ETV Bharat / bharat

ಪ್ರಧಾನಿ, ಸಿಎಂ, ಸೆಲೆಬ್ರಿಟಿಗಳು ಬಳಸುವ ಬುಲೆಟ್ ಪ್ರೂಫ್ ವಾಹನ ತಯಾರಿಸುವುದೆಲ್ಲಿ ಗೊತ್ತಾ? - BULLETPROOF VEHICLES

ಜನಪ್ರತಿನಿಧಿಗಳಿಂದ ಹಿಡಿದು ಸೈನಿಕರು, ಉದ್ಯಮಿಗಳು, ಸೆಲೆಬ್ರಿಟಿಗಳು ಓಡಾಡುವುದು ಬುಲೆಟ್ ಪ್ರೂಫ್ ವಾಹನಗಳಲ್ಲೇ. ಈ ವಾಹನಗಳನ್ನು ತಯಾರಿಕಾ ವಿಧಾನ ಹೇಗಿರುತ್ತದೆ? ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

BULLETPROOF GLASS AND VEHICLES
ಬುಲೆಟ್ ಪ್ರೂಫ್ ವಾಹನ (ETV Bharat)
author img

By ETV Bharat Karnataka Team

Published : Nov 11, 2024, 5:23 PM IST

Updated : Nov 11, 2024, 5:47 PM IST

ಜೈಪುರ (ರಾಜಸ್ಥಾನ): ಭದ್ರತಾ ದೃಷ್ಟಿಯಿಂದ ಮತ್ತು ದಾಳಿಯ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು, ರಾಜಕಾರಣಿಗಳು, ಸೈನಿಕರು, ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳು ಸೇರಿದಂತೆ ಹಲವರು ಬುಲೆಟ್ ಪ್ರೂಫ್ ಕಾರುಗಳನ್ನು ಬಳಸುವುದುಂಟು. ಇಂತಹ ಬುಲೆಟ್ ಪ್ರೂಫ್ ಕಾರುಗಳನ್ನು ಜೈಪುರದಲ್ಲಿ ತಯಾರಿಸಲಾಗುತ್ತದೆ ಅನ್ನೋದು ಹೆಮ್ಮೆಯ ವಿಷಯ.

ಕಳೆದ ಹಲವು ದಶಕಗಳಿಂದ ಜೈಪುರದಲ್ಲಿ ಈ ವಾಹನಗಳನ್ನು ತಯಾರಿಸಿಕೊಂಡು ಬರಲಾಗುತ್ತಿದ್ದು, ಹಲವರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಎಕೆ-47ನಿಂದ ಹಾರಿದ ಬುಲೆಟ್ ಕೂಡ ಈ ಇಲ್ಲಿ ತಯಾರಿಸಲಾದ ವಾಹನಗಳನ್ನು ಭೇದಿಸಿಕೊಂಡು ಹೋಗುವುದಿಲ್ಲ ಅನ್ನೋದು ವಿಶೇಷ.

ಬುಲೆಟ್ ಪ್ರೂಫ್ ವಾಹನ ತಯಾರಿಸುವ ಜೈಪುರದ ಉದ್ಯಮಿಗಳೊಂದಿಗೆ ಈಟಿವಿ ಭಾರತ ಸಂದರ್ಶನ (ETV Bharat)

''ಬುಲೆಟ್ ಪ್ರೂಫ್ ವಾಹನ, ಬುಲೆಟ್ ಪ್ರೂಫ್ ಗ್ಲಾಸ್, ವಾರ್ ಶಿಪ್ ಗ್ಲಾಸ್​, ಬುಲೆಟ್ ಪ್ರೂಫ್ ಕನ್ನಡಕವನ್ನು ಇಲ್ಲಿ ತಯಾರಿಸಲಾಗುತ್ತದೆ. ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಕಳೆದ ಹಲವು ದಿನಗಳಿಂದ ಇವುಗಳನ್ನು ತಯಾರಿಸಿಕೊಂಡು ಬರಲಾಗುತ್ತದೆ'' ಎನ್ನುತ್ತಾರೆ ಬುಲೆಟ್ ಪ್ರೂಫ್ ಗ್ಲಾಸ್ ತಯಾರಿಸುವ ಕಂಪನಿಯ ನಿರ್ದೇಶಕ ಗುರ್ವೇಂದ್ರಜಿತ್ ಸಿಂಗ್.

''ಬುಲೆಟ್ ಪ್ರೂಫ್ ವಾಹನಗಳ ಜೊತೆಗೆ ಬುಲೆಟ್ ಪ್ರೂಫ್ ಗ್ಲಾಸ್ ಮತ್ತು ವಾರ್ ಶಿಪ್ ಗ್ಲಾಸ್​ಗಳನ್ನು ಸಹ ನಮ್ಮ ಕಂಪನಿ ತಯಾರಿಸುತ್ತಿದೆ. ಅಷ್ಟೇ ಅಲ್ಲದೇ ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಬುಲೆಟ್ ಪ್ರೂಫ್ ಕನ್ನಡಕವನ್ನು ನಮ್ಮ ಕಂಪನಿ ತಯಾರಿಸುತ್ತಿದೆ. ಸೇನೆಗಾಗಿ ಬುಲೆಟ್ ಪ್ರೂಫ್ ಗ್ಲಾಸ್‌ಗಳನ್ನು ಸಹ ನಾವು ಸಿದ್ಧಪಡಿಸುತ್ತಿದ್ದೇವೆ. ಇಡೀ ವಾಹನವನ್ನು 360 ಡಿಗ್ರಿ ಬುಲೆಟ್ ಪ್ರೂಫ್ ಆಗಿ ಮಾರ್ಪಾಡು ಮಾಡುತ್ತೇವೆ. ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಭದ್ರತೆಗೆ ಬಳಸುವ ಬುಲೆಟ್ ಪ್ರೂಫ್ ವಾಹನಗಳು ಇಲ್ಲಿಂದಲೇ ತಯಾರಾಗುತ್ತಿವೆ. ಇದಲ್ಲದೇ ಪ್ರಧಾನಿ ಭದ್ರತೆಗೆ ಬಳಸುವ ಬುಲೆಟ್ ಪ್ರೂಫ್ ವಾಹನಗಳನ್ನು ಸಹ ಜೈಪುರದ ನಮ್ಮ ಕಂಪನಿಯಿಂದಲೇ ತಯಾರಿಸಲಾಗುತ್ತಿದೆ. ಇಲ್ಲಿ ತಯಾರಾದ ಬುಲೆಟ್ ಪ್ರೂಫ್ ವಾಹನಗಳು ಗುಂಡಿನ ದಾಳಿಯಿಂದ ರಕ್ಷಣೆ ಒದಗಿಸಿ, ಪ್ರಾಣ ರಕ್ಷಿಸಲು ನೆರವಾಗುತ್ತವೆ'' ಎನ್ನುತ್ತಾರೆ ಗುರ್ವೇಂದ್ರಜಿತ್ ಸಿಂಗ್.

ಹೊರ ದೇಶಗಳಲ್ಲೂ ಬೇಡಿಕೆ: ''ಭಾರತ ಅಷ್ಟೇ ಅಲ್ಲದೇ ಕೆನಡಾ, ಇಸ್ರೇಲ್, ರಷ್ಯಾ, ಉಕ್ರೇನ್ ಸೇರಿದಂತೆ ಇತರ ವಿದೇಶಗಳಿಗೂ ನಮ್ಮ ಸಂಸ್ಥೆ ಬುಲೆಟ್ ಪ್ರೂಫ್ ಕನ್ನಡಕ ಸಿದ್ಧಪಡಿಸಿ ಕಳುಹಿಸುತ್ತಿದೆ. ಜೈಪುರದ ನೇಷನ್ ಬಿಲ್ಡಿಂಗ್‌ನಲ್ಲಿ ಭಾರತೀಯ ಚೇಂಬರ್ ಕಾಮರ್ಸ್ ಮತ್ತು ಇಂಡಸ್ಟ್ರಿ ಫೆಡರೇಶನ್ ಮತ್ತು ಜ್ಞಾನ ಶಕ್ತಿ ಥಿಂಕ್ ಟ್ಯಾಂಕ್ ವೆಟರನ್ಸ್‌ನಿಂದ ಸಪ್ತಶತಿ ಸಭಾಂಗಣದಲ್ಲಿ ಇಂದು ಸೆಮಿನಾರ್ ಆಯೋಜಿಸಲಾಗಿತ್ತು. ಈ ವೇಳೆ ರಾಜ್ಯ ಕೈಗಾರಿಕಾ ಸಚಿವ ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಆಗಮಿಸಿ ಇಲ್ಲಿ ತಯಾರಿಸಲಾದ ಬುಲೆಟ್ ಪ್ರೂಫ್ ವಾಹನಗಳನ್ನು ಗಮನಿಸಿದರು. ಈ ಮೊದಲು ಕೇವಲ ಭಾರತಕ್ಕೆ ಮಾತ್ರ ನಮ್ಮ ವ್ಯಾಪಾರ ಸೀಮಿತವಾಗಿತ್ತು. ಆದರೆ, ಈಗ ಪ್ರಧಾನಿ ಮೋದಿಯವರ ನಾಯಕತ್ವದಿಂದಾಗಿ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಹಾಗಾಗಿ ನಮ್ಮ ವ್ಯಾಪಾರ ಗಡಿಯಾಚೆಗೂ ದಾಟಿದೆ'' ಎನ್ನುತ್ತಾರೆ ಗುರ್ವೇಂದ್ರಜಿತ್ ಸಿಂಗ್.

ಯುದ್ಧನೌಕೆ ಗ್ಲಾಸ್: ''ನಮ್ಮ ಕಂಪನಿಯು ಈಗ ಯುದ್ಧನೌಕೆ ಗ್ಲಾಸ್ ಅನ್ನು ಸಹ ಉತ್ಪಾದಿಸುತ್ತಿದೆ. ಈ ಯುದ್ಧನೌಕೆ ಗ್ಲಾಸ್‌ಗಳು ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದರಬೇಕಾಗುತ್ತವೆ. ನೀರಿನಲ್ಲಿ ಕಾರ್ಯನಿರ್ವಹಿಸುವ ಯುದ್ಧನೌಕೆಗಳಿಗೆ ವಿಭಿನ್ನ ಉಪಕರಣಗಳು ಬೇಕಾಗುತ್ತವೆ. ಅಂತಹ ಉಪಕರಣಗಳನ್ನು ನಮ್ಮ ಕಂಪನಿ ಇದೀಗ ಸಿದ್ಧಪಡಿಸುತ್ತಿದೆ. ಈ ಗಾಜಿನ ವಿಶೇಷತೆ ಏನೆಂದರೆ ಇದನ್ನು ಬಳಸಿದರೆ ರಾಡಾರ್​ಗಳು ಸಹ ಹಡಗನ್ನು ಪತ್ತೆ ಹಚ್ಚಲು ಅಸಾಧ್ಯ'' ಎನ್ನುತ್ತಾರೆ ಗುರ್ವೇಂದ್ರಜಿತ್ ಸಿಂಗ್.

ಇದನ್ನೂ ಓದಿ: ಮೂರುವರೆ ಕೋಟಿಗೂ ಅಧಿಕ ಬೆಲೆ, 240 ಕಿಮೀ ಟಾಪ್​ ಸ್ಪೀಡ್: ಭಾರತಕ್ಕೆ ಕಾಲಿಟ್ಟ ಮರ್ಸಿಡಿಸ್ ಬೆಂಜ್​ನ ಹೊಸ ಮಾಡೆಲ್​!

Last Updated : Nov 11, 2024, 5:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.