ನ್ಯಾಕ್ ಕಮಿಟಿಯಿಂದ ಕವಿವಿಗೆ ಎ ಗ್ರೇಡ್.. ಕುಲಸಚಿವರ ಸಖತ್ ಡ್ಯಾನ್ಸ್ - ನ್ಯಾಕ್ ಕಮಿಟಿಯಿಂದ ಕವಿವಿಗೆ ಎ ಗ್ರೇಡ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16678126-thumbnail-3x2-kud.jpg)
ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಕುಲಸಚಿವ ಭರ್ಜರಿ ಡ್ಯಾನ್ಸ್ ಮಾಡಿದ ವಿಡಿಯೋ ಇದೀಗ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕುಲಸಚಿವ ಯಶಪಾಲ್ ಕ್ಷೀರಸಾಗರ ಅವರು ಸಹ ಅದ್ಭುತ ಸ್ಟೆಪ್ ಹಾಕುವ ಮೂಲಕ ಡ್ಯಾನ್ಸ್ ಮಾಡಿದ್ದಾರೆ. ನ್ಯಾಕ್ ಕಮಿಟಿಯಿಂದ ವಿವಿಗೆ ಎ ಗ್ರೇಡ್ ಸಿಕ್ಕಿರುವ ಹಿನ್ನೆಲೆಯಲ್ಲಿ ಶನಿವಾರ ಕವಿವಿಯು ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು. ಕವಿವಿ ಕುಲಪತಿ ಗುಡಸಿ, ಸೇರಿದಂತೆ ಕವಿವಿಯ ಪ್ರೊಫೆಸರ್ ಗಳು, ಶಿಕ್ಷಕೇತರ ಸಿಬ್ಬಂದಿಯೂ ಸಹ ಪಾಲ್ಗೊಂಡಿದ್ದರು. ಈ ವೇಳೆ ಕುಲಸಚಿವ ಯಶಪಾಲ್ ಕ್ಷೀರಸಾಗರ ಜತೆಗೆ ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸಹ ಖುಷಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಕಾರ್ಯಕ್ರಮದ ಡ್ಯಾನ್ಸ್ ಸಂಪೂರ್ಣ ವಿಡಿಯೋ ಸೋಸಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.