ಯಡಿಯೂರಪ್ಪ ಕುದುರೆ ವ್ಯಾಪಾರದ ಸಿಇಓ: ಎಐಸಿಸಿ ವಕ್ತಾರ ಆಪಾದನೆ - ಎಐಸಿಸಿ ವಕ್ತಾರ ಜೈವೀರ್ ಶೇರ್ಗಿಲ್
🎬 Watch Now: Feature Video
ಮಂಗಳೂರು: ಅನರ್ಹ ಶಾಸಕರಿಗೆ ಕನಿಕರ ತೋರಿರುವ ಆಡಿಯೋ ಬಹಿರಂಗ ಆಗಿರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕುದುರೆ ವ್ಯಾಪಾರ ಮಾಡಿದ್ದಾರೆ ಎಂಬುದು ಸಾಬೀತಾಗಿದೆ. ಅವರು ಕುದುರೆ ವ್ಯಾಪಾರದ ಸಿಇಓ ಎಂದು ಎಐಸಿಸಿ ವಕ್ತಾರ ಜೈವೀರ್ ಶೇರ್ಗಿಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದ್ದಾರೆ. ಕರ್ನಾಟಕದಲ್ಲಿ ಜನಾಭಿಪ್ರಾಯದ ವಿರುದ್ದವಾಗಿ ಹಣಬಲ ಮತ್ತು ತೋಳ್ಬಲದಿಂದ ಅಧಿಕಾರ ನಡೆಸಿದ್ದಾರೆ. ಆಡಿಯೋದಲ್ಲಿ ಕೇಂದ್ರ ಗೃಹ ಸಚಿವರ ಹೆಸರು ಪ್ರಸ್ತಾಪ ಮಾಡಿದ್ದು, ಅಮಿತ್ ಶಾ ವಿವರಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.