ಸಿಲಿಕಾನ್ ಸಿಟಿಯಲ್ಲಿ ವಿಜಯದಶಮಿ ಅದ್ಧೂರಿ ಉತ್ಸವ - ಬೆಂಗಳೂರು ಸುದ್ದಿ
🎬 Watch Now: Feature Video
ಬೆಂಗಳೂರು: ನಗರದಲ್ಲಿಂದು ಶಾರ್ವರಿ ಸಂವತ್ಸರದ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಧರ್ಮದ ಮೇಲೆ ಧರ್ಮದ ವಿಜಯೋತ್ಸವದ ಪ್ರತೀಕವಾದ ಶಮಿ ಪೂಜೆಯನ್ನು ಪೂಜಾ ಮಂದಿರಗಳಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಮಲ್ಲೇಶ್ವರಂ, ಯಶವಂತಪುರ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಿದ್ದು, ಜನಗಳು ಹಬ್ಬದ ಖರೀದಿಯಲ್ಲಿ ನಿರತರಾಗಿದ್ದಾರೆ. ಬೆಲೆಗಳು ಗಗನಕ್ಕೇರಿದ್ದರೂ ಸಂಸ್ಕೃತಿಯ ಪ್ರತೀಕವಾದ ಹಬ್ಬಗಳನ್ನು ಹೇಗೆ ಬಿಡುವುದು ಎಂಬುದು ಗ್ರಾಹಕರ ಅಭಿಪ್ರಾಯವಾಗಿದೆ. ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ದೇವಾಲಯ, ಗಂಗಮ್ಮ ದೇವಾಲಯ, ಕನ್ನಿಕ ಪರಮೇಶ್ವರಿ ದೇವಾಲಯದಲ್ಲಿ ದೇವಿಯ ಅಲಂಕಾರವನ್ನು ಕಣ್ಣುತುಂಬಿಕೊಳ್ಳಲು ಜನಸ್ತೋಮವೇ ಹರಿದುಬಂದಿತ್ತು.