ಪ್ರವಾಸಿಗರನ್ನು ಆಕರ್ಷಿಸುತ್ತಿದೆ ವಿಶ್ವ ನೈಸರ್ಗಿಕ ಪರಂಪರೆ ತಾಣ 'ಹೂವಿನ ಕಣಿವೆ' - ವ್ಯಾಲಿ ಆಫ್ ಫ್ಲವರ್ಸ್

🎬 Watch Now: Feature Video

thumbnail

By

Published : Jul 13, 2022, 12:25 PM IST

'ವ್ಯಾಲಿ ಆಫ್ ಫ್ಲವರ್ಸ್' ಎಂಬ ಸುಂದರವಾದ ಸ್ಥಳವು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿದೆ. ಸಮುದ್ರ ಮಟ್ಟದಿಂದ 6,234 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಈ ಸ್ಥಳವು ಸ್ಥಳೀಯ ಆಲ್ಪೈನ್ ಹೂವುಗಳ ಹುಲ್ಲುಗಾವಲುಗಳಿಗೆ ಹೆಸರುವಾಸಿಯಾಗಿದೆ. ಈ ಕಣಿವೆಯನ್ನು ಯುನೆಸ್ಕೋ 2005 ರಲ್ಲಿ 'ವಿಶ್ವ ನೈಸರ್ಗಿಕ ಪರಂಪರೆ'ಯೆಂದು ಘೋಷಿಸಿದೆ. ಸ್ಥಳೀಯ ಜನರು ಈ ಸ್ಥಳವನ್ನು ದೇವತೆಗಳ ನಿವಾಸವೆಂದು ಪರಿಗಣಿಸುತ್ತಾರೆ. ಇದರ ಸೌಂದರ್ಯ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದ್ದು, ಹೂವಿನ ಕಣಿವೆಯಲ್ಲಿ ಬಣ್ಣಬಣ್ಣದ ಪುಷ್ಪಗಳು ಅರಳಿ ನಿಂತು ಪ್ರವಾಸಿಗರನ್ನ ಆಕರ್ಷಿಸುತ್ತಿವೆ. ಇದುವರೆಗೆ 47 ವಿದೇಶಿ ಪ್ರವಾಸಿಗರೂ ಸೇರಿದಂತೆ 3,868 ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಣಿವೆಗೆ ಭೇಟಿ ನೀಡಲು ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಇಲ್ಲಿ ಬ್ರಹ್ಮಕಮಲ ಅರಳುತ್ತದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.