ಗಂಗಾವತಿ:ವಿಜಯನಗರ ಅರಸರ ಕಾಲದ ದೇಗುಲದಲ್ಲಿ ವೈಭವದ ವೈಕುಂಠ ಏಕಾದಶಿ - ಅರಸರ ದೇಗುಲದಲ್ಲಿ ವೈಭವದ ವೈಕುಂಠ ಏಕಾದಶಿ
🎬 Watch Now: Feature Video

ವಿಜಯನಗರದ ಅರಸರ ಕಾಲದಲ್ಲಿ ನಿರ್ಮಾಣವಾಗಿ ಬಳಿಕ ಕನಕಗಿರಿಯ ನಾಯಕರ ಪಾಳೆಗಾರಿಕೆಯಲ್ಲಿ ಜೀರ್ಣೋದ್ಧಾರವಾಗಿದ್ದು ಎಂದು ಹೇಳಲಾಗುವ ತಾಲೂಕಿನ ವೆಂಕಟಗಿರಿಯ ವೆಂಕಟೇಶ್ವರ ದೇಗುಲದಲ್ಲಿ ವೈಭವದಿಂದ ವೈಕುಂಠ ಏಕಾದಶಿ ಆಚರಿಸಲಾಯಿತು. ದೇಗುಲದಲ್ಲಿ ಪುರೋಹಿತರ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ದೇಗುಲದ ಪ್ರಾಂಗಣದಲ್ಲಿ ಪಂಡಿತರಿಂದ ಅಷ್ಟೋತ್ತರ ಪಾರಾಯಣ, ವಿಷ್ಣು ಸಹಸ್ರನಾಮಾವಳಿ ಪಠಣ, ವೇದ ಪಾರಾಯಣ, ಮಂತ್ರೋಚ್ಛಾರಣೆ ನಡೆಯಿತು.