ತಮ್ಮೂರಿಗೆ ಕೊರೊನಾ ಬಾರದಿರಲಿ ಎಂದು ದೇವರ ಮೊರೆ ಹೋದ ಗ್ರಾಮಸ್ಥರು - ತಮ್ಮ ಊರಿಗೆ ಕೊರೊನಾ ಬಾರದಿರಲಿ ಎಂದು ದೇವರ ಮೊರೆ ಹೋದ ಥಣಿ ತಾಲೂಕಿನ ಶಿರಹಟ್ಟಿ ಗ್ರಾಮಸ್ಥರು
🎬 Watch Now: Feature Video
ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೊರೊನಾ ತಮ್ಮ ಗ್ರಾಮದ ಜನರಿಗೆ ಯಾವುದೇ ತೊಂದರೆ ಮಾಡದಿರಲಿ ಎಂದು ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ಕೊಡದಲ್ಲಿ ಕೃಷ್ಣಾ ನದಿಯಿಂದ ನೀರು ತಂದು ದೇವರಿಗೆ ಜಲಾಭಿಷೇಕ ಮಾಡಿ, ಪೂಜೆ ಸಲ್ಲಿಸುತ್ತಿದ್ದಾರೆ. ನಾಲ್ಕು ಕಿಲೋಮೀಟರ್ ದೂರದ ನದಿಯಿಂದ ನೀರನ್ನು ಹೊತ್ತು ತಂದು, ಗ್ರಾಮದಲ್ಲಿ ಇರುವಂತಹ ದರ್ಗಾ, ದೇವಸ್ಥಾನಗಳಿಗೆ ಜಲಾಭಿಷೇಕ ಮಾಡುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ. ಶತಮಾನಗಳ ಹಿಂದೆ ಗ್ರಾಮಗಳಿಗೆ ಮಹಾಮಾರಿ ರೋಗಗಳು ಕಾಣಿಸಿದಾಗ ಐದು ವಾರಗಳ ಕಾಲ ಒಂದು ದಿನವನ್ನು ನಿಗದಿಪಡಿಸಿ ದೇವರಿಗೆ ಜಲಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಇದರಿಂದಾಗಿ ಊರಲ್ಲಿ ರೋಗಗಳು ಕಡಿಮೆಯಾಗುತ್ತಿದ್ದವು. ಹಾಗಾಗಿ ನಾವು ಕೂಡಾ ಅದನ್ನು ಪಾಲಿಸುತ್ತಿದ್ದೇವೆ ಎಂದು ಗ್ರಾಮಸ್ಥೆ ದಾನವ್ವ ನಂದಗಾಂವ್ ಹೇಳಿದರು.
TAGGED:
Special worship to the deity