ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ಟ್ರ್ಯಾಕ್ಟರ್: ಸಾಹಸ ಮೆರೆದು ದಡಕ್ಕೆ ತಂದ ಗ್ರಾಮಸ್ಥರು- ವಿಡಿಯೋ - Flood in Vijayapura
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4745727-thumbnail-3x2-viral.jpg)
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕಡಕೋಳ ಗ್ರಾಮದ ಬಳಿ ಡೋಣಿ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಟ್ರ್ಯಾಕ್ಟರ್ನ್ನು ಹಗ್ಗ ಕಟ್ಟಿ ಜೆಸಿಬಿ ಮೂಲಕ ಎಳೆದು ಗ್ರಾಮಸ್ಥರು ದಡ ಸೇರಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ರಕ್ಷಣಾ ಕಾರ್ಯದ ವಿಡಿಯೋ ವೈರಲ್ ಆಗಿದೆ. ಗ್ರಾಮಸ್ಥರ ಈ ಸಾಹಸ ಮತ್ತ ಸಮಯಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದವರನ್ನು ಗ್ರಾಮದ ಸಂಗನಗೌಡ ಯಲರಡ್ಡಿ, ಹನುಮಂತ ತಳವಾರ, ಪರಸುರಾಮ ತಳವಾರ, ಪ್ರಭು ಗುಡ್ಡೋಡಗಿ, ಪ್ರಕಾಶ್ ಗುನ್ನಾಪುರ ಟ್ರ್ಯಾಕ್ಟರ್ಅನ್ನು ನಿಲ್ಲಿಸಿ, ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.