ಚೊಚ್ಚಲ ಪ್ರಯತ್ನದಲ್ಲೇ ಪ್ರಶಸ್ತಿ ಗೆದ್ದ ಗುಜರಾತ್.. ಗಾಂಧಿನಗರದಲ್ಲಿ ಅದ್ಧೂರಿ ವಿಜಯೋತ್ಸವ! - ಗುಜರಾತ್ ಟೈಟನ್ಸ್ ವಿಜಯೋತ್ಸವ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15428128-thumbnail-3x2-wdfddf.jpg)
ಗಾಂಧಿನಗರ : 15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚಾಂಪಿಯನ್ ಆಗಿ ಗುಜರಾತ್ ಟೈಟನ್ಸ್ ಹೊರಹೊಮ್ಮಿದೆ. ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ 7 ವಿಕೆಟ್ಗಳ ಗೆಲುವು ದಾಖಲಿಸಿತು. ಪ್ರಶಸ್ತಿ ಗೆದ್ದ ಹುಮ್ಮಸ್ಸಿನಲ್ಲಿರುವ ಹಾರ್ದಿಕ್ ಪಾಂಡ್ಯ ಪಡೆ ಇಂದು ಗಾಂಧಿನಗರದಲ್ಲಿ ಅದ್ಧೂರಿ ವಿಜಯೋತ್ಸವದಲ್ಲಿ ಭಾಗಿಯಾಯಿತು. ತೆರೆದ ವಾಹನದಲ್ಲಿ ಪ್ರಶಸ್ತಿ ಜೊತೆಗೆ ಮೆರವಣಿಗೆ ನಡೆಸಿತು. ಇದಕ್ಕೂ ಮುಂಚಿತವಾಗಿ ನಡೆದ ಕಾರ್ಯಕ್ರಮದಲ್ಲಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಗುಜರಾತ್ ಟೈಟನ್ಸ್ ತಂಡವನ್ನ ಅಭಿನಂದಿಸಿದರು. ಜೊತೆಗೆ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಸ್ಮರಣಿಕೆ ನೀಡಿದರು.