ETV Bharat / bharat

8 ತಿಂಗಳಲ್ಲಿ ಈ ಮಹಾನಗರದಲ್ಲಿ 500 ಪೋಕ್ಸೋ ಪ್ರಕರಣ ದಾಖಲು: ಸ್ನೇಹ, ಪ್ರೀತಿ ಹೆಸರಲ್ಲಿ ಮೋಸ ಹೋದವರೇ ಹೆಚ್ಚು - POCSO cases

ವರದಿಗಳ ಪ್ರಕಾರ, ದಾಖಲಾದ ಪ್ರಕರಣಗಳಲ್ಲಿ ಹೆಚ್ಚಾಗಿ 12 -15 ವರ್ಷದ ಬಾಲಕಿಯರು ಬಲಿಪಶುಗಳಾಗಿದ್ದರೆ, ಅಪರಾಧಿಗಳು 25-35 ವರ್ಷ ವಯಸ್ಸಿನವರಾಗಿದ್ದಾರೆ ಎನ್ನುವುದು ಆತಂಕಕಾರಿ ವಿಷಯವಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Sep 12, 2024, 7:21 PM IST

ಹೈದರಾಬಾದ್: ನಗರದಲ್ಲಿ ಪ್ರತಿ ವರ್ಷ 400 POCSO (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಪ್ರಕರಣಗಳು ವರದಿಯಾಗುತ್ತಿವೆ. ಆತಂಕಕಾರಿ ವಿಷಯ ಎಂದರೆ ಅದರಲ್ಲಿ 80 ಶೇಕಡಾದಷ್ಟು ಪ್ರಕರಣಗಳು, ಪ್ರೀತಿಯ ಹೆಸರಿನಲ್ಲಿ ಮೋಸಗೊಳಿಸಿರುವುದಾಗಿದೆ. ಈ ವರ್ಷವೊಂದರಲ್ಲೇ ಎಂಟು ತಿಂಗಳ ಅವಧಿಯಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅವರಲ್ಲಿ 279 ಬಲಿಪಶುಗಳು, ಸ್ನೇಹಿತರು ಅಥವಾ ಪ್ರೇಮಿಗಳೆಂದು ನಂಬಿದ ಜನರಿಂದಲೇ ಆಮಿಷಕ್ಕೆ ಒಳಗಾದವರು. ಈ ಸಂಖ್ಯೆಗಳೇ ಸಮಸ್ಯೆಯ ಗಂಭೀರತೆ ಒತ್ತಿ ಹೇಳುತ್ತದೆ.

ದಿನಕ್ಕೆ ಒಂದೆರಡರಂತೆ ಕೇಸ್​ಗಳು ದಾಖಲು: ಹೈದರಾಬಾದ್‌ನ 71 ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು ಪ್ರತಿದಿನ ಸರಾಸರಿ 1-2 ದೂರುಗಳನ್ನು ವರದಿ ಮಾಡುತ್ತಾರೆ. ಅಂತಹ ಒಂದು ಪ್ರಕರಣದಲ್ಲಿ 16 ವರ್ಷದ ವಿದ್ಯಾರ್ಥಿನಿಯೊಬ್ಬಳು 35 ವರ್ಷದ ಆಟೋ ಚಾಲಕನನ್ನು ಪ್ರೀತಿಸುತ್ತಿದ್ದಳು. ಕೊನೆಗೆ ಅವನ ಜೊತೆಗಿರಲು ಆಕೆ ಮನೆಯನ್ನೂ ತೊರೆದಿದ್ದಳು. ತನ್ನನ್ನು ಆತ ವೇಶ್ಯಾವಾಟಿಕೆ ರಿಂಗ್‌ಗೆ ಮಾರಾಟ ಮಾಡಲು ಉದ್ದೇಶಿಸಿರುವುದನ್ನು ಅರಿತ ಬಾಲಕಿ, ಅದೃಷ್ಟವಶಾತ್, ಆತನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು. ಆ ವ್ಯಕ್ತಿ ಇತರ ಮೂವರು ಹುಡುಗಿಯರನ್ನು ಇದೇ ರೀತಿ ವಂಚಿಸಿದ್ದ ಎಂದು ತನಿಖೆಯ ನಂತರ ತಿಳಿದು ಬಂದಿದೆ.

ಮತ್ತೊಂದು ಪ್ರಕರಣದಲ್ಲಿ ಉತ್ತಮ ಕುಟುಂಬದ 15 ವರ್ಷದ ಬಾಲಕಿಯೊಬ್ಬಳು ಸಮಾಲೋಚನೆ ಮಾಡಿದರೂ, ಪದೇ ಪದೇ ವಿವಿಧ ಪುರುಷರ ಜೊತೆ ಪ್ರೀತಿಗೆ ಬಿದ್ದಿದ್ದಳು. ಪ್ರತಿ ಬಾರಿಯೂ ಹೆತ್ತವರು ಅವಳನ್ನು ಮನವೊಲಿಸಿ ಮನೆಗೆ ಮರಳಿ ಕರೆತರಬೇಕಾಗಿತ್ತು. ಯುವತಿಗೆ ಮಾರ್ಗದರ್ಶನ ನೀಡುವಲ್ಲಿ ಕೌನ್ಸೆಲಿಂಗ್ ಕೂಡ ವಿಫಲವಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದರು.

ವರದಿಗಳ ಪ್ರಕಾರ, 12-15 ವರ್ಷ ವಯಸ್ಸಿನ ಹುಡುಗಿಯರು ಹೆಚ್ಚಾಗಿ ಈ ರೀತಿಯ ಪ್ರಕರಣಗಳ ಬಲಿಪಶುಗಳಾಗಿದ್ದಾರೆ. ಅಪರಾಧಿಗಳು ಸಾಮಾನ್ಯವಾಗಿ 25-35 ವರ್ಷ ವಯಸ್ಸಿನವರಾಗಿದ್ದಾರೆ.

ಹುಡುಗಿಯರು ಏಕೆ ಬಲಿಯಾಗುತ್ತಿದ್ದಾರೆ?:

  • ಅಪಕ್ವ ವಯಸ್ಸು ಮತ್ತು ತಿಳಿವಳಿಕೆಯ ಕೊರತೆ
  • ಅಪರಾಧಿಯು ಕುಟುಂಬ ಸದಸ್ಯರಿಗಿಂತ ಹೆಚ್ಚು ಕಾಳಜಿ ವಹಿಸುತ್ತಾನೆ ಎಂಬ ನಂಬಿಕೆ
  • ಪೋಷಕರ ಮೇಲ್ವಿಚಾರಣೆಯ ಕೊರತೆ
  • ಪ್ರಲೋಭನೆ ಮತ್ತು ಕುಟುಂಬ ಘರ್ಷಣೆಗಳು
  • ಹಣಕಾಸಿನ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡ
  • ಬೆಳೆದಿದ್ದೇನೆ ಎಂಬ ಭಾವನೆ ಮತ್ತು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಯಕೆ
  • ಹಾರ್ಮೋನುಗಳ ಪ್ರಭಾವ ಮತ್ತು ಲೈಂಗಿಕ ವಿಷಯಗಳ ಬಗ್ಗೆ ಕುತೂಹಲ

ಮಾರ್ಗದರ್ಶನ ಮತ್ತು ಬೆಂಬಲ ಅಗತ್ಯ: ಈ ಬಗ್ಗೆ ಮಾತನಾಡುವ ಡಾ.ಗೀತಾ ಅವರು, "ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ಹಾರ್ಮೋನ್ ಬದಲಾವಣೆ ಆಗುವುದನ್ನು ಮತ್ತು ಆಕರ್ಷಣೆಯ ಪರಿಣಾಮವನ್ನು ಪೋಷಕರು ವಿವರಿಸಬೇಕು. ಸುಳ್ಳು ಪ್ರೀತಿಯ ಬಲೆಯಲ್ಲಿ ಸಿಕ್ಕಿಬಿದ್ದವರನ್ನು ಎದುರಾಳಿಗಳಂತೆ ಪರಿಗಣಿಸುವ ಬದಲು, ಅವರಿಗೆ ಬೆಂಬಲವನ್ನು ನೀಡಬೇಕು. ಅವರ ಜೀವನದಲ್ಲಿ ಸಹಜತೆಗೆ ಮರಳಲು ಸಹಾಯ ಮಾಡಬೇಕು." ಎಂದು ಮುಕ್ತ ಸಂವಹನದ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು - RAPE CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.