ನದಿ ನೀರಿನ ಸೆಳೆತದಲ್ಲಿಯೇ ನಡೆದು ದಡ ಸೇರಿದ ವಿದ್ಯಾರ್ಥಿಗಳು: ವಿಡಿಯೋ - ಊರು ಸೇರಲು ನದಿ ದಾಟಿದ ವಿದ್ಯಾರ್ಥಿಗಳು
🎬 Watch Now: Feature Video
ಹಿಮಚ್ಛಾದಿತ ಪ್ರದೇಶದಲ್ಲಿರುವ ಉತ್ತರಾಖಂಡದ ಜನರಿಗೆ ಮಳೆಗಾಲ ಇನ್ನಿಲ್ಲದ ಸಂಕೋಲೆಗಳಿಗೆ ದೂಡುತ್ತದೆ. ಮಳೆಯಿಂದ ಭೋರ್ಗರೆಯುವ ನದಿಗಳ ಮಧ್ಯೆಯೇ ಜನರು ಸಾಗಿ ದಡ ಸೇರಬೇಕಿದೆ. ಕಲಾಧುಂಗಿಯ ಜಿಲ್ಲೆಯ ಧಾಪ್ಲಾ ಎಂಬ ಗ್ರಾಮಸ್ಥರು ನಿಹಾಲ್ ನದಿ ಹರಿವಿನ ಮಧ್ಯೆಯೇ ನಡೆದು ಊರು ಸೇರಬೇಕಿದೆ. ಶಾಲಾ - ಕಾಲೇಜುಗಳ ಯುವಕರು, ಮಹಿಳೆಯರು ನೀರಿನ ಸೆಳೆತವನ್ನು ಮೀರಿ ದಡ ಸೇರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಾಣ ಪಣಕ್ಕಿಟ್ಟು ನದಿ ದಾಟಬೇಕಾದ ಜನರ ಸ್ಥಿತಿ ಕಂಡು ಜನರು ಮರುಗಿದ್ದಾರೆ.