ETV Bharat / bharat

ಸಿಡಿಲು ಬಡಿದು 9 ಮಂದಿ ಸಾವು; ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಮಾಝಿ - Lightning Strike - LIGHTNING STRIKE

ಒಡಿಶಾದಲ್ಲಿ ಒಂದೇ ದಿನದಲ್ಲಿ ಸಿಡಿಲು ಬಡಿದು 9 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ಸಿಎಂ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Lightning Strike
Lightning Strike (ETV Bharat)
author img

By ETV Bharat Karnataka Team

Published : Aug 17, 2024, 11:00 PM IST

ಭುನವನೇಶ್ವರ್​: ಒಡಿಶಾ ರಾಜ್ಯದಲ್ಲೂ ಮಳೆ ಆರ್ಭಟ ಮುಂದುವರಿದಿದೆ. ಶನಿವಾರ ಸಿಡಿಲು ಬಡಿದು 9 ಜನರು ಸಾವನ್ನಪ್ಪಿದ್ದಾರೆ. ಈ ಕುರಿತು ಕಂಬನಿ ಮಿಡಿದಿರುವ ಮುಖ್ಯಮಂತ್ರಿ ಮೋಹನ್​ ಚರಣ್​ ಮಾಝಿ ಅವರು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳುವುದರೊಂದಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಮಯೂರ್​ಭಂಜ್​ ಜಿಲ್ಲೆಯಲ್ಲಿ ಇಬ್ಬರು, ಬಾಲಸೋರ್​ ಜಿಲ್ಲೆಯಲ್ಲಿ ಇಬ್ಬರು, ಭದ್ರಕ್​ ಜಿಲ್ಲೆಯಲ್ಲಿ ಇಬ್ಬರು ಅಸುನೀಗಿದ್ದರೆ, ಕಿಯೋಂಝಾರ್, ಧೆಂಕಾನಾಲ್​ ಮತ್ತು ಗಂಜಮ್​ ಜಿಲ್ಲೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಅವಘಡಗಳಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಹಣವನ್ನು ತಲುಪಿಸುವಂತೆ ಸಿಎಂ ಮಾಝಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗಾಯಗೊಂಡವರಿಗೆ ಶೀಘ್ರ ಚೇತರಿಸಿಕೊಳ್ಳುವಂತೆ ಹಾರೈಸಿರುವ ಸಿಎಂ ಅವರು, ಗಾಯಾಳುಗಳ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಅಭಯ ನೀಡಿದ್ದಾರೆ.

ಇದನ್ನೂ ಓದಿ:ವೈದ್ಯರ 24 ಗಂಟೆಗಳ ಮುಷ್ಕರದಿಂದ ಆಸ್ಪತ್ರೆಗಳು ಬಂದ್​: ಮಹಿಳಾ ಆಯೋಗದ ವರದಿಯಲ್ಲಿವೆ ಆಘಾತಕಾರಿ ಅಂಶಗಳು - kolkata doctor rape murder

ETV Bharat Logo

Copyright © 2025 Ushodaya Enterprises Pvt. Ltd., All Rights Reserved.