ಶತಮಾನೋತ್ಸವ ಹೊಸ್ತಿಲಲ್ಲಿ ಸಂತ ಆ್ಯಗ್ನೆಸ್ ಕಾಲೇಜು - St. Agnes College, celebrating its centenary
🎬 Watch Now: Feature Video
ಮಂಗಳೂರಿನ ಸಂತ ಆ್ಯಗ್ನೆಸ್ ಕಾಲೇಜು 2020ಕ್ಕೆ ಶತಮಾನೋತ್ಸವ ಆಚರಿಸಿಕೊಳ್ಳಲಿದ್ದು, ಇದರ ಅಂಗವಾಗಿ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಹಳೇ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಹರ್ಷ ವ್ಯಕ್ತಪಡಿಸಿದರು. 'ಆ್ಯಗ್ನೇಶಿಯನ್ ರನ್ ಎಂಬ ಸ್ಪರ್ಧಾ ಕೂಟದಲ್ಲಿ ಮ್ಯಾರಥಾನ್, ಕಾಲ್ನಡಿಗೆ, ಸೈಕಲ್ ಜಾಥಾ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬೆಳಗ್ಗೆ 6 ಗಂಟೆಗೆ ಸಂತ ಆ್ಯಗ್ನೆಸ್ ಕಾಲೇಜಿನಿಂದ ಆರಂಭವಾದ ಓಟ ಬೆಂದೂರ್ ವೆಲ್, ಬಲ್ಮಠ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆ್ಯಗ್ನೆಸ್ ಕಾಲೇಜು ತಲುಪಿತು. ಸುಮಾರು ಮೂರೂವರೆ ಕಿ.ಮೀ. ದೂರ ಹೊಂದಿದ್ದು, ಸ್ಪರ್ಧಾಳುಗಳು ಚಳಿಯಲ್ಲಿ ಮೈಕೊಡವಿ ಓಡಿದರು. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು.