ಬಳ್ಳಾರಿಯ ಶ್ರೀ ಎರ್ರಿತಾತನ ಮಹಾರಥೋತ್ಸವ ಸಂಪನ್ನ - bellary Shree errithatha maha rathothsava held
🎬 Watch Now: Feature Video
ಬಳ್ಳಾರಿ: ತಾಲೂಕಿನ ಚೇಳ್ಳಗುರ್ಕಿಗ್ರಾಮದಲ್ಲಿ ಶ್ರೀ ಎರ್ರಿತಾತನ ಮಹಾರಥೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿತು. ತಾತನ ಪಲ್ಲಕ್ಕಿಯೊಂದಿಗೆ ಗೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ರಥೋತ್ಸವದಲ್ಲಿ ಭಾಗವಹಿಸಿದ್ದವು. ಮಹಾರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ನೆರೆಯ ರಾಜ್ಯ ಆಂಧ್ರಪ್ರದೇಶದಿಂದಲೂ ಸಾವಿರಾರು ಭಕ್ತಾದಿಗಳು ಆಗಮಿಸಿದ್ದರು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರು ತಾತನಿಗೆ ಹೂ- ಹಣ್ಣು ಅರ್ಪಿಸಿ, ಕರ್ಪೂರದಾರತಿಯ ವಿಶೇಷ ಸೇವೆ ಸಲ್ಲಿಸಿದರು. ಹೊಸದಾಗಿ ವಿವಾಹವಾಗಿದ್ದ ನವ ಜೋಡಿಗಳು ರಥೋತ್ಸವದ ಕಳಸವನ್ನು ಕಣ್ತುಂಬಿಕೊಂಡರು. ಶ್ರೀ ಎರ್ರಿಸ್ವಾಮಿ ಟ್ರಸ್ಟ್ ಕಮಿಟಿ ಮತ್ತು ದಾಸೋಹ ಸೇವಾ ಸಂಘದ ವತಿಯಿಂದ ವಸತಿ ಮತ್ತು ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.