ಸುರಪುರದಲ್ಲಿ ಮಳೆ ಹಾನಿಗೊಳಗಾದ ರಸ್ತೆ ಪರಿಶೀಲಿಸಿದ ತಹಶೀಲ್ದಾರ್ - damaged roads of surapur
🎬 Watch Now: Feature Video
ಸುರಪುರ: ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ಅನೇಕ ರಸ್ತೆಗಳು ಹಾನಿಗೊಳಗಾಗಿವೆ. ಹೀಗಾಗಿ ಈ ರಸ್ತೆಯಲ್ಲಿ ಜನ, ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಹಳ್ಳ-ಕೊಳ್ಳಗಳು ತುಂಬಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಸಿದ್ದಾಪುರ ಮಾರ್ಗವಾಗಿ ಶಹಾಪುರಕ್ಕೆ ತಲುಪುವ ಜಿಲ್ಲಾ ಹೆದ್ದಾರಿಯೂ ಸಹ ಕಿತ್ತು ಹೋಗಿದೆ. ಇದನ್ನರಿತ ಜಿಲ್ಲಾಡಳಿತ ಕೂಡಲೇ ತಾಲೂಕಿನಲ್ಲಿ ಹಾನಿಗೀಡಾದ ರಸ್ತೆಗಳ ವರದಿ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ನಿಂಗಣ್ಣ ಬಿರಾದರ್ ಅವರು ಬೆಳಿಗ್ಗೆಯಿಂದಲೇ ರಸ್ತೆಗಳ ಪರಿಶೀಲನೆ ನಡೆಸುತ್ತಿದ್ದಾರೆ.