ಪುತ್ರಿಯ ವಿವಾಹಕ್ಕೆ 112 ಪುಟಗಳ ಕರೆಯೋಲೆ ಮಾಡಿ ಹಂಚಿದ ತಂದೆ!- ಏನುಂಟು ಏನಿಲ್ಲ - ಇದು ಸಾಹಿತ್ಯದ ಗಂಟು!! - ದಾಖಲೆಯ ವಿವಾಹ ಆಮಂತ್ರಣ ಪತ್ರಿಕೆ
🎬 Watch Now: Feature Video
ವಿವಾಹ ಎಂಬುದು ಹೆಣ್ಣು - ಗಂಡಿನ ಭಾವನಾತ್ಮಕ ಬೆಸುಗೆ, ವಧು-ವರರ ಹೊಸಬಾಳಿನ ಪುಸ್ತಕಕ್ಕೆ ಮುನ್ನುಡಿ. ಎರಡೂ ಕುಟುಂಬಗಳ ನಡುವೆ ನಂಟು ಬೆಳೆಸಿ, ಬಾಂಧವ್ಯ ಗಟ್ಟಿಗೊಳಿಸುವ ವಿವಾಹ ಪದ್ಧತಿಯ ಒಂದು ವಿಶಿಷ್ಟ ಕಾರ್ಯಕ್ರಮ. ಇದರ ಪ್ರಮುಖ ಆಕರ್ಷಣೆ ಆಮಂತ್ರಣ ಪತ್ರಿಕೆ. ಹೀಗಾಗಿ ಇಲ್ಲೊಬ್ಬರು ತಂದೆ ಮಗಳ ಮದುವೆಗೆ ಎಂದೇ ಪುಸ್ತಕದ ರೂಪದಲ್ಲಿ ಇನ್ವಿಟೇಷನ್ ಮಾಡಿಸಿ ದಾಖಲೆ ಬರೆದಿದ್ದಾರೆ.