ಸ್ವಂತ ಆಡಳಿತ ಪಕ್ಷದ ವಿರುದ್ಧವೇ ಆಕ್ರೋಶ.. ಕೊಳಚೆ ನೀರಿನಲ್ಲಿ ಕುಳಿತು ಶಾಸಕನ ಪ್ರತಿಭಟನೆ - ಕೊಳಚೆ ನೀರಿನಲ್ಲಿ ಕುಳಿತು ಶಾಸಕನ ಪ್ರತಿಭಟನೆ
🎬 Watch Now: Feature Video
ನೆಲ್ಲೂರು(ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ವಿರುದ್ಧವೇ ಶಾಸಕನೊಬ್ಬ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆಲ್ಲೂರು ಗ್ರಾಮಾಂತರ ಕ್ಷೇತ್ರದ ಶಾಸಕ ಕೋಟಂರೆಡ್ಡಿ ಶ್ರೀಧರ್ ರೆಡ್ಡಿ ಒಳಚರಂಡಿಯ ಕೊಳಚೆ ನೀರಿನಲ್ಲಿ ನಿಂತು ಪ್ರತಿಭಟನೆ ನಡೆಸಿದರು. ಕಳೆದ ಕೆಲ ದಿನಗಳಿಂದ ಕ್ಷೇತ್ರದಲ್ಲಿನ ಒಳಚರಂಡಿ ನೀರು ಹೋಗಲು ಸೇತುವೆ ನಿರ್ಮಿಸುವಂತೆ ಒತ್ತಾಯಿಸುತ್ತಿದ್ದು, ಶಾಸಕರು ಇಂದು ಸ್ಥಳಕ್ಕಾಗಮಿಸಿ, ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳು ಹಾಗೂ ಆಡಳಿತ ಪಕ್ಷದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿ ಆರಂಭಿಸುವ ಭರವಸೆ ಸಿಗುವವರೆಗೆ ಇಲ್ಲಿಂದ ತೆರಳುವುದಿಲ್ಲ ಎಂದ ಶಾಸಕರು, ನೀಡಿದ ಅವಧಿಯೊಳಗೆ ಸಮಸ್ಯೆ ಬಗೆಹರಿಸದಿದ್ದರೆ, ಕೊಳಚೆ ನಾಲೆಯಲ್ಲೇ ಮಲಗುವುದಾಗಿ ತಿಳಿಸಿದ್ದಾರೆ.