ಅಭಿಮಾನಿಗಳೊಂದಿಗೆ ಹೆಜ್ಜೆ ಹಾಕಿದ ನಟ ಶ್ರೀಮುರುಳಿ - srimurali in shivamogga
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5004314-thumbnail-3x2-sanju.jpg)
ಭರಾಟೆ ಚಿತ್ರ 25 ದಿನ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಹೆಚ್.ಪಿ.ಸಿ ಚಿತ್ರಮಂದಿರಕ್ಕೆ ಆಗಮಿಸಿದ ನಟ ಶ್ರೀಮುರುಳಿ ಅಭಿಮಾನಿಗಳಿಗಾಗಿ ತಮ್ಮ ಕಾರ್ ಮೇಲೆ ಹತ್ತಿ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಮುರುಳಿ ಅವರನ್ನ ನೋಡಲು ಹಾಗೂ ಸೆಲ್ಪಿಗಾಗಿ ಮುಗಿಬಿದ್ದರು. ಒಟ್ಟಾರೆಯಾಗಿ ಚಿತ್ರದ ಯಶಸ್ಸಿಗೆ ಕಾರಣರಾದ ಅಭಿಮಾನಿಗಳಿಗೆ ಶ್ರೀಮುರಳಿ ಧನ್ಯವಾದ ತಿಳಿಸಿದರು. ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಹಾಗಾಗಿ ಚಿತ್ರವನ್ನು ಗೆಲ್ಲಿಸಿದ ರಾಜ್ಯದ ಎಲ್ಲಾ ಅಭಿಮಾನಿಗಳಿಗೂ ನಾನು ಚಿರಋಣಿ ಎಂದರು.