ಸಿಡಿಲಿಗೆ ಎರಡು ಹಸುಗಳು ಬಲಿ: ಮುಗಿಲು ಮುಟ್ಟಿದ ಮಹಿಳೆಯ ಆಕ್ರಂದನ - Chamarajanagar
🎬 Watch Now: Feature Video
ಸಿಡಿಲು ಬಡಿದು ಎರಡು ಹಸುಗಳು ಬಲಿಯಾಗಿರುವ ಘಟನೆ ಚಾಮರಾಜನಗರದ ಹನೂರು ತಾಲೂಕಿನ ಅಜ್ಜೀಪುರದಲ್ಲಿ ನಡೆದಿದೆ. ಗ್ರಾಮದ ಮುನಿಗೌಡ ಎಂಬುವರು ಜಮೀನಿನಲ್ಲಿ ಹಸುಗಳನ್ನು ಕಟ್ಟಿ ಹಾಕಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಅಸುನೀಗಿವೆ. ಹಸುಗಳು ಮೃತಪಟ್ಟ ವಿಚಾರ ತಿಳಿದ ಕೂಡಲೇ ಮುನಿಗೌಡ ಅವರ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತ್ತು. 1.60 ಲಕ್ಷ ರೂ. ಬೆಲೆ ಬಾಳುವ ಹಸುಗಳು ಎನ್ನಲಾಗಿದೆ. ಸ್ಥಳಕ್ಕೆ ಆರ್ಐ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.