಲಾಗದಷ್ಟು ಪರಿಸ್ಥಿತಿ ನನ್ನದಾಗಿತ್ತು ಎಂದು ಸಾಯಿಕಿರಣ್​ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಶೈಕ್ಷಣಿಕ ಸಾಲ ಪಡೆದು ಅಧ್ಯಯನ ಮುಂದುವರಿಸಿದೆ. ಈ ಸಮಯದಲ್ಲಿ ನನ್ನ ತಂದೆ ತೀರಿಕೊಂಡರು. ಸಂಸಾರದ ಹೊರೆಯೆಲ್ಲ ತಾಯಿಯ ಮೇಲೆ ಬಿತ್ತು. ಎಲ್ಲ ರೀತಿಯಲ್ಲಿ ನಮ್ಮ ಬೆಂಬಲಕ್ಕೆ ನಿಂತು ಆಕೆ ಕಷ್ಟಪಡುತ್ತಿದ್ದಳು. ಕೆಲ ವರ್ಷಗಳ ಹಿಂದೆ ಅಕ್ಕ ಶ್ರವಂತಿಗೆ ಎಇ ಹುದ್ದೆ ಸಿಕ್ಕಿತ್ತು. ಬಿ.ಟೆಕ್ ಅಂತಿಮ ವರ್ಷದಲ್ಲಿ ಕ್ಯಾಂಪಸ್ ಪ್ಲೇಸ್​ಮೆಂಟ್​ಗೆ ಆಯ್ಕೆಯಾದೆ. ನಮ್ಮ ಕಷ್ಟಗಳು ಮುಗಿದವು ಎಂದು ಸಾಯಿಕಿರಣ್​ ಹೇಳುತ್ತಾರೆ.

ನಾನು ಕೆಲಸಕ್ಕೆ ಸೇರಿದಾಗ ನನಗೆ ಇಪ್ಪತ್ತೊಂದು ವರ್ಷ. ಸಮಯ ಕಳೆದಂತೆ, ನಾನು ಪ್ರಬುದ್ಧನಾದೆ. ಚಿಕ್ಕವನಿದ್ದಾಗ ಎಲ್ಲಿಯಾದರೂ ಹಳೆ ರಸ್ತೆಗಳನ್ನು ಕಂಡಾಗ ‘ಅಧಿಕಾರವಿದ್ದರೆ ಒಳ್ಳೆ ರಸ್ತೆ ನಿರ್ಮಿಸುತ್ತೇನೆ’ ಎಂದುಕೊಳ್ಳುತ್ತಿದ್ದೆ. ಶಿಥಿಲಾವಸ್ಥೆಯಲ್ಲಿರುವ ಶಾಲೆಗಳು ಮತ್ತು ವೈದ್ಯಕೀಯ ಸೌಲಭ್ಯಗಳಿಲ್ಲದೆ ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ನೋಡಿದರೆ ಹೃದಯ ವಿದ್ರಾವಕವಾಗುತ್ತಿತ್ತು. ಈ ರೀತಿಯ ವಿಷಯಗಳನ್ನು ಸರಿಪಡಿಸಲು ನನಗೆ ಶಕ್ತಿ ಇದ್ದರೆ ಒಳ್ಳೆದಾಗುತ್ತಿತ್ತು ಅಂತಾ ಅಂದುಕೊಳ್ಳುತ್ತಿದ್ದೆ. ಅದೇ ಸಮಯದಲ್ಲಿ, ಸಮಾಜದಲ್ಲಿ ಪರಿಣಾಮಕಾರಿ ಬದಲಾವಣೆಗಳನ್ನು ತಂದ ಕೆಲವು ಸಂಗ್ರಾಹಕರ ಬಗ್ಗೆ ಓದಿದೆ. ಅಂದಿನಿಂದ ನನ್ನ ಅಂತಿಮ ಗುರಿ ಐಎಎಸ್ ಆಯಿತು ಎಂದು ಸಾಯಿಕಿರಣ್​ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.

ನನ್ನ ಸಿವಿಲ್​ ತಯಾರಿ ಬೇಟೆ ಮೂರು ವರ್ಷಗಳ ಹಿಂದೆ ಪ್ರಾರಂಭವಾಯಿತು. ನನ್ನ ಕೆಲವು NIT ಸ್ನೇಹಿತರು ತಮ್ಮ ತಯಾರಿಯನ್ನು ಪ್ರಾರಂಭಿಸಿದ್ದರು. ಅವರ ಸಲಹೆಯನ್ನು ತೆಗೆದುಕೊಂಡೆ. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನೋಡುವುದು.. ಹಿಂದಿನ ವಿಜೇತರ ಅನುಭವಗಳನ್ನು ಸಂಗ್ರಹಿಸುವುದು.. ಅವರ ಬ್ಲಾಗ್‌ಗಳನ್ನು ಅನುಸರಿಸುವುದು.. ನಾನು ಇದನ್ನು ಎರಡು ತಿಂಗಳುವರೆಗೆ ಮಾಡಿದ್ದೇನೆ ಎಂದರು.

ನಾನು ನನ್ನ ಸಿನಿಯರ್​ ಹಾರ್ಡ್‌ವೇರ್ ಇಂಜಿನಿಯರ್ ಕೆಲಸವನ್ನು ಬಿಟ್ಟು ಐಎಎಸ್​ ತಯಾರಿ ನಡೆಸಿದೆ. ನನಗೆ ಕೆಲಸದಲ್ಲಿ ಕಡಿಮೆ ಸಮಯ ಸಿಗುತ್ತಿತ್ತು. ಆ ಅಲ್ಪ ಸಮಯವನ್ನು ಹೇಗಾದ್ರೂ ಸದುಪಯೋಗ ಪಡಿಸಿಕೊಳ್ಳುವ ಹಠವಿತ್ತು. ಪಕ್ಕಾ ಪ್ರಣಾಳಿಕೆ ಪ್ರಕಾರ ಮುಂದೆ ಸಾಗಬಹುದು ಎಂಬ ಕಲ್ಪನೆಯಿತ್ತು. ನಿರೀಕ್ಷೆಯಂತೆ ಮೊದಲ ಪ್ರಯತ್ನ ವಿಫಲವಾಯಿತು.. ಆದ್ರೂ ನನ್ನ ಹಠ ಬಿಡದೇ ತಕ್ಷಣ ಮತ್ತೆ ಮೇನ್ಸ್​ಗೆ ತಯಾರಿ ನಡೆಸಿದೆ. ಆ ಸಮಯದಲ್ಲಿ ನನ್ನ ನೆಚ್ಚಿನ ಸಿನಿಮಾಗಳನ್ನು ನೋಡುವುದನ್ನೇ ಬಂದ್​ ಮಾಡಿದೆ. ಸ್ನೇಹಿತರೊಂದಿಗೆ ಹೆಚ್ಚು ಹೊತ್ತು ಹರಟೆ ಹೊಡೆಯುವುದನ್ನು ನಿಲ್ಲಿಸಿದೆ. ಆಫೀಸಿಗೆ ಹೋಗುವ ಮುನ್ನ, ಬಂದ ನಂತರ ಬಿಡುವು ಸಿಕ್ಕಾಗಲೆಲ್ಲ ಪುಸ್ತಕ ಕೈಯಲ್ಲಿರುತಿತ್ತು. ವಾರಾಂತ್ಯದಲ್ಲೂ ಕೈಯಲ್ಲಿ ಪುಸ್ತಕಗಳು ಇರುತ್ತಿದ್ದವು ಎಂದು ಸಾಯಿಕಿರಣ್​ ಹೇಳುತ್ತಾರೆ.

ಕಚೇರಿಯ ಕೆಲಸ, ತಯಾರಿಯ ಒತ್ತಡದಲ್ಲಿದ್ದಾಗ ‘ಒಳ್ಳೆಯ ಕೆಲಸವಿದ್ದರೂ ಇಷ್ಟು ಕಷ್ಟಪಟ್ಟು ದುಡಿಯುವುದು ಬೇಕಾ?’ ಎಂದು ಕೆಲವೊಮ್ಮೆ ಅನಿಸುತ್ತಿತ್ತು. ಆದರೆ ನನ್ನ ಹಿನ್ನೆಲೆ, ಸಮಾಜದಲ್ಲಿ ಒಳ್ಳೆ ಗೌರವ ಸಿಗಬೇಕೆಂಬ ಹಂಬಲ ಹಾಗೂ ದೃಢ ಸಂಕಲ್ಪವನ್ನು ನೆನಪಿಸಿಕೊಂಡು ಮತ್ತೆ ಒಂದು ಹೆಜ್ಜೆ ಮುಂದೆ ಇಡುತ್ತಿದ್ದೆ. ಈ ಬಾರಿ ಗುರಿ ತಪ್ಪಲಿಲ್ಲ. ನನ್ನ ಮಹತ್ವಾಕಾಂಕ್ಷೆಗೆ ನನ್ನ ತಾಯಿಯ ಆಶೀರ್ವಾದ ಜೊತೆಯಾಯಿತು. ಎರಡನೇ ಪ್ರಯತ್ನದಲ್ಲೇ ಸಿವಿಲ್ಸ್ ವಿಜೇತನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ರ್‍ಯಾಂಕ್ ಸಿಕ್ಕಾಗ ಖುಷಿಯಾಯಿತು. ಆದರೆ ನಮ್ಮ ಊರಲ್ಲೀ ಇನ್ನೂ ಹಬ್ಬದ ವಾತಾವರಣದಲ್ಲಿದೆ. ನನಗಿಂತ ಹೆಚ್ಚಾಗಿ ಅವರು ಖುಷಿಯಾಗಿದ್ದಾರೆ. ನನಗೆ ಇನ್ನೇನು ಬೇಕು? ಎಂದು ಸಾಯಿಕಿರಣ್​ ಸಂತಸವನ್ನು ಹಂಚಿಕೊಂಡರು.

  • ನಾನು ಸಿವಿಲ್ಸ್​ಗಾಗಿ ಯಾರ ಬಳಿಯೂ ತರಬೇತಿ ಪಡೆದುಕೊಂಡಿಲ್ಲ. ನನ್ನಷ್ಟಕ್ಕೆ ನಾನೇ ತಯಾರಿ ನಡೆಸಿದೆ..
  • ನನ್ನ ಪ್ರಕಾರ ನೂರರಿಂದ ಇನ್ನೂರರ ಒಳಗೆ ರ್‍ಯಾಂಕ್ ಬರುತ್ತೆ ಎಂದು ತಿಳಿದುಕೊಂಡಿದ್ದೆ. ಆದ್ರೆ 27ನೇ ಸ್ಥಾನ ಬರುತ್ತೆ ಎಂದು ನಿರೀಕ್ಷಿಸಿರಲಿಲ್ಲ.
  • ಏಕಾಗ್ರತೆ, ಛಲ ಮತ್ತು ಆತ್ಮ ವಿಶ್ವಾಸವು ಯಾವುದೇ ಪ್ರಯತ್ನದಲ್ಲಿ ಯಶಸ್ಸಿನ ಮೂರು ಮಾರ್ಗಗಳಾಗಿವೆ.
  • ನನ್ನ ಅಕ್ಕ ಮತ್ತು ನಾನು ನಮ್ಮ ಕುಟುಂಬದಲ್ಲಿ ಮೊದಲ ತಲೆಮಾರಿನ ಪದವೀಧರರು.
  • ಆಲೋಚನೆ ಎಷ್ಟೇ ಒಳ್ಳೆದಾಗಿದ್ರೂ ಶ್ರಮ ಪಡದಿದ್ರೆ ಫಲ ಸಿಗುವುದಿಲ್ಲ. ಒಳ್ಳೆಯ ಆಲೋಚನೆಗಳನ್ನು ಸಣ್ಣ ಸಣ್ಣ ಗುರಿಗಳಾಗಿ ಬೇರ್ಪಡಿಸಿ ಮುಂದಕ್ಕೆ ಸಾಗಬೇಕು ಎನ್ನುತ್ತಾರೆ ಸಾಯಿಕಿರಣ್​.

ಓದಿ: ಭಾರತದಲ್ಲಿದೆ ಬಕ್ಕಿಂಗ್​ಹ್ಯಾಮ್​​​​ಗಿಂತಲೂ ನಾಲ್ಕು ಪಟ್ಟು ದೊಡ್ಡದಾದ ನಿವಾಸ: 500 ಎಕರೆ, 176 ಕೊಠಡಿ.. ಅಬ್ಬಬ್ಬಾ ಎಂಥಾ ಅರಮನೆ: ಇರೋದೆಲ್ಲಿ ಗೊತ್ತಾ? - Laxmi Vilas Palace

ETV Bharat Logo

Copyright © 2025 Ushodaya Enterprises Pvt. Ltd., All Rights Reserved.