ETV Bharat / bharat

ಕೂಡಂಕುಳಂ ಅಣು ಸ್ಥಾವರದ ಬಳಿ ಸುತ್ತಾಡುತ್ತಿದ್ದ 6 ರಷ್ಯನ್ನರ ಬಂಧನ, ತೀವ್ರ ವಿಚಾರಣೆ - Kudankulam nuclear plant - KUDANKULAM NUCLEAR PLANT

ಕೂಡಂಕುಳಂ ಅಣುಸ್ಥಾವರದ ಬಳಿ ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದ 6 ಜನ ರಷ್ಯನ್ನರನ್ನು ಪೊಲೀಸರು ಬಂಧಿಸಿದ್ದಾರೆ.

ಕೂಡಂಕುಳಂ ಅಣು ಸ್ಥಾವರ
ಕೂಡಂಕುಳಂ ಅಣು ಸ್ಥಾವರ (IANS)
author img

By ETV Bharat Karnataka Team

Published : Jul 23, 2024, 6:42 PM IST

ಚೆನ್ನೈ: ಕೂಡಂಕುಳಂನ ಅಣು ರಿಯಾಕ್ಟರ್ ಸ್ಥಾವರದ ಬಳಿ ಸುತ್ತಾಡುತ್ತಿದ್ದ ಆರು ರಷ್ಯಾ ಪ್ರಜೆಗಳು ಮತ್ತು ಮೂವರು ಭಾರತೀಯರನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಮಾಣು ರಿಯಾಕ್ಟರ್ ಆವರಣದ ಬಳಿ ವಿದೇಶಿಯರು ಇರುವ ಬಗ್ಗೆ ಸ್ಥಳೀಯ ಜನರಿಂದ ಮಾಹಿತಿ ಬಂದ ಮೇರೆಗೆ ಸೋಮವಾರ ಸಂಜೆ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಐಎಎನ್ಎಸ್​ಗೆ ತಿಳಿಸಿದ್ದಾರೆ.

ಓರ್ವ ಮಹಿಳೆ ಸೇರಿದಂತೆ ಆರು ರಷ್ಯನ್ನರು, ಇಬ್ಬರು ತಮಿಳುನಾಡು ಮೂಲದವರು ಮತ್ತು ತಿರುವನಂತಪುರಂನ ಒಬ್ಬ ಕೇರಳೀಯನನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲವು ವಿದೇಶಿಯರು ತಮ್ಮ ಗ್ರಾಮದಲ್ಲಿ ತಿರುಗಾಡುತ್ತಿರುವುದನ್ನು ಗಮನಿಸಿದ ಇಡಿಂತಕರೈ ಗ್ರಾಮದ ಮೀನುಗಾರರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರದ ತನಿಖಾ ಸಂಸ್ಥೆಗಳು ಕಸ್ಟಡಿಯಲ್ಲಿರುವವರ ತನಿಖೆ ಆರಂಭಿಸಿವೆ ಎಂದು ತಮಿಳುನಾಡು ಪೊಲೀಸ್ ಮೂಲಗಳು ಐಎಎನ್ಎಸ್​ಗೆ ತಿಳಿಸಿವೆ. ಪೊಲೀಸರ ಪ್ರಕಾರ, ತಿರುವನಂತಪುರಂ ಮೂಲದ ವ್ಯಕ್ತಿಯು ರಷ್ಯನ್ನರನ್ನು ಈ ಸ್ಥಳಕ್ಕೆ ಕರೆತಂದ ಕ್ಯಾಬ್​ನ ಚಾಲಕನಾಗಿದ್ದಾನೆ.

ಪ್ರಯಾಣದ ದಾಖಲೆಗಳು, ರಾಷ್ಟ್ರೀಯತೆ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದ ನಂತರ ಆರು ಜನ ರಷ್ಯನ್ನರು ಎಂದು ತಿಳಿದು ಬಂದಿದೆ. ಇವರಲ್ಲಿನ ಮಹಿಳೆ ಪತ್ರಕರ್ತೆಯಾಗಿದ್ದಾಳೆ. ಇವರೆಲ್ಲರೂ ಈ ಪ್ರದೇಶಕ್ಕೆ ಬಂದ ಉದ್ದೇಶವೇನೆಂದು ಪೊಲೀಸರು ವಿಚಾರಿಸುತ್ತಿದ್ದಾರೆ.

ದಕ್ಷಿಣ ತಮಿಳುನಾಡಿನ ತಿರುನೆಲ್ವೇಲಿಯಲ್ಲಿರುವ ಕೂಡಂಕುಳಂ ಪರಮಾಣು ವಿದ್ಯುತ್ ಯೋಜನೆಯನ್ನು ರಷ್ಯಾದ ತಾಂತ್ರಿಕ ಸಹಾಯದಿಂದ ನಿರ್ಮಾಣ ಮಾಡಲಾಗಿರುವುದು ಗಮನಾರ್ಹ. ಮಾರ್ಚ್ 2022 ರಲ್ಲಿ ಸ್ಥಾವರವನ್ನು ಆರಂಭಿಸಿದಾಗ ಇದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೂಡಂಕುಳಂನಲ್ಲಿ ಪ್ರಸ್ತುತ ಎರಡು 1000 ಮೆಗಾವ್ಯಾಟ್ ಸಾಮರ್ಥ್ಯದ ಪರಮಾಣು ರಿಯಾಕ್ಟರ್​​ಗಳಿವೆ ಮತ್ತು ಅದೇ ಪ್ರದೇಶದಲ್ಲಿ ಇನ್ನೂ ನಾಲ್ಕು ರಿಯಾಕ್ಟರ್​ಗಳು ಕಾರ್ಯಾರಂಭಿಸುವ ನಿರೀಕ್ಷೆಯಿದೆ.

ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ (ಅಥವಾ ಕೆಕೆಎನ್​ಪಿಪಿ) ಭಾರತದ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾಗಿದೆ. ಮೂರು ಮತ್ತು ನಾಲ್ಕನೇ ಘಟಕಗಳ ನಿರ್ಮಾಣವು 2017 ರಲ್ಲಿ ಪ್ರಾರಂಭವಾಗಿದೆ. ಈ ಅಣು ವಿದ್ಯುತ್ ಸ್ಥಾವರವು 60 ವರ್ಷಗಳ ಉತ್ಪಾದನಾ ಜೀವಿತಾವಧಿಯನ್ನು ಹೊಂದಿದೆ. ಇದನ್ನು ಮತ್ತೆ 20 ವರ್ಷಗಳವರೆಗೆ ವಿಸ್ತರಿಸಬಹುದು. ಸ್ಥಾವರದ ಮೊದಲ ಘಟಕವು ಪ್ರತಿ ಯೂನಿಟ್ ಗೆ ಸುಮಾರು 3.89 ರೂ.ಗಳ ಅಗ್ಗದ ದರದಲ್ಲಿ ವಿದ್ಯುತ್ ಪೂರೈಸುತ್ತದೆ.

ಇದನ್ನೂ ಓದಿ : ಇಂದು ರಾಷ್ಟ್ರೀಯ ಪ್ರಸಾರ ದಿನ: ಭಾರತದ ಬೆಳವಣಿಗೆಯಲ್ಲಿ ಪ್ರಸಾರ ಕ್ಷೇತ್ರದ ಪಾತ್ರ - National Broadcasting Day

ETV Bharat Logo

Copyright © 2025 Ushodaya Enterprises Pvt. Ltd., All Rights Reserved.