ಮಡಿಕೇರಿ ನಗರದಲ್ಲಿ ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ.. - ಮುತ್ತಪ್ಪ ದೇವಾಲಯದ ಉತ್ಸವ ಸಮಿತಿ
🎬 Watch Now: Feature Video
ನಗರದಲ್ಲಿ ಇಂದು ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ ಮನೆ ಮಾಡಿತ್ತು. ನಗರದ ಮುತ್ತಪ್ಪ ದೇವಾಲಯದ ಉತ್ಸವ ಸಮಿತಿ ವತಿಯಿಂದ ವಿಶೇಷ ಪೂಜೆ, ಪ್ರಾರ್ಥನೆಗಳು ಜರುಗಿದವು. ದೇವಾಲಯವನ್ನು ತಳಿರು-ತೋರಣ, ಹೂವಿನೊಂದಿಗೆ ಸಿಂಗರಿಸಲಾಗಿತ್ತು. ಸಾಲಿನಲ್ಲಿ ನಿಂತ ಭಕ್ತರು ವಿವಿಧ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ವಿಶೇಷವಾಗಿ ಮುತ್ತಪ್ಪನ್ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯು ನಡೆಯಿತು. ಇದೆ ವೇಳೆ ದೇವಾಲಯದ ಆವರಣದಲ್ಲಿ ಹರಕೆಯಾಗಿ ನವ ಜೋಡಿಗಳ ಮದುವೆ ಕಾರ್ಯವು ನೆರವೇರಿತು. ಕೊರೊನಾ ಹಿನ್ನೆಲೆ ದೇವಾಲಯದಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು.