ಕಗ್ಗೇರಿ ಬಳಿ ಪ್ರತ್ಯಕ್ಷವಾದ ಕಾಡಾನೆಗಳು: ಜನರಲ್ಲಿ ಆತಂಕ - ಕಗ್ಗೇರಿ ಬಳಿ ಪ್ರತ್ಯಕ್ಷವಾದ ಕಾಡಾನೆಗಳು
🎬 Watch Now: Feature Video
ಮೈಸೂರು: ಕೆ.ಆರ್ ನಗರ ತಾಲೂಕಿನ ಕಗ್ಗೇರಿ ಬಳಿಯ ಜೋಳದ ಗದ್ದೆಯಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು ಜನರು ಭಯಭೀತರಾಗಿದ್ದಾರೆ. ಕೆ.ಆರ್.ನಗರ ತಾಲೂಕಿನ ಕಸಬಾ ಹೋಬಳಿಯ ಕಗ್ಗೇರಿ ಹಾಗೂ ಚಾಮಲಪುರ ಮಾರ್ಗದಲ್ಲಿರುವ ಜೋಳ ಹಾಗೂ ಭತ್ತದ ಗದ್ದೆಗೆ ಎರಡು ಕಾಡಾನೆಗಳು ದಾಳಿ ಮಾಡಿದ್ದು, ಆನೆಗಳನ್ನು ನೋಡಲು ಸುತ್ತಮುತ್ತಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ. ಈ ಆನೆಗಳನ್ನು ಕಾಡಿಗಟ್ಟಲು ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದು, ಸ್ಥಳದಲ್ಲೇ ಮುಕ್ಕಾಂ ಹೂಡಿದ್ದಾರೆ. ಈ ಕಾಡಾನೆಗಳು ಹುಣಸೂರಿನ ಕಡೆಯ ಅರಬ್ಬಿತಿಟ್ಟು ಅರಣ್ಯ ಪ್ರದೇಶದಿಂದ ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.