ಬೀದರ್: ವಟ ಸಾವಿತ್ರಿ ವ್ರತ ಆಚರಿಸಿದ ಮಹಿಳೆಯರು - Vata Savitri Hunnime
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7487129-171-7487129-1591351790071.jpg)
ಬೀದರ್: ಗಂಡನಿಗೆ ಯಾವುದೇ ಸಂಕಷ್ಟ ಬಾರದಿರಲಿ ಎಂದು ಮುತ್ತೈದೆಯರು ಆಚರಿಸುವ ವಟ ಸಾವಿತ್ರಿ ಹುಣ್ಣಿಮೆಯನ್ನು ಜಿಲ್ಲೆಯ ಗಡಿ ಭಾಗದ ಹಲವಾರು ಗ್ರಾಮಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹುಣ್ಣಿಮೆಯ ಈ ದಿನದಂದು ಪತ್ನಿಯರು ಉಪವಾಸ ಮಾಡಿ ಆಲದ ಮರಕ್ಕೆ ಪೂಜೆ ಮಾಡಿ ಮರಕ್ಕೆ ದಾರ ಸುತ್ತಿ ಸುತ್ತಿಗೆಯಿಂದ ಹೊಡೆಯುವ ಮೂಲಕ ಗಂಡನಿಗೆ ಸುದೀರ್ಘ ಆಯಸ್ಸು ಇರಲಿ. ಯಾವುದೇ ಸಂಕಟ, ಸಂಕಷ್ಟ ಬಾರದಿರಲಿ ಎಂದು ಬೇಡಿ ವಟ ಸಾವಿತ್ರಿ ವ್ರತ ಆಚರಿಸಲಾಗುತ್ತದೆ ಎಂದು ಹೇಳುತ್ತಾರೆ ಮಹಿಳೆಯರು.