ಹರ್ ಘರ್ ತಿರಂಗಾ.. ಪುಟಾಣಿಗಳಿಗೆ ಬಾವುಟ ನೀಡಿದ ಹೀರಾಬೆನ್ ಮೋದಿ - ಈಟಿವಿ ಭಾರತ ಕರ್ನಾಟಕ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16093694-thumbnail-3x2-wdfdfdf.jpg)
ಗಾಂಧಿನಗರ(ಗುಜರಾತ್): 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಇಂದಿನಿಂದ ಆರಂಭವಾಗಿದೆ. ಪ್ರತಿ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಅಭಿಯಾನಕ್ಕೆ ಚಾಲನೆ ಸಿಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಪುಟಾಣಿ ಮಕ್ಕಳಿಗೆ ಬಾವುಟ ನೀಡಿದ್ದಾರೆ. ಗಾಂಧಿನಗರದ ತಮ್ಮ ನಿವಾಸದಲ್ಲಿ ಪ್ರಧಾನಿ ಅವರ ತಾಯಿ ಹೀರಾಬೆನ್ ಅವರು ಮಕ್ಕಳ ಕೈಗೆ ರಾಷ್ಟ್ರಧ್ವಜ ನೀಡಿ, ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.