ETV Bharat / bharat

ಮುಂಗಾರು ಅಧಿವೇಶನದ ಬಳಿಕ 18 ರಿಂದ 19 ಎನ್‌ಸಿಪಿ ಶಾಸಕರು ಪಕ್ಷ ಬದಲಿಸುತ್ತಾರೆ: ಶಾಸಕ ರೋಹಿತ್ ಪವಾರ್ ಸ್ಪೋಟಕ ಹೇಳಿಕೆ - Rohit Pawar - ROHIT PAWAR

''18 ರಿಂದ 19 ಎನ್‌ಸಿಪಿ ಶಾಸಕರು ತಮ್ಮ ಬಣದೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಅಧಿವೇಶನದ ನಂತರ ಅವರನ್ನು ತಮ್ಮ ಪಕ್ಷವನ್ನು ಸೇರುವ ನಿರೀಕ್ಷೆಯಿದೆ'' ಎಂದು ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ ಎನ್‌ಸಿಪಿ (ಎಸ್‌ಪಿ) ನಾಯಕ ರೋಹಿತ್ ಪವಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕಳೆದ ವರ್ಷವೂ ಎನ್​ಸಿಪಿಯಲ್ಲಿ ಇದೇ ಪರಿಸ್ಥಿತಿ ಎದುರಾಗಿತ್ತು. ಶಾಸಕರು ಪಕ್ಷ ಬದಲಾಯಿಸಿದರೆ, ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.

Monsoon Session  Rohit Pawar  NCP MLAs  Sharad Pawar
ರೋಹಿತ್ ಪವಾರ್ (ANI)
author img

By ETV Bharat Karnataka Team

Published : Jun 18, 2024, 12:51 PM IST

ಮುಂಬೈ (ಮಹಾರಾಷ್ಟ್ರ): ''ಮುಂಬರುವ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ನಂತರ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಆಡಳಿತಾರೂಢ ಎನ್‌ಸಿಪಿಯ 18​​ ರಿಂದ 19 ಶಾಸಕರು ತಮ್ಮ ಪಕ್ಷವನ್ನು ಸೇರಲಿದ್ದಾರೆ'' ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎಸ್‌ಪಿ) ನಾಯಕ ರೋಹಿತ್ ಪವಾರ್ ಸೋಮವಾರ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್ ಪವಾರ್ ಅವರು, ''ಜುಲೈ 2023ರಲ್ಲಿ ವಿಭಜನೆಯಾದ ನಂತರ ಪಕ್ಷದ ಸಂಸ್ಥಾಪಕ ಶರದ್ ಪವಾರ್ ಮತ್ತು ಇತರ ಹಿರಿಯ ನಾಯಕರ ವಿರುದ್ಧ ಎಂದಿಗೂ ಕೆಟ್ಟದಾಗಿ ಮಾತನಾಡದ ಹಲವಾರು ಎನ್‌ಸಿಪಿ ಶಾಸಕರು ಇದ್ದಾರೆ'' ಎಂದು ಅವರು ಹೇಳಿದ್ದಾರೆ. ''ಆದರೆ, ಅವರು ಶಾಸಕಾಂಗ ಅಧಿವೇಶನಕ್ಕೆ ಹಾಜರಾಗಬೇಕು ಮತ್ತು ತಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿ ಹಣವನ್ನು ಪಡೆಯಬೇಕು. ಹೀಗಾಗಿ ಅವರೆಲ್ಲ ಅಧಿವೇಶನ ಮುಗಿಯುವವರೆಗೆ ಕಾಯುತ್ತಾರೆ" ಎಂದು ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಅವರ ಮೊಮ್ಮಗ ಹೇಳಿದ್ದಾರೆ.

"ನಮ್ಮ ಮತ್ತು ಪವಾರ್ ಸಾಹೇಬ್ ಅವರೊಂದಿಗೆ 18 ರಿಂದ 19 (ಎನ್‌ಸಿಪಿ) ಶಾಸಕರು ಸಂಪರ್ಕದಲ್ಲಿದ್ದಾರೆ. ಅವರು ಮುಂಗಾರು ಅಧಿವೇಶನದ ನಂತರ ಅವರ ಪರವಾಗಿ ಹೋಗುತ್ತಾರೆ. ಶರದ್ ಪವಾರ್ ಮತ್ತು ಇತರ ಎನ್‌ಸಿಪಿ (ಎಸ್‌ಪಿ) ನಾಯಕರು ಅಥವಾ ಯಾರ ಮೂಲಕ ಮರಳಿ ಬರಲು ಪಟ್ಟು ಹಿಡಿಯಬೇಕು ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ'' ಎಂದಿದ್ದಾರೆ.

2019ರ ಚುನಾವಣೆಯಲ್ಲಿ ಅವಿಭಜಿತ ಎನ್‌ಸಿಪಿ 54 ವಿಧಾನಸಭಾ ಸ್ಥಾನಗಳನ್ನು ಗೆದ್ದಿತ್ತು. ಜುಲೈ 2023 ರಲ್ಲಿ ಪಕ್ಷವು ವಿಭಜನೆಯಾದಾಗ, ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಸುಮಾರು 40 ಶಾಸಕರು ಬೆಂಬಲ ನೀಡಿದ್ದರು. ವಿಧಾನಮಂಡಲದ ಮುಂಗಾರು ಅಧಿವೇಶನ ಜೂನ್ 27 ರಂದು ಆರಂಭವಾಗಿ ಜುಲೈ 12 ರಂದು ಕೊನೆಗೊಳ್ಳಲಿದೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಜರುಗುವ ಅಧಿವೇಶನ ಇದಾಗಿದೆ.

ಎನ್‌ಸಿಪಿ ರಾಜ್ಯಸಭಾ ಸಂಸದ ಪ್ರಫುಲ್ ಪಟೇಲ್ ಅವರು ಮುಂದಿನ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾದಾಗ ಸಚಿವರಾಗುತ್ತಾರೆ ಎಂದು ರೋಹಿತ್ ಪವಾರ್ ಹೇಳಿದ್ದಾರೆ.

"ಇದರರ್ಥ ಅಜಿತ್ ಪವಾರ್ ಅವರ ಪಕ್ಷದ ಮೇಲೆ ಪ್ರಫುಲ್ ಪಟೇಲ್ ಸಂಪೂರ್ಣ ಹಿಡಿತವನ್ನು ಹೊಂದಿದ್ದಾರೆ. ಅಜಿತ್ ಪವಾರ್ ಅಭಿವೃದ್ಧಿಗಾಗಿ (ವಿಭಜನೆ) ಅಥವಾ ಇಡಿಯಿಂದ ಪ್ರಫುಲ್ ಪಟೇಲ್ ಅವರನ್ನು ಉಳಿಸಲು ಬೇರ್ಪಟ್ಟಿದ್ದಾರೆಯೇ ಎಂದು ಪರಿಶೀಲಿಸಬೇಕಾಗಿದೆ" ಎಂದು ಅವರು ಪ್ರಶ್ನೆಯೊಂದಕ್ಕೆ ಇದೇ ವೇಳೆ ಉತ್ತರಿಸಿದರು.

ಇದನ್ನೂ ಓದಿ: ರಾಹುಲ್​ ಗಾಂಧಿ ರಾಯ್​ಬರೇಲಿ ಉಳಿಸಿಕೊಂಡಿದ್ದೇಕೆ?; ಕಾಂಗ್ರೆಸ್​​​​ ರಣತಂತ್ರದ ಹಿಂದಿನ ಗುಟ್ಟೇನು? - why rahul gandhi keep raebareli

ETV Bharat Logo

Copyright © 2025 Ushodaya Enterprises Pvt. Ltd., All Rights Reserved.