ಡೊಳ್ಳು ಕುಣಿತದವರೊಂದಿಗೆ ಸ್ಪೀಕರ್ ಕಾಗೇರಿ ಗಿಲಿಗಚ್ಚಿ ಹಿಡಿದು ಸ್ಟೆಪ್​... ವಿಡಿಯೋ - ಡೊಳ್ಳು ಕುಣಿತದವರೊಂದಿಗೆ ಸ್ಪೀಕರ್ ಕಾಗೇರಿ ಡ್ಯಾನ್ಸ್​

🎬 Watch Now: Feature Video

thumbnail

By

Published : Feb 9, 2022, 1:40 AM IST

ಶಿರಸಿ ತಾಲೂಕಿನ ಬರೂರಿನ ಶ್ರೀ ಲಕ್ಷ್ಮೀ ನರಸಿಂಹ ದೇವರ ನೂತನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಡೊಳ್ಳು ಕುಣಿತದ ತಂಡದವರೊಂದಿಗೆ ಹೆಜ್ಜೆ ಹಾಕಿ ಗಿಲಿಗಚ್ಚಿಯನ್ನು ಬಾರಿಸಿದ್ದು, ಎಲ್ಲರ ಗಮನ ಸೆಳೆಯಿತು. ಕಳೆದ 9 ತಿಂಗಳಲ್ಲಿ ನಿರ್ಮಾಣವಾಗಿರುವ ನೂತನ ದೇವಾಲಯದಲ್ಲಿ ಲಕ್ಷ್ಮೀ ನರಸಿಂಹ ದೇವರ ನೂತನ ವಿಗ್ರಹವನ್ನು ವೈದಿಕ ಪ್ರಮುಖರ ನೇತೃತ್ವದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು. ನೂತನ ವಿಗ್ರಹವನ್ನು ಅಲಂಕರಿಸಿ, ಆರತಿಯೊಂದಿಗೆ ಸಲ್ಲಿಸಲಾಯಿತು. ನಂತರ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಯಿತು. ಈ ಮೊದಲು ಬರೂರಿನ ವಿಶೇಷ ಕಲೆಯಾದ ಸಾಂಪ್ರದಾಯಿಕ ಡೊಳ್ಳು ಕುಣಿತವನ್ನು ಪ್ರದರ್ಶನ ಮಾಡಲಾಯಿತು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಡೊಳ್ಳು ಕುಣಿತದ ತಂಡದವರೊಂದಿಗೆ ಹೆಜ್ಜೆ ಹಾಕಿ, ಗಿಲಿಗಚ್ಚಿಯನ್ನು ಬಾರಿಸಿ ಸಂಭ್ರಮಿಸಿದರು. ಇದೀಗ ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಪೀಕರ್ ಕಾಗೇರಿ ಅವರ ಸರಳತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.