ವಿದ್ಯಾರ್ಥಿನಿ ರಕ್ಷಿತಾ ಅಂತಿಮ ದರ್ಶನ..ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬಸವನಹಳ್ಳಿ ಕಾಲೇಜು - Basavanahalli College
🎬 Watch Now: Feature Video
ಬಸ್ನಿಂದ ಬಿದ್ದು ಮೆದುಳು ನಿಷ್ಕ್ರೀಯಗೊಂಡು ಮೃತಪಟ್ಟ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾ ಅವರ ಮೃತದೇಹವನ್ನು ಅಂತಿಮ ದರ್ಶನಕ್ಕೆ ನಗರದಲ್ಲಿರುವ ಬಸವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಡಲಾಗಿತ್ತು. ಈ ವೇಳೆ ಸಾವಿರಾರು ವಿದ್ಯಾರ್ಥಿಗಳು ಭಾವುಕರಾಗಿದ್ದಾರೆ. ಈ ವೇಳೆ, ಸಾವಿರಾರು ಗೆಳತಿಯರು ರಕ್ಷಿತಾ ಅಣ್ಣನನ್ನು ತಬ್ಬಿ ಪುನೀತ್ ರಾಜ್ಕುಮಾರ್ ಅವರ ಸಿನಿಮಾ ಹಾಡನ್ನು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ರಕ್ಷಿತಾಳ ಮೃತದೇಹ ನೋಡಿ ಶಿಕ್ಷಕರು, ಸಾರ್ವಜನಿಕರು ಕಣ್ಣೀರು ಹಾಕಿದ್ದು, ಎಲ್ಲರೂ ಅಂತಿಮ ದರ್ಶನ ಪಡೆದ ನಂತರ ಚಿಕ್ಕಮಗಳೂರು ನಗರದಿಂದ ಸ್ವಗ್ರಾಮಕ್ಕೆ ರಕ್ಷಿತಾ ಮೃತದೇಹ ರವಾನೆ ಮಾಡಲಾಗುತ್ತಿದೆ.