ವಿಡಿಯೋ: ಎರಡು ಆಟೋಗಳ ನಡುವೆ ರೇಸ್; ಕೂದಲೆಳೆ ಅಂತರದಲ್ಲಿ ಬಾಲಕ ಪಾರು

By

Published : Jun 9, 2022, 9:46 PM IST

thumbnail
ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಜಿದ್ದಿಗೆ ಬಿದ್ದವರಂತೆ ರೇಸ್ ರೀತಿಯಲ್ಲಿ ಹೊರಟ ಎರಡು ಆಟೋ ಚಾಲಕರ ಹುಚ್ಚಾಟಕ್ಕೆ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಒಂದರ ಹಿಂದೆ ಮತ್ತೊಂದು ಆಟೋ ಅತಿವೇಗದಲ್ಲಿ ಬಂದಿದೆ. ಮೊದಲನೇ ಆಟದಿಂದ ಬಾಲಕ ಬಚಾವ್ ಆಗಿದ್ದಾನೆ. ಆದರೆ ಎರಡನೇ ಆಟೋ ಬಾಲಕನನ್ನು ಗುದ್ದಿಕೊಂಡು ಹೋಗಿದೆ. ಆಟೋ ಗುದ್ದಿದ ರಭಸಕ್ಕೆ ಬಾಲಕ 20 ಅಡಿಗೂ ಹೆಚ್ಚು ದೂರ ಹೋಗಿ ಬಿದ್ದಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.