ಖಾದಿ ಉದ್ಯಮಕ್ಕೆ ಕೇಂದ್ರ ಸರ್ಕಾರದಿಂದ ದ್ರೋಹ: ಮಹಮ್ಮದ್ ನಲ್ಪಾಡ್ - ರಾಷ್ಟ್ರಧ್ವಜಕ್ಕೆ ಅನ್ಯಾಯ
🎬 Watch Now: Feature Video
ಹುಬ್ಬಳ್ಳಿ : ಪ್ರಧಾನಿ ಮೋದಿ ಅವರು Make in India ಅಂತಾರೆ. ಆದ್ರೆ ರಾಷ್ಟ್ರಧ್ವಜ ವಿಚಾರದಲ್ಲಿ ಮೇಕ್ ಇನ್ ಚೀನಾ ಅಂತಾರೆ. ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡುವ ಮೂಲಕ ಖಾದಿಗೆ ಅಪಮಾನ ಮಾಡಿದ್ದಾರೆ. ಬ್ರಿಟಿಷರನ್ನ ದೇಶದಿಂದ ಓಡಿಸಲು ದೊಡ್ಡ ಅಸ್ತ್ರವಾಗಿದ್ದೇ ಖಾದಿ. ಇದೇ ಖಾದಿಗೆ ಕೇಂದ್ರ ಸರ್ಕಾರದಿಂದ ದ್ರೋಹವಾಗಿದೆ ಎಂದು ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಹಮ್ಮದ್ ನಲ್ಪಾಡ್ ಕಿಡಿಕಾರಿದ್ದಾರೆ. ಪಾಲಿಸ್ಟರ್ ಧ್ವಜ ಪರಿಸರ ಸ್ನೇಹಿ ಅಲ್ಲ, ನಮ್ಮ ರಾಷ್ಟ್ರಧ್ವಜವನ್ನ ನಮ್ಮ ದೇಶದಲ್ಲಿ ತಯಾರಿಸದೇ ನಮಗೆಲ್ಲ ದೊಡ್ಡ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದರು.