ಯಲಗೋಡ ಸ್ವಾಮೀಜಿ ಕಾರು ಡಿಕ್ಕಿ,ದಂಪತಿ ಸಾವು : ಸಿಸಿಟಿವಿ ವಿಡಿಯೋ - ಪರಮಾನಂದ ಮಠದ ಸ್ವಾಮೀಜಿ ಕಾರು ಡಿಕ್ಕಿ
🎬 Watch Now: Feature Video
ಕಲಬುರಗಿ ಜಿಲ್ಲೆಯ ಫರತಾಬಾದ ಬಳಿಯ ಕೂಡಿ ಕ್ರಾಸ್ ಹತ್ತಿರ ಯಲಗೋಡ ಮಠದ ಸ್ವಾಮೀಜಿಗಳ ಕಾರು ಡಿಕ್ಕಿ ಹೊಡೆದು ದಂಪತಿ ಮೃತಪಟ್ಟಿರುವ ಭಯಾನಕ ದೃಶ್ಯ ಹತ್ತಿರದ ಪೆಟ್ರೋಲ್ ಬಂಕ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ ಸಾಯಂಕಾಲ ಕಲಬುರಗಿಯಿಂದ ಜೇವರ್ಗಿ ಕಡೆಗೆ ಹೊರಟಿದ್ದ ಯಡ್ರಾಮಿ ತಾಲೂಕಿನ ಯಲಗೋಡ ಮಠದ ಗುರುಲಿಂಗ ಸ್ವಾಮೀಜಿ ಅವರ ಕಾರು ವೇಗವಾಗಿ ಬಂದು ರಸ್ತೆ ಬದಿಯಲ್ಲಿ ನಡೆದು ಹೊರಟಿದ್ದ ದಂಪತಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಚಾಲಕನ ನಿರ್ಲಕ್ಷದಿಂದ ಅಪಘಾತ ನಡೆದಿರೋದು ಈ ವಿಡಿಯೋದಲ್ಲಿ ಸೆರೆಯಾಗಿದೆ.
TAGGED:
the road accident CCTV video