ಮಹಾಕಾಳೇಶ್ವರನ ದರ್ಶನಕ್ಕೆ ಹೊರಟ ಆಲಿಯಾ ಭಟ್ ರಣಬೀರ್ ಕಪೂರ್ - ಮಹಾಕಾಳೇಶ್ವರನ ದರ್ಶನಕ್ಕೆ ಹೊರಟ ಆಲಿಯಾ ಭಟ್
🎬 Watch Now: Feature Video
ಬಾಲಿವುಡ್ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಉಜ್ಜಯಿನಿಗೆ ತೆರಳುತ್ತಿದ್ದಾರೆ. ಮಂಗಳವಾರ ಆಲಿಯಾ ಅವರು ರಣಬೀರ್ ಮತ್ತು ಬ್ರಹ್ಮಾಸ್ತ್ರ ನಿರ್ದೇಶಕ ಅಯಾನ್ ಮುಖರ್ಜಿ ಅವರೊಂದಿಗೆ ಕಾಣಿಸಿಕೊಂಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶಿವನ ಆಶೀರ್ವಾದ ಪಡೆಯಲು ಮೂವರು ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಆಲಿಯಾ ಮತ್ತು ರಣಬೀರ್ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಬ್ರಹ್ಮಾಸ್ತ್ರ ಮೋಷನ್ ಪೋಸ್ಟರ್ ಬಿಡುಗಡೆಗೂ ಮುನ್ನ ಅಯಾನ್ ಜೊತೆಗೆ ದಂಪತಿ ಉಜ್ಜಯಿನಿಗೆ ಹೋಗಿದ್ದರು. ಬ್ರಹ್ಮಾಸ್ತ್ರ ಬಿಡುಗಡೆಗೂ ಮುನ್ನ ಅವರು ಮತ್ತೆ ಜ್ಯೋತಿರ್ಲಿಂಗಕ್ಕೆ ತೆರಳುತ್ತಿದ್ದಾರೆ.