ಅಯೋಧ್ಯಾ, ಉತ್ತರಪ್ರದೇಶ: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯ ಪಟ್ಟಾಭಿಷೇಕದ ಬಳಿಕ ವಿವಿಧ ಉತ್ಸವ ಹಾಗೂ ಕಲೆಗಳನ್ನು ಪ್ರದರ್ಶಿಸಲಾಗುತ್ತಿದೆ. ಇದೀಗ ಇಲ್ಲಿ ಜಗತ್ತಿನ ಪ್ರಮುಖ ಮ್ಯಾಜಿಶಿಯನ್ (ಜಾದೂಗಾರರು) ತಮ್ಮ ಕಲೆ ಅನಾವರಣ ಮಾಡಿ ವಿಶ್ವ ದಾಖಲೆ ಬರೆದಿದ್ದಾರೆ. ಈ ಪ್ರದರ್ಶನದಲ್ಲಿ ಭಾರತ ಮತ್ತು ನೇಪಾಳದ ಜಾದೂಗಾರರು ಭಾಗಿಯಾಗಿದ್ದಾರೆ. ಶ್ರೀರಾಮ ಜನ್ಮಭೂಮಿ ಆವರಣದಲ್ಲಿ ನೂರಾರು ಜಾದೂಗಾರರ ತಂಡವು ತಮ್ಮ ಕಲೆಯಲ್ಲಿ ಇಲ್ಲಿ ಪ್ರದರ್ಶಿಸಿ, ರಾಮಲಲ್ಲಾನ ದರ್ಶನ ಪಡೆದರು.
ರಾಮ್ ಘಾಟ್ ಪ್ರದೇಶದ ಮಂತ್ರಪ್ ಮಂಟಪದಲ್ಲಿ ಭಾರತೀಯ ಮ್ಯಾಜಿಕ್ ಕಲಾ ಟ್ರಸ್ಟ್ ಆಯೋಜಿಸಿದ್ದ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾರತ ಮತ್ತು ವಿದೇಶಗಳಿಂದ 200 ಕ್ಕೂ ಹೆಚ್ಚು ಜಾದೂಗಾರರು ಭಾಗವಹಿಸಿದ್ದರು. ಪ್ರದರ್ಶನದಲ್ಲಿ ತಮ್ಮ ಕೈಗಳಿಂದ ಶ್ರೀರಾಮ ಎಂದು ಬರೆದಿದ್ದ ಧ್ವಜವನ್ನು ಏಕಕಾಲದಲ್ಲಿ ಬಹಿರಂಗಪಡಿಸುವ ಮೂಲಕ ವಿಶ್ವದಾಖಲೆಯನ್ನು ಸಹ ಬರೆದರು. ಈ ಸಮಯದಲ್ಲಿ ಎಲ್ಲ ಜಾದೂಗಾರರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಸೇರಿದಂತೆ ಅಯೋಧ್ಯೆಯ ಅನೇಕ ಪ್ರಮುಖರು ಈ ಜಾದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಜಾದುಗಾರ ಸಾಮ್ರಾಟ್ ಮಾತನಾಡಿ, ಅಯೋಧ್ಯಾಧಾಮದಲ್ಲಿ ವಿಶ್ವದಾಖಲೆ ಮಾಡಿದ್ದೇವೆ. ಭಗವಾನ್ ರಾಮನ ಕ್ಷೇತ್ರದಲ್ಲಿ ಈ ರೀತಿಯ ದಾಖಲೆ ಮಾಡಲು ನಮಗೆ ಅವಕಾಶ ಸಿಕ್ಕಿದೆ ಎಂದರು. ಇದೊಂದು ಅಭೂತಪೂರ್ವ ದಾಖಲೆಯಾಗಿದ್ದು, ಯಾರೂ ಕೂಡ ಈ ಬಗ್ಗೆ ಕೇಳಿಲ್ಲ. ಇಂದು ಅನೇಕ ರಾಮನ ಧ್ವಜಗಳು ಕಾಣಿಸಿಕೊಂಡು ವಿಶ್ವದಾಖಲೆ ನಿರ್ಮಾಣವಾಗಿದೆ. ನಾನು ಕೂಡ ಇಲ್ಲಿಯೇ ಇರಬೇಕು ಎಂದರು.
ಇನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, ನಾನು ಈ ಹಿಂದೆ 64 ಕಲೆಗಳಿವೆ ಎಂದು ಕೇಳಿದ್ದೇನೆ. ಇಂದು ನಾನು ಯಾವುದೇ ಜಾದು ನೋಡಿಲ್ಲ, ಆದರೆ 64 ಕಲೆಗಳಲ್ಲಿ ಒಂದನ್ನು ನೋಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ಈ ಕಾರ್ಯಕ್ರಮ ನಡೆಸಿದ ಮುಖ್ಯ ಉದ್ದೇಶ ದೇಶಾದ್ಯಂತದ ಜಾದೂಗಾರರು ಸನಾತನ ಧರ್ಮದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಜನರಿಗೆ ತಿಳಿಸುವುದಾಗಿದೆ ಎಂದು ಕಾರ್ಯಕ್ರಮ ಸಂಘಟಿಸಿದ್ದ ಜಾದುಗಾರ ಕುಮಾರ್ ಕುಲದೀಪ್ ತಿಳಿಸಿದರು. ಜಾದು ಕಲೆಯ ಬೆಳವಣಿಗೆಗಾಗಿ ಇಂಡಿಯನ್ ಮ್ಯಾಜಿಕ್ ಆರ್ಟ್ ಟ್ರಸ್ಟ್ ವಿವಿಧ ಸ್ಥಳಗಳಲ್ಲಿ ಕಾಲ ಕಾಲಕ್ಕೆ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಬಾರಿ ನಾವು ಅಯೋಧ್ಯೆಯನ್ನು ಆಯ್ಕೆ ಮಾಡಿದ್ದೇವೆ ಏಕೆಂದರೆ ಇದು ಭಗವಾನ್ ಶ್ರೀರಾಮನ ಪುಣ್ಯಭೂಮಿಯಾಗಿದೆ. ಅವರ ಪಾದಗಳಿಗೆ ನಮನ ಸಲ್ಲಿಸಲು ಇಲ್ಲಿಗೆ ಬಂದಿದ್ದೇವೆ ಎಂದರು.
ಇದನ್ನೂ ಓದಿ: ಇಂದು ಬಹುದಾ ಯಾತ್ರೆ: 9 ದಿನಗಳ ನಂತರ ನಿವಾಸಕ್ಕೆ ಮರಳಲಿರುವ ಜಗನ್ನಾಥ, ಬಲಭದ್ರ, ದೇವಿ ಸುಭದ್ರಾ