ಜ್ಞಾನವಾಪಿ ಮಸೀದಿಯ ಬಾವಿಯಲ್ಲಿ ಶಿವಲಿಂಗ ಪತ್ತೆ.. ಶಿವನ ಅನುಯಾಯಿಗಳಿಗೆ ಸಂತೋಷದ ಸುದ್ದಿ ಎಂದ ಯುಪಿ ಡಿಸಿಎಂ.. - ಕೇಶವ್ ಪ್ರಸಾದ್ ಮೌರ್ಯ
🎬 Watch Now: Feature Video
ಲಖನೌ : ಕಾಶಿ ವಿಶ್ವನಾಥ ಮಂದಿರದ ಬಳಿಯ ಜ್ಞಾನವಾಪಿ ಮಸೀದಿ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮಾತನಾಡಿದ್ದಾರೆ. ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿರುವುದು ನನಗೆ ಮತ್ತು ದೇಶದ ಶಿವನ ಅನುಯಾಯಿಗಳಿಗೆ ಸಂತೋಷದ ಸುದ್ದಿ. ಸತ್ಯ ಬೆಳಕಿಗೆ ಬಂದಿದೆ. ಈ ವಿಷಯದಲ್ಲಿ ನಾವು ಕೋರ್ಟ್ನ ಆದೇಶ ಸ್ವಾಗತ ಮಾಡುತ್ತೇವೆ ಮತ್ತು ಅನುಕರಣೆ ಮಾಡುತ್ತೇವೆ ಎಂದಿದ್ದಾರೆ. ಶಿವಲಿಂಗ ಪತ್ತೆಯಾದ ಸ್ಥಳವನ್ನು ಸೀಜ್ ಮಾಡಿ, ಆ ಸ್ಥಳಕ್ಕೆ ಯಾರೂ ಹೋಗದಂತೆ ಭದ್ರತೆ ಒದಗಿಸಬೇಕೆಂದು ಜಿಲ್ಲಾಧಿಕಾರಿಗೆ ವಾರಣಾಸಿ ಕೋರ್ಟ್ ಆದೇಶಿಸಿದೆ.