ಬೋರ್ಗರೆಯುತ್ತಿರುವ ಘಟಪ್ರಭಾ... ದಿಕ್ಕು ತೋಚದಾದ ಬಾಗಲಕೋಟೆ ಜನ! - bhagalkot flood news
🎬 Watch Now: Feature Video
ಮಹಾರಾಷ್ಟ್ರ ರಾಜ್ಯದಲ್ಲಿ ಮಳೆ ಆರ್ಭಟ ಹೆಚ್ಚಾಗಿರೋದ್ರಿಂದ ಕೃಷ್ಣ, ಘಟಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಸುಮಾರು 35 ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರು ಬಿಡುತ್ತಿರುವುದರಿಂದ ಮುಧೋಳ ಹಾಗೂ ರಬಕವಿ - ಬನಹಟ್ಟಿ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಢವಳೇಶ್ವರ ಗ್ರಾಮ ಸಂಪೂರ್ಣ ಜಲಾವೃತ್ತಗೊಂಡಿದ್ದು, ಸುಮಾರು 300ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿದ್ದು, ಈ ಸ್ಥಳಾಂತರ ಮಾಡಲಾಗುತ್ತಿದೆ. ಗ್ರಾಮದ ಪ್ರಮುಖ ರಸ್ತೆ ಸೇರಿದಂತೆ, ಮನೆಗಳಲ್ಲಿ ನೀರು ನುಗ್ಗಿ ಜನರು ಆತಂಕ ಪಡುತ್ತಿದ್ದಾರೆ. ಈ ಬಗ್ಗೆ ಈಟಿವಿ ಭಾರತ್ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ..
Last Updated : Aug 8, 2019, 4:03 PM IST