ಬೆಂಕಿ ಅವಘಡ ಸ್ಥಳಕ್ಕೆ ಎಚ್.ಕೆ. ಪಾಟೀಲ್ ಭೇಟಿ, ಪರಿಹಾರದ ಭರವಸೆ - ಸ್ಥಳೀಯ ಶಾಸಕ ಎಚ್ ಕೆ ಪಾಟೀಲ್ ಅವರಿಗೆ ಮನವಿ

🎬 Watch Now: Feature Video

thumbnail

By

Published : Feb 6, 2020, 5:05 AM IST

ಗದಗದ ಗ್ರೇನ್ ಮಾರುಕಟ್ಟೆಗೆ ನಿನ್ನೆ ಬೆಳಗಿನ ಜಾವ ಸಂಭವಿಸಿದ ಅಗ್ನಿ ಅವಘಡ ಹಿನ್ನೆಲೆ ಶಾಸಕ ಎಚ್.ಕೆ ಪಾಟೀಲ್ ಹಾಗೂ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು 65 ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಬಸ್ಮವಾಗಿದ್ದು, 2 ಕೋಟಿಗೂ ಹೆಚ್ಚು ಹಾನಿ ಸಂಭವಿಸಿದೆ. ಈ ವೇಳೆ ಮಾತನಾಡಿದ ಶಾಸಕ ಎಚ್ ಕೆ ಪಾಟೀಲ್, ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಸುಮಾರು ‌65 ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಇದರಿಂದಾಗಿ ಎರಡು ಕೋಟಿಯಷ್ಟು ಹಾನಿಯಾಗಿದ್ದು, ಸರ್ಕಾರ ಕೂಡಲೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಅಂತಾ ಒತ್ತಾಯ ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.