ETV Bharat / bharat

ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ವೇದಿಕೆಯ ಹಿಂಭಾಗ ಓಡಾಡಿದ ಪ್ರಾಣಿ! ವಿಡಿಯೋ - Rashtrapati Bhavan - RASHTRAPATI BHAVAN

ಪ್ರಧಾನಿಯಾಗಿ ನರೇಂದ್ರ ಮೋದಿ, 72 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಪ್ರಾಣಿಯೊಂದು ಓಡಾಡಿದ ವಿಡಿಯೋ ವೈರಲ್​ ಆಗಿದೆ.

ಪ್ರಮಾಣವಚನ ಸ್ವೀಕಾರ ವೇಳೆ ರಾಷ್ಟ್ರಪತಿ ಭವನದಲ್ಲಿ ಸುಳಿದಾಡಿದ ಪ್ರಾಣಿ
ಪ್ರಮಾಣವಚನ ಸ್ವೀಕಾರ ವೇಳೆ ರಾಷ್ಟ್ರಪತಿ ಭವನದಲ್ಲಿ ಸುಳಿದಾಡಿದ ಪ್ರಾಣಿ (ANI)
author img

By ETV Bharat Karnataka Team

Published : Jun 10, 2024, 6:32 PM IST

Updated : Jun 10, 2024, 9:47 PM IST

ಪ್ರಮಾಣವಚನ ವೇದಿಕೆಯ ಹಿಂಭಾಗ ಓಡಾಡಿದ ಪ್ರಾಣಿ (ETV Bharat)

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವ ಸಂಪುಟದ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಸಾಂಗವಾಗಿ ನಡೆಯಿತು. ಕಾರ್ಯಕ್ರಮದ ನಡುಭಾಗದಲ್ಲಿ ರಾಷ್ಟ್ರಪತಿ ಭವನದೊಳಗೆ ಚಿರತೆಯಂತೆ ಕಾಣಿಸುವ ಪ್ರಾಣಿಯೊಂದು ಸುಳಿದಾಡಿದ್ದು, ಅದರ ವಿಡಿಯೋ ಭಾರೀ ವೈರಲ್​ ಆಗುತ್ತಿದೆ.

ಬಿಜೆಪಿ ಸಂಸದ ದುರ್ಗಾದಾಸ್​ ಅವರು ಸಚಿವರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ಸ್ವೀಕರಿಸುವ ವೇಳೆ, ರಾಷ್ಟ್ರಪತಿ ಭವನದ ಮೆಟ್ಟಿಲುಗಳ ಮೇಲ್ಭಾಗದಲ್ಲಿ ಈ ಪ್ರಾಣಿ ಓಡಾಡಿದೆ. ಇದರ ದೃಶ್ಯ ನೇರಪ್ರಸಾರದ ವಿಡಿಯೋದಲ್ಲಿ ಸೆರೆಯಾಗಿದೆ. ಭವನದ ಮುಂದೆ ನಡೆದಾಡುತ್ತಾ ಅದು ಮತ್ತೆ ಅಲ್ಲಿಂದಲೇ ವಾಪಸ್​ ಹೋಗಿರುವುದು ಕಂಡುಬಂದಿದೆ.

ರಾಷ್ಟ್ರಪತಿ ಭವನದ ಮೆಟ್ಟಿಲುಗಳ ಪಕ್ಕದಲ್ಲಿ ತಿರುಗಾಡಿದ ಪ್ರಾಣಿ ಯಾವುದೇ ತೊಂದರೆ ನೀಡದೇ ಅಲ್ಲಿಂದ ತೆರಳಿತು. ದುರ್ಗಾದಾಸ್​ ಅವರು ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ರಿಜಿಸ್ಟರ್​ ಬುಕ್‌ನಲ್ಲಿ ಸಹಿ ಹಾಕುವಾಗ ಪ್ರಾಣಿ ಅವರ ಹಿಂದಿನ ಭಾಗದಲ್ಲಿ ನಡೆದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಬಗ್ಗೆ ರಾಷ್ಟ್ರಪತಿ ಭವನ ಮತ್ತು ಅಧಿಕಾರಿಗಳಿಂದ ಈವರೆಗೂ ಯಾವುದೇ ಸ್ಪಷ್ಟನೆ ಬಂದಿಲ್ಲ.

ಚಿರತೆಯೋ, ಕಾಡು ಬೆಕ್ಕೋ?: ಕಾರ್ಯಕ್ರಮದ ಗದ್ದಲದಲ್ಲಿ ಪ್ರಾಣಿಯೊಂದು ಬಂದು ಹೋಗಿದ್ದನ್ನು ಯಾರೂ ಗಮನಿಸಿಲ್ಲ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತರಹೇವಾರಿಯಾಗಿ ಅದನ್ನು ಗುರುತಿಸುತ್ತಿದ್ದಾರೆ. ಆಕೃತಿಯಲ್ಲಿ ದೊಡ್ಡದಾಗಿ ಕಾಣುತ್ತಿರುವ ಕಾರಣ ಇದನ್ನು 'ಚಿರತೆ' ಎಂದು ಕೆಲವರು ಹೇಳಿದ್ದರೆ, ಇನ್ನು ಕೆಲವರು 'ಕಾಡು ಬೆಕ್ಕಿನಂತಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನುಮಾನಾಸ್ಪದವಾಗಿ ಓಡಾಡಿದ ಪ್ರಾಣಿ ಯಾವುದು ಎಂಬುದರ ಬಗ್ಗೆ ನಿಖರತೆ ಇಲ್ಲವಾದರೂ, ಬಿಗಿ ಭದ್ರತೆ ಇರುವ ರಾಷ್ಟ್ರಪತಿ ಭವನದಲ್ಲಿ ಪ್ರಾಣಿಯೊಂದು ಸುಳಿದಾಡಿದ್ದು ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ರಾಷ್ಟ್ರಪತಿ ಭವನದಲ್ಲಿ ಪ್ರಾಣಿಗಳನ್ನು ಸಾಕಬಹುದೇ?: ನಿಯಮಗಳ ಪ್ರಕಾರ, ರಾಷ್ಟ್ರಪತಿ ಭವನದಲ್ಲಿ ಸಾಕು ಪ್ರಾಣಿಗಳನ್ನು ಹೊಂದುವಂತಿಲ್ಲ. ರಾಷ್ಟ್ರಪತಿ ಸೇರಿದಂತೆ ಭವನದ ಸಿಬ್ಬಂದಿಯೂ ಕೂಡ ಯಾವುದೇ ಸಾಕು ಪ್ರಾಣಿಗಳನ್ನು ಜೊತೆಗೆ ಇಟ್ಟುಕೊಳ್ಳುವಂತಿಲ್ಲ.

ರಾಷ್ಟ್ರಪತಿ ಭವನದ ಪಕ್ಕದಲ್ಲಿ ಅರಣ್ಯವಿದ್ದು, ಅಲ್ಲಿಂದ ಕಾಡು ಪ್ರಾಣಿ ಭವನದೊಳಗೆ ನುಗ್ಗಿದೆಯಾ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ರಾತ್ರಿ ವೇಳೆ ಪ್ರಾಣಿ ಕಾಣಿಸಿಕೊಂಡ ಬಳಿಕ ಈವರೆಗೂ ಅದು ಮತ್ತೆ ಪತ್ತೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 72 ಮಂದಿ ಸಚಿವರು, 8 ಸಾವಿರಕ್ಕೂ ಅಧಿಕ ಅತಿಥಿಗಳು, ವಿದೇಶಿ ಗಣ್ಯರು ಹಾಜರಿದ್ದ ಕಾರ್ಯಕ್ರಮದಲ್ಲಿ ಪ್ರಾಣಿಯೊಂದು ಸುಳಿದಾಡಿದ್ದು ಭಾರೀ ಅಚ್ಚರಿ ಮತ್ತು ಆತಂಕದ ವಿಚಾರ.

ಇದನ್ನೂ ಓದಿ: ಮೋದಿ 3.0 ಸರ್ಕಾರ ಅಸ್ತಿತ್ವಕ್ಕೆ: 24 ರಾಜ್ಯಗಳ 71 ಸಂಸದರಿಗೆ ಅವಕಾಶ, 11 ಮಿತ್ರಪಕ್ಷಗಳಿಗೂ ಪಾಲು - PM MODI OATH CEREMONY

Last Updated : Jun 10, 2024, 9:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.