ಕ್ವಿಟ್ ಇಂಡಿಯಾ ಚಳುವಳಿಗೆ 79ನೇ ವರ್ಷ: ವಿಡಿಯೋ ನೋಡಿ ಘಟನೆಯನ್ನೊಮ್ಮೆ ಸ್ಮರಿಸಿ - ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಬಾಂಬೆ ಅಧಿವೇಶನ
🎬 Watch Now: Feature Video
ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಮಹಾತ್ಮ ಗಾಂಧಿಯವರು 1942ರ ಆಗಸ್ಟ್ 8ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಬಾಂಬೆ ಅಧಿವೇಶನದಲ್ಲಿ 'ಆಗಸ್ಟ್ ಚಳುವಳಿ' ಎಂದು ಕರೆಯಲ್ಪಡುವ ಕ್ವಿಟ್ ಇಂಡಿಯಾ ಚಳುವಳಿಯನ್ನು ಆರಂಭಿಸಿದರು. ಗಾಂಧೀಜಿ ಅವರು 'ಮಾಡು ಇಲ್ಲವೇ ಮಡಿ' ಎಂದು ಕರೆ ನೀಡಿದ ಬೆನ್ನಲ್ಲೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬಹುತೇಕ ನಾಯಕರನ್ನು ಈ ವೇಳೆ ಜೈಲಿಗಟ್ಟಲಾಯಿತು. ಐತಿಹಾಸಿಕ ಚಳುವಳಿ ನಡೆದು ಇಂದಿಗೆ 79 ವರ್ಷಗಳು ಸಂದಿದೆ. ಈ ಕುರಿತ ವಿಡಿಯೋ ಚಿತ್ರಣ ಇಲ್ಲಿದೆ.