ETV Bharat / bharat

ಮದ್ಯ ನಿಷೇಧ ಇರುವ ಬಿಹಾರದಲ್ಲಿ 50 ಲಕ್ಷ ಮೌಲ್ಯದ ಲಿಕ್ಕರ್​ ವಶಕ್ಕೆ - LIQUOR SEIZED IN BIHARS

ಬಿಹಾರದಲ್ಲಿ 2016 ರಿಂದ ಮದ್ಯ ನಿಷೇಧ ಮಾಡಲಾಗಿದೆ. ಆದರೂ ಕೂಡ ರಾಜ್ಯದಲ್ಲಿ ಅಕ್ರಮ ಮದ್ಯ ಸಾಗಾಟ ನಿರಂತರವಾಗಿ ನಡೆಯುತ್ತಿದೆ. ಇದರ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

844-cartons-of-liquor-worth-rs-50-lakh-seized-in-bihars-saran
ಸಾಂದರ್ಭಿಕ ಚಿತ್ರ (ಐಎಎನ್​ಎಸ್​​)
author img

By ETV Bharat Karnataka Team

Published : 15 hours ago

ಪಾಟ್ನಾ: ಬಿಹಾರದ ಸರನ್​ನಲ್ಲಿ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದ್ದ 50 ಲಕ್ಷ ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣೆ ನಡೆಸಿದಾಗ ಭಾರತೀಯ ನಿರ್ಮಿತ ವಿದೇಶಿ ಮದ್ಯ (ಐಎಂಎಫ್​ಎಲ್​) ವಶಕ್ಕೆ ಪಡೆಯಲಾಗಿದೆ. ಬಿಹಾರದಲ್ಲಿ 2016 ರಿಂದಲೇ ಮದ್ಯ ನಿಷೇಧ ಹೇರಲಾಗಿದೆ. ಆದರೂ ರಾಜ್ಯದಲ್ಲಿ ಅಕ್ರಮ ಮದ್ಯ ಸಾಗಾಟ ನಡೆಯುತ್ತಿದ್ದು, ಇದರ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ

ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಉಮ್ಧಾ ಗ್ರಾಮದಲ್ಲಿ ವಾಹನ ತಪಾಸಣೆ ವೇಳೆ ನಾಗಾಲ್ಯಾಂಡ್​ ನೋಂದಣಿ ಇರುವ ವಾಹನದಲ್ಲಿ ಅಕ್ರಮವಾಗಿ ಬಿಹಾರಕ್ಕೆ ಮದ್ಯ ಸಾಗಿಸುತ್ತಿರುವುದು ಕಂಡು ಬಂದಿದೆ. ವಾಹನ ತಪಾಸಣೆ ವೇಳೆ ಪೊಲೀಸರನ್ನು ಗಮನಿಸಿದ ಕಂಟೈನರ್​ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ವಾಹನದಲ್ಲಿ 50 ಲಕ್ಷ ಮೌಲ್ಯದ ವಿದೇಶಿ ಬ್ರಾಂಡ್​ನ ಮದ್ಯ ಕಂಡು ಬಂದಿದೆ.

ಈ ಕುರಿತು ಮಾತನಾಡಿರುವ ಮುಫಾಸಿಲ್​ ಪೊಲೀಸ್​ ಠಾಣಾ ಅಧಿಕಾರಿಗಳು ನಾಗಾಲ್ಯಾಂಡ್​ ನೋಂದಣಿಯ ಕಂಟೈನರ್​ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವ ಕುರಿತು ರಹಸ್ಯ ಮಾಹಿತಿಯನ್ನು ನಾವು ಸ್ವೀಕರಿಸಿದ್ದೆವು. ಈ ಹಿನ್ನೆಲೆಯಲ್ಲಿ ನಾವು ಉಮ್ದಾ ಗ್ರಾಮದಲ್ಲಿ ಬ್ಯಾರಿಕೇಡ್​ ಹಾಕಿ ಬೃಹತ್​ ತಪಾಸಣೆಗೆ ಮುಂದಾಗಿದ್ದು, ಯಶಸ್ವಿಯಾಗಿ ಅಕ್ರಮ ಮದ್ಯ ಸಾಗಾಟ ತಡೆಯಲಾಗಿದೆ ಎಂದರು.

ಪ್ರಾಥಮಿಕ ಮಾಹಿತಿ ಪ್ರಕಾರ, ಬಿಹಾರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಈ ಮದ್ಯ ಸಾಗಿಸುತ್ತಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಸದ್ಯ ಕಂಟೈನರ್​​ ವಾಹನದ ನೋಂದಣಿ ವಿವರಗಳನ್ನು ಬಳಸಿಕೊಂಡು ಮಾಲೀಕರನ್ನು ಪತ್ತೆ ಮಾಡುವ ಕೆಲಸ ಮಾಡಲಾಗುತ್ತಿದೆ. ಬಿಹಾರದಲ್ಲಿ ಮದ್ಯ ನಿಷೇಧವಿದ್ದರೂ ರಾಜ್ಯದಲ್ಲಿ ಅಕ್ರಮ ಮದ್ಯ ಸಾಗಣೆ ತಡೆಯಲು ಪೊಲೀಸರು ಎಲ್ಲ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದರು.

ರಾಜ್ಯದಲ್ಲಿ ಹೊಸ ವರ್ಷದ ಹಿನ್ನೆಲೆ ರಾಜ್ಯದಲ್ಲಿ ಕಳ್ಳ ಸಾಗಣೆ ಬಗ್ಗೆ ತೀವ್ರ ನಿಗಾ ಇರಿಸಲಾಗಿದೆ. ಡಿಸೆಂಬರ್​ 25ರಂದು ಡೈರೆಕ್ಟರೇಟ್​ ಆಫ್​ ರೆವೆನ್ಯೂ ಇಂಟಲಿಜೆನ್ಸ್​ ಕೂಡ ದೊಡ್ಡ ಪ್ರಮಾಣದಲ್ಲಿ ವಿದೇಶಿ ಸಿಗರೇಟ್​ ಸಾಗಾಟ ಮಾಡುತ್ತಿದ್ದ ಇಬ್ಬರನ್ನುವಶಕ್ಕೆ ಪಡೆದಿದ್ದರು. ಈ ಸಿಗರೇಟ್​​ನ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1.5 ಕೋಟಿ ಎಂದು ಅಧಿಕಾರಿಗಳು ತಿಳಿಸಿದರು. (ಐಎಎನ್​ಎಸ್​)

ಇದನ್ನೂ ಓದಿ: ವೇಗವಾಗಿ ಬಂದು ಪಾದಚಾರಿಗಳ ಮೇಲೆ ಹರಿದ ಟೆಂಪೋ: ಮಹಿಳೆ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.